More

    ನೀನೂ ಬೇಡ, ಡಿವೋರ್ಸೂ ಕೊಡಲ್ಲ ಅಂತಿದ್ದಾಳೆ… ನನಗೇನು ಪರಿಹಾರವಿದೆ?

    ನೀನೂ ಬೇಡ, ಡಿವೋರ್ಸೂ ಕೊಡಲ್ಲ ಅಂತಿದ್ದಾಳೆ... ನನಗೇನು ಪರಿಹಾರವಿದೆ?ಪ್ರಶ್ನೆ: ನಾನು ಮೇ 2019ರಲ್ಲಿ ಮದುವೆ ಆದೆ. ಆರು ತಿಂಗಳು ಮಾತ್ರ ನನ್ನ ಹೆಂಡತಿ ನನ್ನ ಜೊತೆ ಇದ್ದಳು. ಆಮೇಲೆ ತವರಿಗೆ ಹೋದವಳು ಬರಲೇ ಇಲ್ಲ. ಕೇಳಿದರೆ ‘ನನಗೆ ನೀನು ಇಷ್ಟ ಇಲ್ಲ . ಒತ್ತಾಯ ಮಾಡಿ ಕರೆದುಕೊಂಡು ಹೋದರೆ ಸಾಯುತ್ತೇನೆ’ ಅಂತ ಹೆದರಿಸುತ್ತಾಳೆ.


    ಅವಳಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಇದೆ. ಅವರ ತಂದೆ ತಾಯಿಯೂ ನನ್ನ ಸಮಸ್ಯೆ ತಿಳಿಯುತ್ತಿಲ್ಲ. ಹೋಗಲಿ ವಿಚ್ಛೇದನ ಕೊಡು ಅಂದರೆ ಅದಕ್ಕೂ ಒಪ್ಪುತ್ತಿಲ್ಲ. ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರುಕೊಟ್ಟರೆ ಅಲ್ಲಿಗೂ ಬರಲಿಲ್ಲ. ಈಗ ಸುಮ್ಮ ಸುಮ್ಮನೆ ವರದಕ್ಷಿಣೆ ಬೇಡಿಕೆ ಮಾಡಿದೆ ಎಂದು ಹೇಳಿ ಲಾಯರ್ ನೋಟೀಸು ಕೊಟ್ಟಿದ್ದಾಳೆ. ನಾನು ಏನು ಮಾಡಬೇಕು ತಿಳಿಸಿ 

    ಉತ್ತರ: * ಮೊದಲಿಗೆ ಲಾಯರ್ ನೋಟಿಸಿಗೆ ಸರಿಯಾದ ಪ್ರತ್ಯುತ್ತರ ಕಳಿಸಿ.

    * ನಂತರ ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ, ನಿಮ್ಮ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು , ನಿಮ್ಮಿಬ್ಬರ ಮಧ್ಯೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ವ್ಯವಸ್ಥೆ ಮಾಡಲು ಕೇಳಿಕೊಳ್ಳಿ. ಕೇಂದ್ರದವರು ಇಬ್ಬರನ್ನೂ ಕರೆಯಿಸಿ , ಮಧ್ಯಸ್ಥಿಕೆಗಾರರ ಮೂಲಕ ಮಾತಾಡಲು ಅವಕಾಶ ಮಾಡಿಕೊಡುತ್ತಾರೆ. ಆಗ ರಾಜೀ ಸೂತ್ರಕ್ಕೆ ಬರಬಹುದು.

    * ಒಂದು ವೇಳೆ ನಿಮ್ಮ ಪತ್ನಿ ಯಾವುದಕ್ಕೂ ಒಪ್ಪದಿದ್ದರೆ, ನಿಮಗೆ ಹಂಡತಿ ಬೇಕು ಎನ್ನುವುದಾದರೆ ಆಗ ನೀವು ಅವಳ ವಿರುದ್ಧ “ ದಾಂಪತ್ಯ ಜೀವನದ ಹಕ್ಕುಗಳ ಪುನರ್ ಸ್ಥಾಪನೆಗೆ” ಪ್ರಕರಣ ದಾಖಲಿಸಿ. ಅಥವಾ, ನಿಮಗೆ ಆಕೆಯಿಂದ ವಿಚ್ಛೇದನ ಬೇಕಿದ್ದರೆ, ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ vijayavani.net ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ಗಂಡ ವಿಚಾರಣೆಗೆ ಬರದೇ ಡಿವೋರ್ಸ್​ ಅರ್ಜಿ ವಜಾ ಆದ್ರೆ ಮತ್ತೆ ಹಾಕ್ಬೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts