More

    ಬ್ಯಾಂಕ್‌ಗೆ ಕೋಟ್ಯಂತರ ರೂ. ವಂಚನೆ: ದಶಕಗಳ ಕಾಲ ನೆಮ್ಮದಿಯಿಂದಿದ್ದ ನೀರವ್‌ ಮೋದಿ ಮಾವನೂ ಎಸ್ಕೇಪ್‌!

    ನವದೆಹಲಿ: ಪಂಜಾಬ್‌ ನ್ಯಾಷನ್‌ ಬ್ಯಾಂಕ್‌ಗೆ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಉದ್ಯಮಿ ನೀರವ್‌ ಮೋದಿ ದೇಶದಿಂದ ಪರಾರಿಯಾಗಿದ್ದು ವರ್ಷಗಳೇ ಸಂದಿವೆ. ಈಗ ಅವರ ಮಾವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಕೂಡ ನಾಪತ್ತೆಯಾಗಿದ್ದಾರೆ!

    ಗೀತಾಂಜಲಿ ವಜ್ರದ ವ್ಯಾಪಾರ ಸಂಸ್ಥೆಯ ಮುಖ್ಯಸ್ಥರಾಗಿರುವ ಚೋಕ್ಸಿ (61) ಅವರಿಗೆ ಸಿಬಿಐ ಹಾಗೂ ಕಾನೂನು ಜಾರಿ ನಿರ್ದೇಶನಾಲಯ ಬಲೆ ಬೀಸಿವೆ.

    ಅತ್ತ ಸುಮಾರು 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದ ನೀರವ್​ ಮೋದಿ ಲಂಡನ್​ ಜೈಲಿನಲ್ಲಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ನ್ಯಾಯಾಲಯ ಆದೇಶ ನೀಡಿದೆ. ಇದರ ನಡುವೆಯೇ ಮೆಹುಲ್ ಚೋಕ್ಸಿ ನಾಪತ್ತೆಯಾಗಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ.

    ಆಂಟಿಗುವಾ ಪೌರತ್ವದ ಮೂಲಕ ಅಲ್ಲಿ ಆಶ್ರಯ ಪಡೆಯಲು ಚೋಕ್ಸಿ ಪ್ರಯತ್ನ ನಡೆಸಿದ್ದಾನೆ ಎಂಬ ವರದಿಗಳು ಆಂಟಿಗುವಾ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಅಲ್ಲಿಂದ ಚೋಕ್ಸಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

    ಚೋಸ್ಕಿ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ನನ್ನೊಂದಿಗೆ ಮಾತನಾಡಲು ಕುಟುಂಬಸ್ಥರು ಕರೆ ಮಾಡಿದ್ದಾರೆ. ಆಂಟಿಗುವಾ ಶೋಧ ಕಾರ್ಯ ನಡೆಸಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.
    2018ರ ಜನವರಿಯಲ್ಲಿ ಮೆಹುಲ್ ಚೋಸ್ಕಿ ಭಾರತ ಬಿಟ್ಟು ಪರಾರಿಯಾಗಿದ್ದರು. ಅದಕ್ಕೂ ಮುನ್ನ ತಾವು ಹೂಡಿಕೆ ಮಾಡುತ್ತೇವೆ ಎಂದು ಹೇಳಿ 2017ರಲ್ಲಿ ವೆಸ್ಟ್​​ ಇಂಡೀಸ್ ದ್ವೀಪ ರಾಷ್ಟ್ರಗಳಾದ ಆಂಟಿಗುವಾ ಮತ್ತು ಬರ್ಬುಡಾದ ಪೌರತ್ವ ಪಡೆದಿದ್ದಾರೆ. ಆತ ಪರಾರಿಯಾದ ಬಳಿಕ ಪಂಜಾಬ್ ಬ್ಯಾಂಕ್‌ ವಂಚನೆ ಬೆಳಕಿಗೆ ಬಂದಿತ್ತು.

    ಸನ್ನಿ ಲಿಯೋನ್‌ ತೊಟ್ಟ ಡ್ರೆಸ್‌ನ ಜಿಪ್‌ ಮೇಲೇರಿಸಲು ಮೇಕಪ್‌ಮೆನ್‌ ಹರಸಾಹಸ- ವಿಡಿಯೋ ವೈರಲ್‌

    ಹೆಚ್ಚಿಗೆ ಹಣ ವಸೂಲಿ- ದೂರು ನೀಡಿದ ಕಾರಣ ಸೋಂಕಿತನ ಸಾವಿಗೆ ಕಾರಣವಾದ ಆರೋಪ: ಆಸ್ಪತ್ರೆ ವಿರುದ್ಧ ಕೇಸ್‌

    ನೆಲಕ್ಕುರುಳಿದ ಕೇಬಲ್‌ ಕಾರ್‌: 14 ಮಂದಿ ಸಾವು- ಹಲವರ ಸ್ಥಿತಿ ಚಿಂತಾಜನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts