More

    ಆಗ ಅಜಯ್‌- ಶಿಖಾ… ಈಗ ಗೌತಮ್‌- ಅಶ್ವತಿ: ಇದು ಮೈಸೂರು- ಮಂಡ್ಯ ಜಿಲ್ಲಾಧಿಕಾರಿಗಳ ವಿಶೇಷತೆ!

    ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ನಗರಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್​ ಅವರ ನಡುವಿನ ಸಂಘರ್ಷಕ್ಕೆ ತೆರೆಬಿದ್ದ ಬೆನ್ನಲ್ಲೇ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಸುದ್ದಿ ಸದ್ದುಮಾಡುತ್ತಿದೆ.

    ಅದೇನೆಂದರೆ ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನಾಗಿ ನೇಮಕ ಮಾಡಿದ ನಂತರ ಮೈಸೂರಿನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಬಗಾದಿ ಗೌತಮ್‌ ಅವರನ್ನು ನೇಮಕ ಮಾಡಲಾಗಿದೆ. ವಿಶೇಷವೆಂದರೆ ಡಾ.ಬಗಾದಿ ಅವರು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಎಸ್‌.ಅಶ್ವತಿ ಅವರ ಪತಿ. ಈ ಹಿನ್ನೆಲೆಯಲ್ಲಿ ಪತಿ-ಪತ್ನಿ ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಯಾದಂತಾಗಿದೆ.

    ಈ ಮೊದಲು ಅಂದರೆ 2013ರಿಂದ 2016ರವರೆಗೆ ಸಿ.ಶಿಖಾ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಕೂಡ ಇದೇ ರೀತಿಯಾಗಿತ್ತು. ಅವರ ಪತಿ ಡಾ. ಅಜಯ್‌ ನಾಗಭೂಷಣ್‌ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದರು. ಈಗ ಇನ್ನೊಂದು ಬಾರಿ ಅದೇ ರೀತಿಯ ಬೆಳವಣಿಗೆ ನಡೆದಿರುವುದು ವಿಶೇಷವಾಗಿದೆ.

    2009ರ ಚ್ಯಾಚ್‌ನಲ್ಲಿ ಡಾ.ಬಗಾದಿ ಗೌತಮ್‌ ಐಎಎಸ್‌ ಪರೀಕ್ಷೆ ಪಾಸು ಮಾಡಿದರೆ, ಅಶ್ವತಿ ಅವರು 2013ರಲ್ಲಿ ಐಎಎಸ್‌ ಪರೀಕ್ಷೆ ತೇರ್ಗಡೆಯಾಗಿದ್ದು ಇವರದ್ದು ಪ್ರೇಮ ವಿವಾಹ. 2019ರ ಫೆ.14ರ ಪ್ರೇಮಿಗಳ ದಿನ ಇವರು ಮದುವೆಯಾಗಿದ್ದಾರೆ. ಡಾ.ಬಗಾದಿ ಗೌತಮ್‌ ಆಂಧ್ರಪ್ರದೇಶದವರಾದರೆ, ಅಶ್ವತಿ ಕೇರಳದವರು.

    ಹೇಳಿಬಿಡು ಹುಡುಗಿ… ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ… ಅದು ಒಲವಿನ ಸೂಜಿಯೋ, ಮೊಂಡಾದದ್ದೊ?

    ಮದುವೆಯಾಗ್ತಾನೆಂದು ಎಲ್ಲಾ ಕಳೆದುಕೊಂಡೆ…. ಅವನಿಗೆ ಗಲ್ಲು ಶಿಕ್ಷೆ ಕೊಡಿಸಿ… ಆತ್ಮಹತ್ಯೆಗೂ ಮುನ್ನ ಯುವತಿ ವಿಡಿಯೋ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts