More

    ಡಿವೋರ್ಸ್​ ಆದ ತಕ್ಷಣವೇ ಮರು ಮದುವೆಯಾಗಬಹುದಾ? ಕಾನೂನು ಏನು ಹೇಳಿದೆ ನೋಡಿ…

    ಡಿವೋರ್ಸ್​ ಆದ ತಕ್ಷಣವೇ ಮರು ಮದುವೆಯಾಗಬಹುದಾ? ಕಾನೂನು ಏನು ಹೇಳಿದೆ ನೋಡಿ...ನಾನು ನನ್ನ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ನನ್ನ ಪೂರ್ವ ಪತಿ ಅಪೀಲು ಹಾಕುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಒಬ್ಬ ಹುಡುಗ ನನಗಾಗಿ ಕಾಯ್ತಾ ಇದ್ದಾನೆ. ಅವನ ಜೊತೆ ಮದುವೆ ಆಗ ಬೇಕಿದೆ. ನಾನು ಎಷ್ಟು ದಿನ ಕಾಯ ಬೇಕು?

    ಉತ್ತರ:- ಹಿಂದೂ ವಿವಾಹ ಕಾಯ್ದೆಯ ಕಲಂ 15ರಂತೆ , ವಿಚ್ಛೇದನದ ಆದೇಶ ಆದ ನಂತರ , ಆ ಆದೇಶದ ಮೇಲೆ ಮೇಲ್ಮನವಿ (ಅಪೀಲ್​) ಹಾಕಲು ಇರುವ, ಅಪೀಲಿನ ಗಡುವು ತೀರುವವರೆಗೆ ನೀವು ಮರುಮದುವೆ ಆಗುವಂತಿಲ್ಲ.

    ಹಾಗೂ ಒಂದು ವೇಳೆ ನಿಮ್ಮ ಪೂರ್ವ ಪತಿ ಅಪೀಲು ದಾಖಲು ಮಾಡಿದರೆ, ಆ ಅಪೀಲು ವಜಾ ಆಗುವವರೆಗೆ ನೀವು
    ಮರುಮದುವೆ ಆಗುವಂತಿಲ್ಲ. ಒಂದುವೇಳೆ ನಿಮ್ಮ ಪತಿ ನಿಗದಿತ ಕಾಲಮಿತಿಯ ಒಳಗೆ ಅಪೀಲೇ ದಾಖಲು ಮಾಡದೇ ಇದ್ದರೆ, ಆಗ ನೀವು ಮರುಮದುವೆ ಆಗಬಹುದು.

    ಯಾವುದಕ್ಕೂ ನೀವು ನಿಮ್ಮ ವಿಚ್ಛೇದನದ ಪ್ರಕರಣದ ಸಂಖ್ಯೆಯನ್ನು ಹಾಕಿ, ಆ ಪ್ರಕರಣದ ಆದೇಶದ ಮೇಲೆ ಅಪೀಲು ದಾಖಲಾಗಿದೆಯೇ ಇಲ್ಲವೇ ಎನ್ನುವುದನ್ನು ಕಂಪ್ಯೂಟರಿನ ಸಹಾಯದಿಂದ ಪರೀಕ್ಷಿಸಿ , ಆ ನಂತರ ಮರುಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಕ್ಲಿಕ್ಕಿಸಿ.

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ತವರಿನಿಂದ ಮಹಿಳೆಗೆ ಬಂದಿರುವ ಆಸ್ತಿಯಲ್ಲಿ ಯಾವ ಮಕ್ಕಳಿಗೂ ಪಾಲು ಸಿಗಲ್ಲ

    ಗಂಡ ಬದುಕಿರುವಾಗಲೇ ಸ್ವಯಾರ್ಜಿತ ಆಸ್ತಿ ಕೇಳಬಹುದೆ? ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಹಕ್ಕಿವೆ?

    ಮಗುವಿಗಾಗಿ ಮರು ಮದ್ವೆಯಾದ್ರೆ ಇಬ್ಬರಿಗೂ ಮಕ್ಕಳಾದ್ವು- ಎರಡನೆ ಹೆಂಡ್ತಿ ಮಕ್ಕಳಿಗೆ ಆಸ್ತಿ ಸಿಗಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts