More

    ನೀರಜ್​ ತರಬೇತಿಗೆ ಏಳು ಕೋಟಿ ರೂ. ವೆಚ್ಚ: ಪ್ರಶ್ನೆ ಕೇಳುವವರಿಗೆ ಕೇಂದ್ರ ಬಿಚ್ಚಿಟ್ಟ ಲೆಕ್ಕ ಇಲ್ಲಿದೆ ನೋಡಿ…

    ನವದೆಹಲಿ: ಒಲಿಂಪಿಕ್​ನಲ್ಲಿ ಚಿನ್ನ ಗೆದ್ದು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಯುವಕ ನೀರಜ್​ ಚೋಪ್ರಾ. ಜಾವಲಿನ್​ ಥ್ರೋನಲ್ಲಿ ಐತಿಹಾಸಿಕ ದಾಖಲೆ ಬರೆದ ಈ ಯುವಕನಿಗೆ ಮೂಲೆಮೂಲೆಗಳಿಂದಲೂ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

    ನೀರಜ್‌ ಚೋಪ್ರಾ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನಕ್ಕೆ ಗುರಿಯಿಟ್ಟರು. ಇಲ್ಲಿಯವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ ನೀರಜ್‌ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ‌.

    ಇಂಥದ್ದೊಂದು ಸಾಧನೆ ಮಾಡಲು ನೀರಜ್​ ಅದೆಷ್ಟೋ ವರ್ಷ ಪಟ್ಟಿರುವ ಶ್ರಮಕ್ಕೆ ಲೆಕ್ಕವೇ ಇಲ್ಲ. ಇಡೀ ಜಗತ್ತಿನ ಕ್ರೀಡಾಪಟುಗಳನ್ನು ಹಿಂದಕ್ಕೆ ಹಾಕಿ ಚಿನ್ನ ಗೆಲ್ಲುವುದು ಎಂದರೆ ಸುಲಭದ ಮಾತಲ್ಲ, ಆದರೆ ಆ ಸಾಧನೆ ಮಾಡಿದ ಹುಡುಗ ನೀರಜ್​ ಚೋಪ್ರಾ.

    ಆದರೆ ಇದೇ ವೇಳೆ ನೀರಜ್​ಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಒಟ್ಟೂ ಖರ್ಚು ಮಾಡಿರುವ ಮೊತ್ತವನ್ನು ಕೇಳಿದರೆ ಬಹುಶಃ ನೀವು ನಂಬಲಾರಿರಿ. ಸರ್ಕಾರ ಈ ಯುವಕನಿಗೆ ತರಬೇತಿ ನೀಡಿದೆಯೆ? ಸ್ವಲ್ಪನಾದರೂ ಖರ್ಚು ಮಾಡಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಜನಸಾಮಾನ್ಯರು ಕೇಳುತ್ತಿದ್ದರು.

    ಇದಕ್ಕೆ ಉತ್ತರವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಟ್ವೀಟ್​ ಮಾಡುವ ಮೂಲಕ ಉತ್ತರ ನೀಡಿದೆ. ಕೇಂದ್ರ ಸರ್ಕಾರ ಒಟ್ಟಾರೆಯಾಗಿ ಏಳು ಕೋಟಿ ರೂಪಾಯಿಗಳನ್ನು ನೀರಜ್​ಗಾಗಿ ಖರ್ಚು ಮಾಡಿದೆ. ಜಾವಲಿನ್​ ಥ್ರೋ ತರಬೇತಿಯನ್ನು ನೀರಜ್​ಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಕೊಡಿಸಲಾಗಿದೆ ಎಂದು ಅದು ಹೇಳಿದೆ.

    ನೀರಜ್​ಗೆ 450 ದಿನ ವಿದೇಶದಲ್ಲಿ, 1,167 ದಿನ ಪಟಿಯಾಲಯದಲ್ಲಿ ತರಬೇತಿ ನೀಡಲಾಗಿದೆ. ಅವರಿಗಾಗಿ 177 ಜಾವೆಲಿನ್‌ಗಳನ್ನು ಕೇಂದ್ರ ಸರ್ಕಾರ ಖರೀದಿಸಿದೆ. ಜಾವೆಲಿನ್‌ ಜತೆಗೆ 74.28 ಕೋಟಿರೂ. ಮೌಲ್ಯದ ಜಾವೆಲಿನ್‌ ಎಸೆಯುವ ಯಂತ್ರವನ್ನು ಖರೀದಿ ಮಾಡಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

    VIDEO: ಭಾರತಕ್ಕೆ ಚಿನ್ನ, ನಿಜವಾಯ್ತು ಮೋದಿ ಭವಿಷ್ಯ- ಜಾಲತಾಣದಲ್ಲಿ ವಿಡಿಯೋ ವೈರಲ್‌

    ತಾಲಿಬಾನ್​ ವಶಕ್ಕೆ ಸಂಪೂರ್ಣ ಅಫ್ಘಾನ್​ : ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ಶರಣಾದ ಸರ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts