More

    ಮೊಬೈಲ್‌ ಖರೀದಿಗೆ ಬಾಲಕಿ ಮಾರಿದಳು 12 ಮಾವಿನಹಣ್ಣು – ಸಿಕ್ಕಿದ್ದು 1.20 ಲಕ್ಷ ರೂ!

    ಜಾರ್ಖಂಡ್‌: ಪ್ರಯತ್ನದ ಜತೆಗೆ ಅದೃಷ್ಟವೂ ಇದ್ದರೆ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಈ ಪುಟ್ಟ ಬಾಲಕಿಯೇ ಸಾಕ್ಷಿ. ಆನ್‌ಲೈನ್‌ ಕ್ಲಾಸ್‌ಗೆ ಸ್ಮಾರ್ಟ್‌ಫೋನ್‌ ಖರೀದಿಸಲು ದುಡ್ಡಿಲ್ಲದೇ, ಶಾಲೆಯನ್ನು ತಪ್ಪಿಸಬೇಕಾದ ಆತಂಕದಲ್ಲಿಯೇ ಮಾವಿನ ಹಣ್ಣಿನ ಮಾರಾಟಕ್ಕಿಳಿದ ಈ ಬಾಲಕಿಯ ಜೀವನದಲ್ಲಿ ಆಗಿದ್ದು, ನಂಬಲು ಸ್ವಲ್ಪ ಕಷ್ಟವೇ ಎನ್ನುವ ಮಾತು.

    ಜಮ್ಷೆಡ್ಪುರದ 11 ವರ್ಷದ ಬಾಲಕಿ ತುಳಸಿ ಕುಮಾರಳ ಕಥೆಯಿದು. ಕಡುಬಡತನದಲ್ಲಿ ಇರುವ ಈಕೆಯ ಕುಟುಂಬಕ್ಕೆ ಆನ್‌ಲೈನ್‌ ಕ್ಲಾಸ್‌ಗೆ ಫೋನ್‌ ಬೇಕಿತ್ತು. ಆದರೆ ಮೊಬೈಲ್‌ ಖರೀದಿಗೆ ದುಡ್ಡು ಇರಲಿಲ್ಲ. ತನಗೆ ಯಾರಾದರೂ ಸಹಾಯ ಮಾಡಿ ಎಂದು ಚಾನೆಲ್‌ ಒಂದರಲ್ಲಿ ಈಕೆ ಕೋರಿಕೊಂಡಳು. ಆದರೆ ಆ ಮನವಿ ಈಡೇರಲಿಲ್ಲ. ಈಕೆಗೆ ಯಾವ ಸಹಾಯವೂ ಸಿಗಲಿಲ್ಲ.

    ಕೊನೆಯದಾಗಿ ಪಟ್ಟುಬಿಡದ ಈಕೆ ಮಾವಿನಹಣ್ಣಿನ ಮಾರಾಟಕ್ಕೆ ನಿಂತಳು. ಈ ವಿಷಯ ಇಲ್ಲಿರುವ ವ್ಯಾಲುಯೇಬಲ್ ಎಜುಟೇನ್ಮೆಂಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಅಮೆಯಾ ಅವರ ಕಿವಿಗೆ ಬಿತ್ತು. ಈ ಬಾಲಕಿ ಮಳೆ-ಗಾಳಿ ಎನ್ನದೇ ದುಡ್ಡು ಸಂಗ್ರಹಕ್ಕೆ ಬೀದಿಗಿಳಿದು ಮಾವಿನಹಣ್ಣಿನ ವ್ಯಾಪಾರ ಮಾಡುವಲ್ಲಿ ಖುದ್ದು ಆಸಕ್ತಿ ತೋರಿರುವ ಬಗ್ಗೆ ಅವರಿಗೆ ಖುಷಿಯಾಯಿತು. ಸ್ವಂತ ದುಡಿಮೆಯಿಂದ ಶಿಕ್ಷಣ ಪಡೆಯಲು ಈಕೆ ಇಚ್ಛಿಸಿರುವುದನ್ನು ಕಂಡು ಕಣ್ತುಂಬಿಸಿಕೊಂಡ ಅಮಯಾ ಅವರು, ಈ ಬಾಲಕಿಯಿಂದ ಒಂದು ಡಜನ್‌ ಮಾವಿನ ಹಣ್ಣನ್ನು ಖರೀದಿಸಿದರು.

    ನಂತರ ಆಕೆಯ ತಂದೆಯ ಬಳಿಗೆ ಹೋಗಿ ಈ ಡಜನ್‌ ಮಾವಿನಹಣ್ಣಿಗೆ 1.20ಲಕ್ಷ ರೂಪಾಯಿ ನೀಡಿದರು! ಒಂದೊಂದು ಮಾವಿನ ಹಣ್ಣಿಗೆ 10 ಸಾವಿರ ರೂಪಾಯಿಯಂತೆ ಇವರು ಹಣ ನೀಡಿದರು. ಈಕೆಗೆ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ, ಅವಳ ಶೈಕ್ಷಣಿಕ ಭವಿಷ್ಯಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನೂ ಈ ಹಣದಿಂದ ಮಾಡುವಂತೆ ಅವರು ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಅಮೆಯಾ, ಬಾಲಕಿ ಸ್ಮಾರ್ಟ್‌ಫೋನ‌ ಇಲ್ಲವೆಂದು ತನ್ನ ಹಣೆಬರಹವನ್ನು ದೂರುತ್ತಾ ಕೂರಲಿಲ್ಲ ಅಥವಾ ಭಿಕ್ಷೆ ಬೇಡಲಿಲ್ಲ. ಮಾವಿನ ಹಣ್ಣಿನ ಮಾರಾಟ ಮಾಡುವುದನ್ನು ಕಂಡು ನನಗೆ ಇನ್ನಿಲ್ಲದ ಖುಷಿಯಾಯಿತು. ಇದೇ ಕಾರಣಕ್ಕೆ ಹಣ ಕೊಟ್ಟೆ. ಇದು ದೇಣಿಗೆಯಲ್ಲ, ಬದಲಿಗೆ ಮಾವಿನಹಣ್ಣುಗಳನ್ನು ಖರೀದಿ ಮಾಡಿದ್ದೇನೆ. ಜೀವನದಲ್ಲಿ ಹೋರಾಡುವುದನ್ನು ಬಿಡಬೇಡ ಎಂದು ಆಕೆಗೆ ಪ್ರೋತ್ಸಾಹ ನೀಡಲು ಈ ನೆರವು ಎಂದಿದ್ದಾರೆ.

    ಜಮ್ಮು ವಿಮಾನನಿಲ್ದಾಣದಲ್ಲಿ ಬಾಂಬ್‌ ಬ್ಲಾಸ್ಟ್‌! ಕೆಲವೇ ಕ್ಷಣಗಳ ಅಂತರದಲ್ಲಿ ಎರಡು ಕಡೆ ಸ್ಫೋಟ

    ಮಟನ್‌ ಊಟ ಹಾಕಿಸಿಲ್ಲವೆಂದು ಮದುಮಗಳ ಬದಲು ಬೇರೊಬ್ಬಳಿಗೆ ತಾಳಿ ಕಟ್ಟಿದ ವರಮಹಾಶಯ…

    ಲವರ್‌ ಜತೆ ಓಡಿಹೋಗಿದ್ದಕ್ಕೆ ಜೈ ಎಂದ ಕೋರ್ಟ್‌- ಆದೇಶ ಕೇಳಿ ಸುಸ್ತಾದ ಗುಟ್ಕಾಪ್ರಿಯ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts