More

    ತೃಣಮೂಲ ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆಯಾಗಿ ಮಮತಾ ಮರು ಆಯ್ಕೆ- ಈ ಕ್ಷಣದಲ್ಲಿ ಮಾಡಿದರೊಂದು ಪ್ರತಿಜ್ಞೆ

    ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆಯಾಗಿ ಮರು ಆಯ್ಕೆಯಾಗಿದ್ದಾರೆ.

    ಕೋಲ್ಕತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಕ್ಷದ ಚುನಾವಣೆಗಳಲ್ಲಿ ಟಿಎಂಸಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ನಡೆದ ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ಮಮತಾ ಅವರನ್ನು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಮರು ಆಯ್ಕೆ ಬಳಿಕ ಮಾತನಾಡಿದ ಮಮತಾ, 2024ರ ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​​ ಉತ್ತರ ಪ್ರದೇಶದಿಂದ ಸ್ಪರ್ಧೆ ಮಾಡಲಿದೆ. ಭಾರತೀಯ ಜನತಾ ಪಾರ್ಟಿ ವಿರುದ್ಧ ಹೋರಾಡಲು ಎಲ್ಲ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂದು ಹೇಳಿದರು. ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಂದಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದ ದೀದೀ, ಬಿಜೆಪಿ ಸೋಲಿಸುವುದಾಗಿ ಇದೇ ವೇಳೆ ಪ್ರತಿಜ್ಞೆ ಮಾಡಿದರು.

    ತಮ್ಮ ಪಕ್ಷವು ಇನ್ನೂ ಬಲಪಡಲಿದೆ ಎಂದು ಇದೇ ವೇಳೆ ಹೇಳಿದ ಮಮತಾ, 7-8 ಬಿಜೆಪಿ ನಾಯಕರು ಟಿಎಂಸಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ನುಡಿದರು. ಈ ಬಾರಿಯ ಕೇಂದ್ರ ಬಜೆಟ್ ವಿರುದ್ಧ ಮಾತನಾಡಿದ ಅವರು, ಬಜೆಟ್​ನಲ್ಲಿ ಕಾರ್ಮಿಕರು, ರೈತರು ಮತ್ತು ಜನಸಾಮಾನ್ಯರಿಗೆ ಯಾವುದೇ ರೀತಿಯ ಯೋಜನೆ ಘೋಷಣೆಯಾಗಿಲ್ಲ ಎಂದು ಟೀಕಿಸಿದರು.

    ಬೆಂಗಳೂರು ಲೈಫ್ ಇನ್ನಷ್ಟು ಆಗಲಿದೆ ದುಬಾರಿ: ವಿದ್ಯುತ್‌ ಬಿಲ್‌ ಮೂಲಕ ಕಸದ ಸೆಸ್‌ ಸಂಗ್ರಹ!

    ಗುಟ್ಟಾಗಿ ಕಾಲ್‌ ಮಾಡ್ತಾರೆ, ಕೂಡ್ಲೇ ನಂಬರ್‌ ಮಾಯ ಆಗತ್ತೆ! ಕೇಳಿದ್ರೆ ಸಂಶಯದ ಪಿಶಾಚಿ ಅಂತಾರೆ… ಏನ್‌ ಮಾಡ್ಲಿ ಮೇಡಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts