More

    VIDEO: ಹೋರಿ, ಟಗರು ಆಯ್ತು; ಈಗ ಕೋತಿಯ ಮುನಿಸು… ಸ್ವಲ್ಪದರಲ್ಲೇ ಬಚಾವಾದ ಶಾಸಕ ರೇಣುಕಾಚಾರ್ಯ

    ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ಪ್ರಾಣಿಗಳಿಗೆ ಅದೇಕೋ ಆಗಿಬರುವಂತೆ ಕಾಣಿಸುತ್ತಿಲ್ಲ. ಈ ಹಿಂದೆ ಹೋರಿ, ಅದಾದ ಮೇಲೆ ಟಗರಿನ ದಾಳಿಯಿಂದ ಶಾಸಕರು ಬಚಾವಾಗಿದ್ದರು.

    ಅದಾದ ನಂತರ ಇಂದು ಕೋತಿ ದಾಳಿ ಮಾಡಲು ಹೋಗಿತ್ತು. ಅದೃಷ್ಟವಶಾತ್​ ಅದರಿಂದಲೂ ಶಾಸಕರು ಬಚಾವಾಗಿದ್ದಾರೆ.

    ದಾವಣಗೆರೆಯ ತಾಲೂಕು ಕಚೇರಿ ಎದುರು ಕೋತಿ ಹಾವಳಿ ಹೆಚ್ಚಾಗಿದ್ದು, ಅದು ರೇಣುಕಾಚಾರ್ಯ ಅವರ ಮೇಲೆ ಎಗರಲು ರೆಡಿಯಾಗಿತ್ತು. 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿರುವ ಈ ಕೋತಿಗಳು ಇಂದು ಶಾಸಕರ ಮೇಲೆ ಉಗ್ರರೂಪ ತೋರಿಸಲು ಬಂದಿದ್ದವು.
    ಆದರೆ ಅದೃಷ್ಟವಶಾತ್​ ರೇಣುಕಾಚಾರ್ಯ ಅವರು ತಪ್ಪಿಸಿಕೊಂಡಿದ್ದಾರೆ.

    ಕೆಲ ತಿಂಗಳ ಹಿಂದೆ ಹೊನ್ನಾಳಿಯ ಸಂತೆಮೈದಾನದಲ್ಲಿ ನಡೆದಿದ್ದ ಟಗರು ಕಾಳಗದ ಉದ್ಘಾಟನೆ ಮಾಡಿದ್ದ ಶಾಸಕ ರೇಣುಕಾಚಾರ್ಯ ಅವರ ಮೈಮೇಲೆ ಟಗರು ತಿವಿಯಲು ಬಂದದ್ದು ನೆನಪಿರಬಹುದು, ಟಗರು ಕಾಳಗಕ್ಕೆ ಚಾಲನೆ ನೀಡಲು ಎರಡು ಟಗರುಗಳನ್ನು ಉತ್ತೇಜಿಸಲು ಹೋದಾಗ ಟಗರು ಅವರಿಗೇ ತಿವಿಯಲು ಬಂದಿತ್ತು. ಆ ಕ್ಷಣದಲ್ಲಿ ಹೇಗೋ ತಪ್ಪಿಸಿಕೊಳ್ಳುವಲ್ಲಿ ಶಾಸಕರು ಸಕ್ಸಸ್​ ಆಗಿದ್ದರು. ಅದಕ್ಕೂ ಮೊದಲು ಹೋರಿಯಿಂದಲೂ ಸ್ವಲ್ಪದಲ್ಲಿಯೇ ರೇಣುಕಾಚಾರ್ಯ ಅವರು ಬಚಾವಾಗಿದ್ದರೂ.

    ಇದನ್ನೂ ಓದಿ: ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

    ಇದೀಗ ಕೋತಿಯಿಂದಲೂ ತಪ್ಪಿಸಿಕೊಂಡಿದ್ದಾರೆ. ಈ ಭಾಗದ ಬಸ್ ನಿಲ್ದಾಣ, ಪುರಸಭೆ, ದುರ್ಗಿಗುಡಿ ಮುಂತಾದವುಗಳಲ್ಲಿ ಕೋತಿ ಕಾಟ ಹೆಚ್ಚಾಗಿದ್ದು ಜನರು ಭಯಭೀತರಾಗುವ ಸ್ಥಿತಿ ಬಂದಿದೆ. ಈಗ ಶಾಸಕರ ಮೇಲೆ ಅದು ಎಗರಲು ಮುಂದಾಗಿದ್ದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

    ಇದಾಗಲೇ ಅರಣ್ಯ ಅಧಿಕಾರಿಗಳು ಅವುಗಳನ್ನು ಹಿಡಿಯಲು ವಿಫಲ ಯತ್ನ ನಡೆಸಿದ್ದಾರೆ. ಅವು ತಪ್ಪಿಸಿಕೊಳ್ಳುತ್ತಿವೆ. ಬಲೆ ತೆಗೆದುಕೊಂಡು ಬಂದು ಹಿಡಿದರೂ ಸಾಧ್ಯವಾಗುತ್ತಿಲ್ಲ. ಕೋತಿಗೆ ಅರವಳಿಕೆ ಮದ್ದು ನೀಡಿದರೆ ಮಾತ್ರ ಅವುಗಳನ್ನು ಹಿಡಿಯಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು.

    ಮಧ್ಯಾಹ್ನ ಮುಹೂರ್ತ ಇದ್ರೆ, ವರ ಬಂದದ್ದು ರಾತ್ರಿ! ಕೋಪದಿಂದ ಬೇರೆಯವರನ್ನು ಮದ್ವೆಯಾದ ವಧು

    ಪಾಕ್​ನಲ್ಲಿ ಸಿಲುಕಿ ಭಾರತಕ್ಕೆ ಬಂದು ಪಾಲಕರಿಗಾಗಿ ಹುಡುಕುತ್ತಿರುವ ಮೂಕಿಯೊಬ್ಬಳ ಮನಕಲಕುವ ಕಥೆಯಿದು…

    ಧರಿಸಿರುವ ಒಳ ಉಡುಪು ಮಾರಿ ಸಂಪಾದಿಸುತ್ತಿದ್ದಾಳೆ ಈ ಬೆಡಗಿ! ತುದಿಗಾಲಲ್ಲಿ ನಿಂತಿರೋ 20 ಸಾವಿರ ಗ್ರಾಹಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts