More

    ಮೊಮ್ಮಗನಿಗೆ ಊಟ ಕೊಡಿಸಿದ ಮೊತ್ತ ₹200; ಪಾರ್ಕಿಂಗ್​ಗೆ ದಂಡ ತೆತ್ತದ್ದು ಒಂದುಮುಕ್ಕಾಲು ಲಕ್ಷ ರೂ!

    ಲಂಡನ್: ಗ್ರಹಚಾರ ಕೆಟ್ಟರೆ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮೊಮ್ಮಗನ ಇಷ್ಟದ ತಿನಿಸು ಕೊಡಿಸಲು ಹೋದ ಅಜ್ಜನೊಬ್ಬ ಪಾರ್ಕಿಂಗ್​ಗೆ 2 ಲಕ್ಷ ರೂಪಾಯಿ ದಂಡ ತೆತ್ತಿರುವ ಘಟನೆ ಇಂಗ್ಲೆಂಡ್​ನ ಲ್ಯೂಟಾನ್​ನಲ್ಲಿ ನಡೆದಿದೆ.

    ಉಚಿತ ಪಾರ್ಕಿಂಗ್​ ಸಮಯವನ್ನು ಮೀರಿ ಪಾರ್ಕಿಂಗ್​ ಮಾಡಿದ್ದಕ್ಕೆ ಈ ದಂಡ! ಇಂಥದ್ದೊಂದು ದುರದೃಷ್ಟ ಅಜ್ಜನ ಹೆಸರು ಜಾನ್​ ಬಬೆಜ್​. 75 ವರ್ಷ ವಯಸ್ಸಿನ ಇವರು, ಮೊಮ್ಮಗನಿಗೆ ಊಟ ಕೊಡಿಸಲು ಹೋಗಿ ದುಬಾರ ದಂಡ ತೆತ್ತಿದ್ದಾರೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ಜಾನ್​ ಅವರು ಮೊಮ್ಮಗನಿಗೆ ಊಟ ಕೊಡಿಲು ಮೆಕ್​ ಡೋನಾಲ್ಡ್ಸ್​ಗೆ​ ಹೋಗಿದ್ದಾರೆ. ಅಲ್ಲಿ ಕಾರನ್ನು ಪಾರ್ಕ್​ ಮಾಡಿದ್ದಾರೆ. ಆ ಕಾರಿನ ಪಾರ್ಕಿಂಗ್​ ಎರಡು ಗಂಟೆಗಳವರೆಗೆ ಉಚಿತವಾಗಿದೆ. ಜಾನ್​ ಅವರು ಮೊಮ್ಮಗನಿಗೆ 200 ರೂಪಾಯಿಗಳ ತಿನಿಸು ಕೊಡಿಸಿ ವಾಪಸ್​ ಬಂದಿದ್ದಾರೆ. ಇದಕ್ಕೆ ಮುಕ್ಕಾಲು ಗಂಟೆಯಷ್ಟೇ ಹಿಡಿದಿದೆ.

    ಅಲ್ಲಿಂದ ವಾಪಸ್​ ಬರುವ ಸಮಯದಲ್ಲಿ ಮೊಮ್ಮಗನಿಗೆ ಸ್ನೇಹಿತರು ಸಿಕ್ಕಿದ್ದಾರೆ. ಕೂಡಲೇ ಬರುವೆ ಎಂದ ಮೊಮ್ಮಗ ಅವರ ಜತೆ ಹರಟೆ ಹೊಡೆಯುತ್ತಾ ದೂರ ಹೋಗಿದ್ದಾನೆ. ಹೇಗೋ ಮೊಮ್ಮಗ ಬೇಗ ಬರುತ್ತಾನೆ ಎಂದುಕೊಂಡ ಅಜ್ಜ ಕಾರಿನಲ್ಲಿ ಕುಳಿತಿದಿದ್ದಾರೆ. ಹೇಗಿದ್ದರೂ ಉಚಿತ ಪಾರ್ಕಿಂಗ್​ಗೆ ಟೈಂ ಇದೆ. ಒಂದು ವೇಳೆ ಟೈಂ ಆಯ್ತು ಎಂದರೆ ಬೇರೆ ಎಲ್ಲಿಯಾದರೂ ನಿಲ್ಲಿಸಿದರಾಯಿತು ಎಂದುಕೊಂಡಿದ್ದಾರೆ ಅಜ್ಜ.

    ಆದರೆ ದುರದೃಷ್ಟಕ್ಕೆ ಅತ್ತ ಮೊಮ್ಮಗನೂ ವೇಳೆಗೆ ಸರಿಯಾಗಿ ಬರಲಿಲ್ಲ, ಇತ್ತ ಮೊಮ್ಮಗನನ್ನು ಕಾದು ಕಾದು ಸುಸ್ತಾದ ಅಜ್ಜ, ನಿದ್ದೆಗೆ ಜಾರಿದ್ದಾರೆ. ನಂತರ ಮೊಮ್ಮಗ ಬಂದು ಅಜ್ಜನಿಗೆ ಎಬ್ಬಿಸುವಷ್ಟರಲ್ಲಿ ಕಾರು ಪಾರ್ಕಿಂಗ್​ ಮಾಡಿ 2 ಗಂಟೆ 17 ನಿಮಿಷವಾಗಿದೆ. ಅಂದರೆ 17 ನಿಮಿಷವಷ್ಟೇ ಹೆಚ್ಚಾಗಿದೆ.

    ಇದಾದ ಮೇಲೆ ತನ್ನ ಮೊಮ್ಮಗನನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ. ಮಾರನೆಯ ದಿನ ಅವರ ಮನೆಗೆ ನೋಟಿಸ್​ ಬಂದಿದೆ. ಆದರೆ ಆ ನೋಟಿಸ್​ ಜಾನ್​ ಅವರ ಮನೆಯ ವಿಳಾಸದ ಬದಲು ಬೇರೆಲ್ಲೋ ಹೋಗಿದೆ. ಇದರ ಬಗ್ಗೆ ಅರಿವೇ ಇಲ್ಲದ ಜಾನ್​ ಅವರು ದಂಡ ಕಟ್ಟಲಿಲ್ಲ. ದಂಡ ಕಟ್ಟಲಿಲ್ಲ ಎನ್ನುವ ಕಾರಣಕ್ಕೆ ದಂಡದ ಶುಲ್ಕಕ್ಕೆ ಬಡ್ಡಿ ಸೇರಿಸಿ ಮತ್ತೊಮ್ಮೆ, ಇನ್ನೊಮ್ಮೆ…. ಹೀಗೆ ನೋಟಿಸ್​ ನೀಡುತ್ತಾ ಬರಲಾಗಿದೆ.

    ಕೊನೆಯದಾಗಿ ಜಾನ್​ ಅವರ ಕೈಗೆ ನೋಟಿಸ್​ ಸಿಕ್ಕಾಗ 1,700 ಪೌಂಡ್​ (ಅಂದರೆ ಸುಮಾರು 1.74 ಲಕ್ಷ ರೂಪಾಯಿ) ದಂಡ ಕಟ್ಟಬೇಕಾಗಿ ಬಂದಿದೆ. ನೋಟಿಸ್​ ತಮ್ಮ ಕೈಸೇರಲಿಲ್ಲ ಎಂದು ಅಜ್ಜ ಹೇಳಿದರಾದರೂ ಅದನ್ನು ಕೇಳದ ಅಧಿಕಾರಿಗಳ ದಂಡದ ಮೊತ್ತವನ್ನು ನೀಡಲೇಬೇಕು ಎಂದಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

    14 ವರ್ಷದ ಬಾಲಕಿಯನ್ನು ಮದುವೆಯಾದ 50 ವರ್ಷದ ಸಂಸದ: ದಾಖಲಾಯ್ತು ಕೇಸ್​

    ಅಯ್ಯೋ ಅವ್ನ ಮದ್ವೆಯಾಗಿದೆ ಅಂತ ಗೊತ್ತಿದ್ರೆ ಅವ್ನ ಜತೆ ಹೀಗೆಲ್ಲಾ ಮಾಡ್ತಾನೇ ಇರ್ಲಿಲ್ಲ: ಕಣ್ಣೀರಿಟ್ಟ ರಾಖಿ ಸಾವಂತ್​

    ಪತ್ನಿಯ ಮೊಬೈಲ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ಅಸಹ್ಯ ಹುಟ್ಟಿದೆ- ಅವಳಿಗೆ ವಿಚ್ಛೇದನ ನೀಡಬಹುದೆ?

    ಹುಟ್ಟುಹಬ್ಬಕ್ಕೆ ತಾಯಿ ಕೊಟ್ಟ ಸರ್​ಪ್ರೈಸ್​ ಗಿಫ್ಟ್​ ನೋಡಿ ಮಗ ಶಾಕ್​, ಅಮ್ಮ ರಾಕ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts