ಪೊಲೀಸ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ... ಆ ದಾರಿಯಲ್ಲಿ ಬಂದು ನೋಡಿ... ಪುಟಾಣಿಯಿಂದ ಹೀಗೊಂದು ಕಂಪ್ಲೇಂಟ್‌!

boy
Published on

ಚಿತ್ತೂರು (ಆಂಧ್ರಪ್ರದೇಶ): ಅಂಕಲ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ. ರಸ್ತೆ ಸರಿಯಿಲ್ಲ. ಶಾಲೆಗೆ ಹೋಗುವ ದಾರಿಯಲ್ಲಿ ಜೆಸಿಬಿಯಿಂದ ಅಗೆಯಲಾಗಿದೆ. ಟ್ರ್ಯಾಕ್ಟರ್​ಗಳನ್ನು ನಿಲ್ಲಿಸಿ ರಸ್ತೆ ಅಡ್ಡಗಟ್ಟಲಾಗಿದೆ. ನೀವು ಬಂದು ಅದನ್ನು ಸರಿಪಡಿಸಿ'..! ‌‌

ಹೀಗೊಂದು 6 ವರ್ಷದ ಪುಟಾಣಿಯೊಬ್ಬ ಪೊಲೀಸರಲ್ಲಿ ದೂರು ಸಲ್ಲಿಸಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮೇರ್​ನಲ್ಲಿ ನಡೆದಿದೆ. ಇಲ್ಲಿಯ ಆದರ್ಶ ಶಾಲೆಯ ಬಳಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ತನಗೆ ಶಾಲೆಗೆ ಹೋಗಲು ಮತ್ತು ಬರಲು ಕಿರಿಕಿರಿಯುಂಟಾಗಿದೆ. ಟ್ರಾಫಿಕ್​ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಈಗಲೇ ಎಲ್ಲಾ ಪೊಲೀಸರು ಸ್ಥಳಕ್ಕೆ ಬರಬೇಕು ಎಂದು ವಿದ್ಯಾರ್ಥಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದು, ಈ ಬಾಲಕನ ಮನವಿ ಕೇಳಿ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿದ್ಯಾರ್ಥಿ ಹೆಸರು ಕಾರ್ತಿಕೇಯನ್.​ ಬಾಲಕನ ಕಂಪ್ಲೇಂಟ್‌ ಪಡೆದುಕೊಂಡು ಪೊಲೀಸರು ಸಮಸ್ಯೆಯನ್ನು ಪರಿಹರಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಮಾತ್ರವಲ್ಲದೇ, ತಮ್ಮ ಫೋನ್​ ನಂಬರ್​ ಅನ್ನು ಬಾಲಕನಿಗೆ ನೀಡಿ ಏನಾದರೂ ಸಮಸ್ಯೆಯಾದರೆ ನನಗೆ ಕರೆ ಮಾಡು ಎಂದು ಹೇಳಿ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net