More

    ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಇದೆಂಥ ಪ್ರಶ್ನೆ? ಅಧಿಕಾರಿಗಳು ಡಿಬಾರ್​! ಎಲ್ಲಿಯೂ ಕೆಲಸ ಕೊಡದಂತೆ ಸೂಚನೆ

    ಭೋಪಾಲ್​ (ಮಧ್ಯಪ್ರದೇಶ): ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆಯಲ್ಲಿ ಕೇಳಿದ ಒಂದು ಪ್ರಶ್ನೆಯಿಂದ ಪ್ರಶ್ನೆ ಪತ್ರಿಕೆ ತಯಾರು ಮಾಡಿರುವ ಅಧಿಕಾರಿಗಳು ಡಿಬಾರ್​ ಆಗಿರುವ ಘಟನೆ ನಡೆದಿದೆ.

    ಮಧ್ಯಪ್ರದೇಶ ಲೋಕಸೇವಾ ಆಯೋಗದ ರಾಜ್ಯ ಸೇವೆ ಮತ್ತು ಅರಣ್ಯ ಸೇವೆಯ ಪೂರ್ವಭಾವಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಇಬ್ಬರು ಅಧಿಕಾರಿಗಳು ಕೆಲಸ ಕಳೆದುಕೊಂಡಿದ್ದಾರೆ. ಬೇರೆಲ್ಲೂ ಕೆಲಸ ನೀಡದಂತೆಯೂ ಎಂಪಿಪಿಎಸ್‌ಸಿ ಆದೇಶಿಸಿದೆ!

    ಅಷ್ಟಕ್ಕೂ ಅವರು ಕೇಳಿದ್ದ ಪ್ರಶ್ನೆ ಏನೆಂದರೆ, ‘ಭಾರತವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕೆ?’ ಎಂಬುದು! ಜೂನ್ 19 ಭಾನುವಾರದಂದು ನಡೆದ ಎಂಪಿಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಈ ಪ್ರಶ್ನೆಯನ್ನು ಪತ್ರಿಕೆಯಲ್ಲಿ ಕೇಳಲಾಗಿತ್ತು.

    ಪ್ರಶ್ನೆ- ಆಯ್ಕೆಯ ಉತ್ತರಗಳು ಹೀಗಿದ್ದವು:

    ಪ್ರಶ್ನೆ: ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಭಾರತ ನಿರ್ಧರಿಸಬೇಕೆ?
    ಆಯ್ಕೆ 1: ಹೌದು, ಇದು ಭಾರತಕ್ಕೆ ಬಹಳಷ್ಟು ಹಣವನ್ನು ಉಳಿಸುತ್ತದೆ
    ಆಯ್ಕೆ 2: ಇಲ್ಲ, ಅಂತಹ ನಿರ್ಧಾರವು ಇದೇ ರೀತಿಯ ಬೇಡಿಕೆಗಳ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ.

    ನಾಲ್ಕು ಉತ್ತರ ಆಯ್ಕೆಗಳೆಂದರೆ
    (ಎ) ಆಯ್ಕೆ 1 ಬಲವಾಗಿದೆ
    (ಬಿ) ಆಯ್ಕೆ 2 ಪ್ರಬಲವಾಗಿದೆ
    (ಸಿ) ಆಯ್ಕೆ 1 ಮತ್ತು 2 ಎರಡೂ ಪ್ರಬಲವಾಗಿವೆ
    (ಡಿ) ಆಯ್ಕೆ 1 ಮತ್ತು 2 ಎರಡೂ ಪ್ರಬಲವಾಗಿಲ್ಲ.

    ಈ ಪ್ರಶ್ನೆ ಭಾರಿ ವಿವಾದ ಹುಟ್ಟುಹಾಕಿದ್ದೂ ಅಲ್ಲದೇ ಪೇಪರ್​ ರೆಡಿ ಮಾಡಿದ ಇಬ್ಬರು ಅಧಿಕಾರಿಗಳನ್ನು ಡಿಬಾರ್ ಮಾಡಲಾಯಿತು. ಅಷ್ಟೇ ಅಲ್ಲದೇ, ಅವರಿಗೆ ಎಲ್ಲಿಯೂ ಕೆಲಸ ನೀಡಬಾರದು ಎಂದು ಎಂಪಿಪಿಎಸ್‌ಸಿ ಸೂಚಿಸಿದೆ. ಜತೆಗೆ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪಿಎಸ್ ಸಿ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಸೂಚನೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ. 

    ಮಧ್ಯಪ್ರದೇಶ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, “ಎಂಪಿಪಿಎಸ್‌ಸಿ ಪರೀಕ್ಷೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ವಿವಾದಿತ ಪ್ರಶ್ನೆಯನ್ನು ಕೇಳುವ ಸಂದರ್ಭ ಆಕ್ಷೇಪಾರ್ಹವಾಗಿದೆ. ವಿವಾದಾತ್ಮಕ ಪ್ರಶ್ನೆಯನ್ನು ಕೇಳಿದ ಪೇಪರ್ ಸೆಟ್ಟರ್‌ಗಳು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದವರು. ಭವಿಷ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇವರೇ ಸಿದ್ಧಪಡಿಸುವುದರಿಂದ ಅವರನ್ನು ಪಿಎಸ್‌ಸಿ ಡಿಬಾರ್ ಮಾಡಿದೆ ಎಂದಿದ್ದಾರೆ.

    ಇ.ಡಿಯಲ್ಲಿ 50 ಗಂಟೆ: ನನ್ನ ನೋಡಿ ಅಧಿಕಾರಿಗಳೇ ಬೆರಗಾದ್ರು, ಒಳಗೆ ಹೇಗಿತ್ತು ಗೊತ್ತಾ ಎಂದು ಬಣ್ಣಿಸಿದ ರಾಹುಲ್

    ಹೆಂಡ್ತಿ, ಅವಳ ಫ್ರೆಂಡ್ಸ್​ ಕಾಟ ತಾಳಲಾರೆ: ಡೆತ್​ನೋಟ್​ ಬರೆದು ಮಗನ ಜತೆ ಟ್ರಕ್​ಗೆ ಗುದ್ದಿಸಿಕೊಂಡು ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts