More

    VIDEO: ನೋಡನೋಡುತ್ತಿದ್ದಂತೆಯೇ ಸುಟ್ಟು ಭಸ್ಮವಾದ ಪಾರಂಪರಿಕ ಕಟ್ಟಡ- ಇದಕ್ಕಿತ್ತು 144 ವರ್ಷಗಳ ಇತಿಹಾಸ

    ಹೈದರಾಬಾದ್: ಶತಮಾನದಷ್ಟು ಹಳೆಯದಾಗಿರುವ ತೆಲಂಗಾಣದ ಸಿಕಂದರಾಬಾದ್ ಕ್ಲಬ್‌ ನಸುಕಿನ ವೇಳೆ ನೋಡನೋಡುತ್ತಿದ್ದಂತೆಯೇ ಸುಟ್ಟು ಭಸ್ಮವಾಗಿದೆ. 1878ರಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡ 144 ವರ್ಷಗಳಷ್ಟು ಹಳೆಯದಾಗಿದ್ದು, 2017 ರಲ್ಲಿ ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿಯು ಪಾರಂಪರಿಕ ಸ್ಥಾನಮಾನವನ್ನು ನೀಡಿತ್ತು.

    ಮುಂಜಾನೆ 3 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆಯೇ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಥಳೀಯರು ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತರಲು ಮೂರ್ನಾಲ್ಕು ಗಂಟೆ ತೆಗೆದುಕೊಂಡಿದೆ. ಆದರೆ ಅಷ್ಟರಲ್ಲಿಯೇ ಕಟ್ಟಡ ಬಹುತೇಕ ಸುಟ್ಟು ಭಸ್ಮವಾಗಿದೆ.

    ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಶನಿವಾರ ಕ್ಲಬ್ ಮುಚ್ಚಲಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ಬೆಂಕಿಯಲ್ಲಿ ಹಲವಾರು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ನಂಬಲಾಗಿದೆ.

    ಮಿಲಿಟರಿ ಅಧಿಕಾರಿಗಳು, ರಾಜತಾಂತ್ರಿಕರು, ಪೊಲೀಸ್ ಅಧಿಕಾರಿಗಳು, ವೃತ್ತಿಪರರು, ವಿಜ್ಞಾನಿಗಳು ಮತ್ತು ಉದ್ಯಮಿಗಳು ಸೇರಿದಂತೆ 8,000 ಸದಸ್ಯರನ್ನು ಕ್ಲಬ್ ಹೊಂದಿದೆ. ಈ ಹಿಂದೆ ಭೂತ ಬಂಗ್ಲೆಯಂತಿದ್ದ ಲಾಡ್ಜ್ ನಲ್ಲಿ ಸಾಲಾರ್ ಜಂಗ್ I, ನಿಜಾಮನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮೀರ್ ತುರಾಬ್ ಅಲಿ ಖಾನ್ ಅವರು ತಮ್ಮ ಬೇಟೆಯ ಪ್ರವಾಸದ ಸಮಯದಲ್ಲಿ ಅಲ್ಲಿಯೇ ಇರುತ್ತಿದ್ದರು ಎನ್ನಲಾಗಿದೆ. ನಿಜಾಮರ ರೈಲ್ವೆ, ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯ ಕುರಿತಾದ ಎಲ್ಲ ಸಭೆಗಳು ಇಲ್ಲಿಯೇ ನಡೆಯುತ್ತಿದ್ದವು. 1947 ರವರೆಗೆ, ಬ್ರಿಟಿಷ್ ನಾಗರಿಕರಿಗೆ ಮಾತ್ರ ಕ್ಲಬ್ ಅಧ್ಯಕ್ಷ ಸ್ಥಾನವನ್ನು ಹೊಂದಲು ಅವಕಾಶವಿತ್ತು. ಆ ಸಂದರ್ಭದಲ್ಲಿ ಕೆಲವೇ ಕೆಲವು ಉನ್ನತ ಶ್ರೇಣಿಯ ಹೈದರಾಬಾದ್ ಶ್ರೀಮಂತರಿಗೆ ಸದಸ್ಯತ್ವವನ್ನು ನೀಡಲಾಯಿತು. ಕ್ರಮೇಣ ಇದರಲ್ಲಿ ಬದಲಾವಣೆ ಹೊಂದುತ್ತಾ ಬಂದಿತ್ತು. ಇದೀಗ ಎಲ್ಲವೂ ಇತಿಹಾಸ ಪುಟ ಸೇರಿದಂತಾಗಿದೆ.

    ಇಲ್ಲಿವೆ ನೋಡಿ ವಿಡಿಯೋಗಳು:

    86 ವರ್ಷಗಳ ಶಿಕ್ಷೆಗೆ ಗುರಿಯಾದ ಪಾಕ್‌ ಸುಂದರಿ! ಅಮೆರಿಕವನ್ನೇ ತಲ್ಲಣಗೊಳಿಸಿರುವ ನರವಿಜ್ಞಾನಿಯ ಭಯಾನಕ ಕಥೆಯಿದು..

    VIDEO: ಚಾಲಕನಿಗೆ ಫಿಟ್ಸ್‌ ಬಂದು ಇನ್ನೇನು ಪ್ರಯಾಣಿಕರ ಪ್ರಾಣವೇ ಹೋಗುವಾಗ ‘ದೇವತೆ’ಯಾಗಿ ಬಂದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts