More

    ಕಳೆದು ಹೋದ ಫೋನ್​ ಸಿಕ್ಕಾಗ ಅದರಲ್ಲಿತ್ತು ಭಯಾನಕ ಸೆಲ್ಫಿ!

    ಮಲೇಷಿಯಾ: ಸೆಲ್ಫಿ ತೆಗೆದುಕೊಳ್ಳುವಾಗ ಸಾಮಾನ್ಯವಾಗಿ ಎಲ್ಲರೂ ಮಂಗನ ಮೂತಿ ಮಾಡುವುದು ಸಾಮಾನ್ಯ. ಅದ್ಯಾಕೆ ಈ ರೀತಿ ಮೂತಿ ಮಾಡುವ ಸೆಲ್ಫಿ ಟ್ರೆಂಡ್​ ಆಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸೆಲ್ಫಿ ಎಂದಾಕ್ಷಣ ಬಹುತೇಕ ಮಂದಿ ಇದೇ ರೀತಿಯ ಪೋಸ್​ ಕೊಡುತ್ತಾರೆ.

    ಆದರೆ ಇಲ್ಲೊಂದು ಪ್ರಕರಣದಲ್ಲಿ, ಯುವಕನೊಬ್ಬನ ಕಳೆದುಹೋದ ಮೊಬೈಲ್​ ವಾಪಸ್​ ಸಿಕ್ಕಾಗ ಅದರಲ್ಲಿನ ಗ್ಯಾಲರಿ ಓಪನ್​ ಮಾಡಿದಾಗ ಯುವಕ ಶಾಕ್​ ಆಗಿಹೋಗಿದ್ದಾನೆ. ಏಕೆಂದರೆ ಅಲ್ಲಿಯೂ ಮಂಗನಮೂತಿಯ ಸೆಲ್ಫಿ ಕಂಡಿದೆ. ಒಮ್ಮೆ ನೋಡಿದರೆ ಭಯಾನಕ ಎನಿಸುವಂತಿದ್ದ ಈ ಸೆಲ್ಫಿಯನ್ನು ಸೂಕ್ಷ್ಮವಾಗಿ ನೋಡಿದ ಯುವಕನಿಗೆ ತಿಳಿದದ್ದು ಇದು ನಿಜವಾಗಿಯೂ ಮಂಗ ಖುದ್ದು ತೆಗೆದುಕೊಂಡಿರುವ ಸೆಲ್ಫಿ ಎಂದು!’

    ಇದು ನಡೆದಿರುವುದು ಮಲೇಷಿಯಾದಲ್ಲಿ. ಝಾಕ್ರಿಡ್ಜ‌ ರೊಡ್ಜಿ ಎನ್ನುವ 20 ವರ್ಷದ ಯುವಕ ಮನೆಯ ಸಮೀಪ ವಿಹಾರಕ್ಕೆ ಹೋಗಿದ್ದಾಗ ಮೊಬೈಲ್​ ಫೋನ್​ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗಿದ್ದಾನೆ. ಮಾರನೆಯ ದಿನ ನೋಡಿದಾಗ ಪಕ್ಕದಲ್ಲಿ ಫೋನ್​ ಬರಲಿಲ್ಲ.

    ಆತಂಕಗೊಂಡ ಆತ ಎಲ್ಲೆಡೆ ಹುಡುಕಾಡಿದರೂ ಅದು ಸಿಗಲಿಲ್ಲ. ಆ ನಂತರ ಇನ್ನೊಂದು ಫೋನ್​ನಿಂದ ಕಳೆದುಹೋದ ಫೋನ್​ಗೆ ರಿಂಗ್ ಮಾಡಿದ್ದಾನೆ. ಆಗ ಅಲ್ಲಿಯೇ ಸಮೀಪವೇ ರಿಂಗ್​ಟೋನ್​ ಕೇಳಿದೆ. ಮಂಗವೊಂದು ಅದನ್ನು ಹಿಡಿದುಕೊಂಡಿತ್ತು.

    ಮಂಗ ಓಡಿ ಹೋಗದಂತೆ ಬಹಳ ಕಷ್ಟಪಟ್ಟು, ಹರಸಾಹಸದಿಂದ ಅದರ ಕೈಯಲ್ಲಿದ್ದ ಫೋನ್​ ಅನ್ನು ಪಡೆದುಕೊಳ್ಳುವಲ್ಲಿ ಯುವಕ ಯಶಸ್ವಿಯಾಗಿದ್ದಾನೆ.

    ಮಂಗನ ಕೈಯಲ್ಲಿದ್ದ ಫೋನ್​ ಸರಿಯಾಗಿಯೋ, ಇಲ್ಲವೋ ಎಂದು ಪರೀಕ್ಷೆ ಮಾಡುವಾಗ ಅದರ ಫೋಟೋ ಗ್ಯಾಲರಿ ಓಪನ್​ ಮಾಡಿದಾಗ, ಒಮ್ಮೆಲೆ ಬೆಚ್ಚಿಬಿದ್ದಿದ್ದಾನೆ. ಏಕೆಂದರೆ, ಅದರಲ್ಲಿ ಮಂಗ ಸೆಲ್ಫಿ ಫೋಟೋ, ವಿಡಿಯೋ ಎಲ್ಲಾ ತೆಗೆದುಕೊಂಡಿರುವುದು ದಾಖಲಾಗಿದೆ.
    ಇದನ್ನು ಯುವಕ, ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಇದೀಗ ಅದು ಭಾರಿ ವಯರಲ್​ ಆಗಿದೆ.

    ಸುಮ್ಮನಿರದೇ ಇರುವೆ ಬಿಟ್ಟುಕೊಂಡ ಪ್ರೇಮಿಗಳು: ಕೋರ್ಟ್​ನಿಂದ ಬಿತ್ತು ₹50 ಸಾವಿರ ದಂಡ!

    ಬಲವಂತದ ಮದುವೆಯ ಧಿಕ್ಕರಿಸಿ ಮನೆಬಿಟ್ಟು ಬಂದಾಕೆ ಈಗ ಮಾದರಿ ಹೆಣ್ಣು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts