More

    ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ- ಪೊಲೀಸರನ್ನೇ ಯಾಮಾರಿಸಿದ್ದ ಟಿಕ್​ಟಾಕ್​ ಸುಂದರಿ- ಇಲ್ಲಿವೆ ಈಕೆಯ ಕಲರ್​ಫುಲ್​ ವಿಡಿಯೋ…

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ವರದಿಯಾಗುತ್ತಲೇ ಇದೆ. ಇಂಥದ್ದೊಂದು ಜಾಲವನ್ನು ಭೇದಿಸಲು ಹೊರಟ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ ಟಿಕ್​ಟಾಕ್​ ಸುಂದರಿ.

    ವೇಶ್ಯಾವಾಟಿಕೆ ನಡೆಸುತ್ತಿದ್ದ ಕಟ್ಟಡದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಅದರ ಕಿಂಗ್​ಪಿನ್ ಆಗಿರುವ ಈಕೆಯನ್ನು ಬಂಧಿಸಿದ್ದಾಳೆ. ಈಕೆಯ ಜತೆಗೆ ವೇಶ್ಯಾವಾಟಿಕೆ ದಂಧೆಯಲ್ಲಿ ಸಹಕರಿಸುತ್ತಿದ್ದ ಮತ್ತೋರ್ವನನ್ನೂ ಬಂಧಿಸಲಾಗಿದೆ.

    ಬಂಧಿತ ಮಹಿಳೆಯನ್ನು ಸುಮಾ ಎಂದು ಗುರುತಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಈ ಮೊದಲು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಈಕೆ ಸಿಕ್ಕಿಬಿದ್ದಿದ್ದಳು. ಆದರೆ ಎಷ್ಟು ಮುಗ್ಧೆಯಂತೆ ಈಕೆ ನಟನೆ ಮಾಡಿದಳು ಎಂದರೆ ಪೊಲೀಸರನ್ನೇ ಯಾಮಾರಿಸಿಬಿಟ್ಟಿದ್ದಳು. ಈಕೆಯನ್ನು ಆ ಜಾಗದಲ್ಲಿ ಪೊಲೀಸರು ಅರೆಸ್ಟ್​ ಮಾಡಿದ್ದಾಗ ನಾನು ಸಂತ್ರಸ್ತೆ, ಬಲವಂತದಿಂದ ನನ್ನನ್ನು ಈ ಜಾಲಕ್ಕೆ ತಳ್ಳಿದ್ದಾರೆ ಎಂದು ಹೇಳಿ ಕಣ್ಣಿರಿಟ್ಟಿದ್ದಳು.

    ಇದನ್ನು ನಂಬಿದ್ದ ಪೊಲೀಸರು ಆಕೆಯನ್ನು ಸಂತ್ರಸ್ತೆ ಎಂದು ಹೇಳಿಕೊಂಡಿದ್ದಳು. ಇದೀಗ ಬಂಧನವಾದಾಗಲೇ ಈಕೆಯ ಅಸಲಿಯತ್ತು ಹೊರಕ್ಕೆ ಬಂದಿದೆ. ಇವಳೇ ಇದರ ಕಿಂಗ್​ಪಿನ್​ ಎಂದು ತಿಳಿದಿದೆ.

    ಟಿಕ್ ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಸುಮಾ, ಸುಂದರಿಯಂತೆ ಮೇಕಪ್​ ಮಾಡಿಕೊಂಡು ಯುವಕರನ್ನು ತನ್ನ ದಂಧೆಗೆ ಸೆಳೆಯುತ್ತಿದ್ದಳು. ಸದ್ಯ ಮೇಟಗಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವಳ ಜತೆ ಸಿದ್ದರಾಜು ಎಂಬಾತನನ್ನೂ ಬಂಧಿಸಲಾಗಿದೆ.

    VIDEO: ನಿಮ್​ ದೇಹ,​ ಪ್ರಾಣ ಪ್ರೀತಿ ಆಗಿದ್ದೇ ಹೌದಾದ್ರೆ ಹೀಗೆ ಮಾಡ್ಬೇಡಿ… ಎಲ್ಲರೂ ಅದೃಷ್ಟವಂತರಾಗಿರಲ್ಲ…

    ಆಸ್ಪತ್ರೆಯಲ್ಲಿರೋ ದೀದಿ ಹತ್ರ ಇರೋದು ಒಂಬತ್ತೇ ಗ್ರಾಂ ಚಿನ್ನ, ಒಂದೇ ಒಂದು ಸ್ವಂತ ವಾಹನನೂ ಇಲ್ವಂತೆ!

    ಕಾಂಗ್ರೆಸ್​ಗೆ ಬಿಗ್​ ಶಾಕ್​! ಪಕ್ಷ ತೊರೆದ 170 ಶಾಸಕರು: ಸಮೀಕ್ಷೆಯಿಂದ ಬಯಲಾಯ್ತು ಸತ್ಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts