More

    ಮಗುವನ್ನು ದತ್ತು ಪಡೆಯಲು ಮದುವೆ ಪ್ರಮಾಣ ಅಗತ್ಯವಿಲ್ಲ ಎಂದ ಹೈಕೋರ್ಟ್​

    ಅಲಹಾಬಾದ್​: ಮಗುವನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ ಹಲವಾರು ಕಾನೂನುಗಳು ಇವೆ. ಆದರೆ ಒಂಟಿ ಮಹಿಳೆ ಮಗುವನ್ನು ದತ್ತು ಪಡೆಯಬಹುದೆ? ದತ್ತು ಪಡೆಯುವುದಕ್ಕೆ ಮದುವೆಯಾಗಿರುವ ಪ್ರಮಾಣ ಪತ್ರ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಅಲಹಾಬಾದ್​ ಹೈಕೋರ್ಟ್​ ತೀರ್ಪೊಂದನ್ನು ನೀಡಿದೆ.

    ರೀನಾ ಎನ್ನುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. ರೀನಾ ಮಗುವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಮದುವೆ ಪ್ರಮಾಣ ಪತ್ರವನ್ನು ತೋರಿಸುವಂತೆ ಅವರಿಗೆ ಹೇಳಲಾಗಿತ್ತು. ಇದರ ವಿರುದ್ಧ ಅವರು ಹೈಕೋರ್ಟ್​ ಮೊರೆ ಹೋಗಿದ್ದರು.

    ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​, ಮಗುವನ್ನು ದತ್ತು ತೆಗೆದುಕೊಳ್ಳಲು ಮದುವೆ ಪ್ರಮಾಣ ಪತ್ರ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಒಂಟಿ ಮಹಿಳೆ ಕೂಡ ಮಗುವನ್ನು ದತ್ತು ತೆಗೆದುಕೊಳ್ಳಬಹುದು. ಆಕೆ ಮದುವೆಯಾಗಿರಬೇಕು ಎಂದೇನೂ ಇಲ್ಲ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ, 1956ರಡಿಯಲ್ಲಿ ಒಂಟಿ ಪಾಲಕರೂ ಮಗುವನ್ನು ದತ್ತು ಪಡೆಯಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

    ಅಂತಾರಾಷ್ಟ್ರೀಯ ಮಾತೃಭಾಷಾ ದಿನವೇ ಅಂತ್ಯಗೊಂಡಿತೊಂದು ಭಾಷೆ! ‘ಯಮನ’ ತಿಳಿದಿದ್ದ ಕೊನೆಯ ಮಹಿಳೆ ಸಾವು…

    ಬ್ಯಾಗ್‌ ಕದ್ದು ಓಡಿಹೋದ ಕಳ್ಳರ ಹಿಡಿಯಲು ಆಟೋದಿಂದ ಜಿಗಿದ ಮಹಿಳೆಯ ದುರಂತ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts