More

    ವಿಚಾರಣೆಗೆ ಕೋರ್ಟ್‌ಗೆ ಕರೆತರ್ತಿಲ್ಲವೆಂದು ಸಿಟ್ಟಿಗೆದ್ದು ನ್ಯಾಯಾಧೀಶರತ್ತ ಚಪ್ಪಲಿ ಎಸೆದ ಆರೋಪಿ!

    ಮುಂಬೈ: ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಯೋರ್ವ ನ್ಯಾಯಾಲಯದ ಒಳಗೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‌ ಕೋರ್ಟ್‌ನಲ್ಲಿ ನಡೆದಿದೆ.

    ರೋಷನ್‌ ಘೋರ್ಪಡೆ ಎಂಬಾತ ಇಂಥ ಕೃತ್ಯ ಎಸಗಿದವನು. ಈತ ತನ್ನ ಪತ್ನಿ ಹಾಗೂ ತಾಯಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಈತನ ವಿಚಾರಣೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ ವಿಚಾರಣೆ ದಿನಗಳಲ್ಲಿ ಪೊಲೀಸರಿಗೆ ಎಷ್ಟೇ ಬೇಡಿಕೊಂಡರೂ ಅವರು ಈತನನ್ನು ಕೋರ್ಟ್‌ಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಪ್ರತಿಬಾರಿಯೂ ತನ್ನನ್ನು ಕೋರ್ಟ್‌ಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದ. ಆದರೆ ಪೊಲೀಸರು ಕೋರ್ಟ್‌ ಆದೇಶವಿದ್ದರಷ್ಟೇ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು.

    ಇದರಿಂದ ರೋಷನ್‌ ನ್ಯಾಯಾಧೀಶರ ವಿರುದ್ಧ ಸಿಟ್ಟಿಗೆದ್ದಿದ್ದ. ನಿನ್ನೆ ವಿಚಾರಣೆಗೆ ಕರೆದುಕೊಂಡು ಹೋದಾಗ ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ. ತಕ್ಷಣ ನ್ಯಾಯಾಧೀಶರು ಕೆಳಗೆ ಬಗ್ಗಿ ತಪ್ಪಿಸಿಕೊಂಡಿದ್ದಾರೆ.
    ಈಗ ಕೊಲೆ ಕೇಸಿನ ಜತೆಗೆ ಐಪಿಸಿ ಸೆಕ್ಷನ್‌ 353 (ಸಾರ್ವಜನಿಕ ಸೇವಕ ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ಅಡ್ಡಿಪಡಿಸಲು ಯತ್ನ), 504ರ (ಶಾಂತಿಯನ್ನು ಭಂಗಗೊಳಿಸಿ ಉದ್ದೇಶಪೂರ್ವಕ ಅವಮಾನ)ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಯ್ಯೋ… ನನ್ನ ಹೊಟ್ಟೆಯಲ್ಲೇ ಹುಟ್ಟಿದ್ರೂ ಈ ಮಗು ನನ್ನದಲ್ಲ…. ಕೋರ್ಟ್‌ಗೆ ಧಾವಿಸಿದ ಮಹಿಳೆ: ಮುಂದಾದದ್ದೇ ರೋಚಕ

    ಚಾಮರಾಜನಗರದ ಅಂಧರ ಬಾಳಲ್ಲಿ ಬೆಳಕಾಗಲಿದೆ ಅಪ್ಪು ಆದರ್ಶ: ‘ಪುನೀತ್‌’ ಕಣ್ಣಿನ ಆಸ್ಪತ್ರೆ- 46 ಸಾವಿರ ಮಂದಿಯ ನೇತ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts