More

    ವಿಶ್ವದ ಅತಿ ದೊಡ್ಡ ದೇವಾಲಯ ‘ವಿರಾಟ್‌ ರಾಮಾಯಣ’ಕ್ಕೆ ಜಮೀನು ದಾನ ನೀಡಿದ ಮುಸ್ಲಿಂ ಕುಟುಂಬ

    ಪಟ್ನಾ: ಹಲವೆಡೆ ಹಿಂದೂ- ಮುಸ್ಲಿಮರ ನಡುವೆ ಸಾಮರಸ್ಯ ಕೆದಡುವ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಬಿಹಾರದಲ್ಲಿ ಅಮೋಘ ಕಾರ್ಯವೊಂದು ನಡೆದಿದೆ. ಬಿಹಾರ್‌ನ ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯಕ್ಕೆ ಮುಸ್ಲಿಂ ಕುಟುಂಬವೊಂದು ಭೂಮಿಯನ್ನು ದಾನ ಮಾಡಿದೆ.

    ವಿರಾಟ್ ರಾಮಾಯಣ ಮಂದಿರ ಇದಾಗಿದ್ದು, ಇದರ ನಿರ್ಮಾಣಕ್ಕೆ ರೂ.2.5 ಕೋಟಿ ಮೌಲ್ಯದ ಭೂಮಿಯನ್ನು ಗುವಾಹಟಿ ಮೂಲದ ಪೂರ್ವ ಚಂಪಾರಣ್‌ನ ಉದ್ಯಮಿ ಇಷ್ತಿಯಾಕ್ ಅಹ್ಮದ್ ಖಾನ್ ನೀಡಿದ್ದಾರೆ.

    ಯೋಜನೆಯನ್ನು ಕೈಗೆತ್ತಿಕೊಂಡಿರುವ ಪಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್‌ನ ಮುಖ್ಯಸ್ಥ ಆಚಾರ್ಯ ಕಿಶೋರ್ ಕುನಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ. ತಮ್ಮ ಕುಟುಂಬಕ್ಕೆ ಸೇರಿದ ಭೂಮಿಯನ್ನು ಅವರು ದಾನವಾಗಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ವಿವರಣೆ ನೀಡಿದರು.

    ಮಹಾವೀರ ಮಂದಿರ ಟ್ರಸ್ಟ್ ಈ ದೇವಸ್ಥಾನ ನಿರ್ಮಾಣಕ್ಕಾಗಿ ಇದುವರೆಗೆ 125 ಎಕರೆ ಭೂಮಿಯನ್ನು ಪಡೆದುಕೊಂಡಿದೆ. ಟ್ರಸ್ಟ್ ಶೀಘ್ರದಲ್ಲೇ ಈ ಪ್ರದೇಶದಲ್ಲಿ ಇನ್ನೂ 25 ಎಕರೆ ಭೂಮಿಯನ್ನು ಪಡೆಯಲಿದೆ ಎಂದರು.

    ಅಂದಹಾಗೆ ವಿರಾಟ್ ರಾಮಾಯಣ ಮಂದಿರವು 215 ಅಡಿ ಎತ್ತರವಿರುವ ಕಾಂಬೋಡಿಯಾದ 12 ನೇ ಶತಮಾನದ ವಿಶ್ವಪ್ರಸಿದ್ಧ ಅಂಕೋರ್ ವಾಟ್ ಸಂಕೀರ್ಣಕ್ಕಿಂತ ಎತ್ತರವಾಗಿದೆ. 500 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ, ಪೂರ್ವ ಚಂಪಾರಣ್‌ನಲ್ಲಿರುವ ಸಂಕೀರ್ಣವು ಎತ್ತರದ ಗೋಪುರಗಳೊಂದಿಗೆ 18 ದೇವಾಲಯಗಳನ್ನು ಒಳಗೊಂಡಿರುತ್ತದೆ ಮತ್ತು ಅದರ ಶಿವ ದೇವಾಲಯವು ವಿಶ್ವದ ಅತಿದೊಡ್ಡ ಶಿವಲಿಂಗವನ್ನು ಹೊಂದಿರುತ್ತದೆ.

    15 ವರ್ಷವಾದ್ರೂ ಮುಗಿಯದ ಇದೆಂಥ ದ್ವೇಷನಪ್ಪಾ? ಜನಸಂದಣಿ ನಡುವೆ ಬಂದು 500ಕ್ಕೂ ಹೆಚ್ಚು ಸಲ ಕಚ್ಚಿದ ಹಾವು!

    ಕಣ್ಣೆದುರೇ ಹಿಂದೂಗಳ ಶವಗಳ ರಾಶಿ, ಇಸ್ಲಾಂ ಒಪ್ಪಿಕೊಳ್ಳಲು ಬೆದರಿಕೆ… ಆಗಲೇ ಸರ್ಕಾರ ಮನಸ್ಸು ಮಾಡಿದ್ದರೆ…

    ಪೊಲೀಸ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ… ಆ ದಾರಿಯಲ್ಲಿ ಬಂದು ನೋಡಿ… ಪುಟಾಣಿಯಿಂದ ಹೀಗೊಂದು ಕಂಪ್ಲೇಂಟ್‌!

    ಯುದ್ಧಭೂಮಿಯಿಂದ ನವೀನ್‌ ದೇಹ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತಂದ ಕ್ಲಿಷ್ಟಕರ ಸನ್ನಿವೇಶ ಬಿಚ್ಚಿಟ್ಟ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts