More

    ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ತಾಯಿಗೇ ಎರಡೂವರೆ ಕೋಟಿ ವಂಚನೆ!

    ನಾಗ್ಪುರ (ಮಹಾರಾಷ್ಟ್ರ): ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಅವರ ತಾಯಿಗೆ ಎರಡೂವರೆ ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಕ್ತಾ ಬೊಬ್ಡೆ ಅವರು ವಂಚನೆಗೆ ಒಳಗಾದವರು.

    ತನಿಖೆ ಕೈಗೊಂಡ ಪೊಲೀಸರಿಗೆ ಕುಟುಂಬದ ಆಸ್ತಿಯ ಉಸ್ತುವಾರಿ ವಹಿಸಿಕೊಂಡಿರುವಾತನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಅವನನ್ನು ಬಂಧಿಸಲಾಗಿದೆ. ತಪಸ್‌ ಘೋಷ್‌ (49) ಎಂಬುವವ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ನಾಗ್ಪುರದ ಆಕಾಶವಾಣಿ ಸ್ಕ್ವೇರ್‌ ಸಮೀಪ ಇರುವ ಹಾಲ್‌ನ ಮಾಲೀಕತ್ವವನ್ನು ಮುಕ್ತಾ ಅವರು ಹೊಂದಿದ್ದಾರೆ. ಅದನ್ನು ಕಾರ್ಯಕ್ರಮಗಳನ್ನು ಆಯೋಜಿಸಲು ಬಾಡಿಗೆಗೆ ನೀಡಲಾಗುತ್ತಿತ್ತು. ಅದರ ಉಸ್ತುವಾರಿಗಾಗಿ 2007ರಲ್ಲಿ ತಪಸ್​ನನ್ನು ನೇಮಕ ಮಾಡಲಾಗಿದೆ. ಆತನೇ ಇದರ ಸಂಪೂರ್ಣ ವ್ಯವಹಾರ ನೋಡಿಕೊಳ್ಳುತ್ತಿದ್ದ. ಹಾಲ್‌ನ ಬುಕಿಂಗ್‌ ಮತ್ತು ಇತರ ವ್ಯವಹಾರವೆಲ್ಲಾ ಅವನೇ ನೋಡಿಕೊಳ್ಳುತ್ತಿದ್ದ.

    ಮುಕ್ತಾ ಅವರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಅವರು ಅಷ್ಟೊಂದು ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ. ದುರುಪಯೋಗಪಡಿಸಿಕೊಂಡ ಘೋಷ್, ಬಾಡಿಗೆ ಪಾವತಿಗಳ ರಸೀತಿಗಳನ್ನು ಫೋರ್ಜರಿ ಮಾಡಿ, 2.5 ಕೋಟಿ ರೂ. ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ಕಾರ್ಯಕ್ರಮಗಳಿಂದ ಬಂದ ಮೊತ್ತವನ್ನು ನೀಡುತ್ತಿರಲಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳು ರದ್ದುಗೊಂಡು, ಮುಂಗಡವನ್ನು ನೀಡಿರಲಿಲ್ಲ. 2017ರಿಂದ ಇದುವರೆಗೆ ಆತ 2.5 ಕೋಟಿ ರೂ. ವಂಚಿಸಿದ್ದಾನೆಂದು ಗೊತ್ತಾಗಿದೆ.

    ಬಾತ್​ರೂಮ್​ಗೆ ಮೊಬೈಲ್​ ತೆಗೆದುಕೊಂಡು ಹೋದ ಯುವತಿ ಮರುಕ್ಷಣದಲ್ಲೇ ದುರಂತ ಸಾವು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts