More

    ಪದವೀಧರರಿಗೆ ಮೈಸೂರು ಮಾನಸಗಂಗೋತ್ರಿಯ ಭಾಷಾ ಕೇಂದ್ರದಿಂದ ಅರ್ಜಿ ಆಹ್ವಾನ: 38 ಹುದ್ದೆಗಳು ಖಾಲಿ

    ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ಭಾರತೀಯ ಭಾಷಾ ಕೇಂದ್ರ ಸಂಸ್ಥೆ (ಸೆಂಟ್ರಲ್​ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯನ್​ ಲಾಂಗ್ವೇಜ್​)ಯ ಶಾಸ್ತ್ರೀಯ ಕನ್ನಡ ಹಾಗೂ ತೆಲುಗು ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

    ಹುದ್ದೆ ವಿವರ
    – ಶಾಸ್ತ್ರೀಯ ಕನ್ನಡ ವಿಭಾಗ – 18
    * ಸೀನಿಯರ್​ ಫೆಲೊ- 5
    * ಅಸೋಸಿಯೇಟ್​ ಫೆಲೊ- 10
    * ಅಪ್ಪರ್​ ಡಿವಿಷನ್​ ಕ್ಲರ್ಕ್​ – 1
    * ಲೋವರ್​ ಡಿವಿಷನ್​ ಕ್ಲರ್ಕ್​ – 2

    ವಿದ್ಯಾರ್ಹತೆ: ಫೆಲೋ ಹುದ್ದೆಗೆ ಕನ್ನಡದಲ್ಲಿ (ಭಾಷೆ, ಸಾಹಿತ್ಯ ಮತ್ತು ಸಂಸತಿ) ಪಿಎಚ್​ಡಿ ಪದವಿ ಅಥವಾ ಕನ್ನಡ ಲಿಂಗ್ವಿಸ್ಟಿಕ್ಸ್​ಗೆ ಸಂಬಂಧಪಟ್ಟ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇದರೊಂದಿಗ ಸಂಶೋಧನಾ ಅನುಭವವನ್ನು ಕೇಳಲಾಗಿದೆ. ಕ್ಲರ್ಕ್​ ಹುದ್ದೆಗೆ ಯಾವುದೇ ಪದವಿ ಪಡೆದಿದ್ದು, ಅಕೌಂಟ್ಸ್​ನಲ್ಲಿ ವೃತ್ತಿ ಅನುಭವ ಕೇಳಲಾಗಿದೆ. ಇಂಗ್ಲಿಷ್​ ಹಾಗೂ ಕನ್ನಡ ಟೈಪಿಂಗ್​ ಹಾಗೂ ಕಂಪ್ಯೂಟರ್​ ಜ್ಞಾನ ಕೇಳಲಾಗಿದೆ. ಮೈಸೂರು ಕಾರ್ಯಕ್ಷೇತ್ರವಾಗಿರಲಿದೆ.
    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 40 ರಿಂದ 60 ವರ್ಷ ನಿಗದಿಪಡಿಸಲಾಗಿದೆ.
    ವೇತನ: ಸೀನಿಯರ್​ ಫೆಲೋಗೆ ಮಾಸಿಕ 41,000 ರೂ., ಅಸೋಸಿಯೇಟ್​ ಫೆಲೋಗೆ ಮಾಸಿಕ 37,000 ರೂ., ಅಪ್ಪರ್​ ಕ್ಲರ್ಕ್​ಗೆ 27,200, ಲೋವರ್​ ಕ್ಲರ್ಕ್​ಗೆ 21,200 ರೂ. ವೇತನ ನಿಗದಿಪಡಿಸಲಾಗಿದೆ.
    ಅಧಿಸೂಚನೆಗೆ: https://bit.ly/3CBBQUy


    – ತೆಲುಗು ವಿಭಾಗ – 20
    *ಪ್ರಾಜೆಕ್ಟ್​ ಡೈರೆಕ್ಟರ್​ – 1
    * ಸೀನಿಯರ್​ ಫೆಲೊ- 5
    * ಅಸೋಸಿಯೇಟ್​ ಫೆಲೊ- 10
    * ಆಫೀಸ್​ ಸೂಪರಿಟೆಂಡೆಂಟ್​-1 * ಜೂ.ಅಕೌಂಟ್​ ಆಫೀಸರ್​ – 1 * ಅಪ್ಪರ್​ ಹಾಗೂ ಲೋವರ್​ ಡಿವಿಷನ್​ ಕ್ಲರ್ಕ್​ -2

    ವಿದ್ಯಾರ್ಹತೆ: ಪ್ರಾಜೆಕ್ಟ್​ ಡೈರೆಕ್ಟರ್​ ಹಾಗೂ ಫೆಲೋಗೆ ತೆಲುಗು ಭಾಷೆ, ಸಂಸತಿ, ಸಾಹಿತ್ಯದಲ್ಲಿ ಡಾಕ್ಟೋರಲ್​ ಪದವಿ ಹಾಗೂ ಉಳಿದ ಹುದ್ದೆಗಳಿಗೆ ಯಾವುದೇ ಪದವಿ ಕೇಳಲಾಗಿದೆ. ಆಂಧ್ರಪ್ರದೇಶದ ನೆಲ್ಲೂರು ಕಾರ್ಯಕ್ಷೇತ್ರವಾಗಿರಲಿದೆ.
    ವಯೋಮಿತಿ: ಹುದ್ದೆಗೆ ಅನುಗುಣವಾಗಿ ಗರಿಷ್ಠ 40 – 60 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
    ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 21,200 ರೂ. ನಿಂದ 70,000 ರೂ. ವೇತನ ಇದೆ. ಅಧಿಸೂಚನೆಗೆ: https://bit.ly/3vYTOPl


    ಅರ್ಜಿ ಸಲ್ಲಿಸಲು ಕೊನೇ ದಿನ: 29.3.2022
    ಮಾಹಿತಿಗೆ: http://www.ciil.org

    ಕ್ರೀಡಾ ಪ್ರಾಧಿಕಾರದಲ್ಲಿದೆ 28 ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು: ಎರಡು ಲಕ್ಷ ರೂ.ವರೆಗೆ ಸಂಬಳ

    ವಿವಿಧ ಪದವೀಧರರಿಗೆ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿವೆ ಉದ್ಯೋಗ: 14 ಪೋಸ್ಟ್​ಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts