More

    ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸಿಗರ ಲಗ್ಗೆ

    ಕಳಸ: ಪ್ರವಾಸಿಗರಿಂದ ಕಳಸ ತಾಲೂಕು ತುಂಬಿ ತುಳುಕುತ್ತಿದೆ. ಭಾನುವಾರ ಎಲ್ಲಿ ನೋಡಿದರೂ ಜನದಟ್ಟಣೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇದರಿಂದ ಇಲ್ಲಿನ ಬಹುತೇಕ ರೆಸಾರ್ಟ್, ಹೋಟೆಲ್‌ಗಳು, ಹೋಂ ಸ್ಟೇಗಳು ಭರ್ತಿಯಾಗಿವೆ. ಪ್ರವಾಸಿ ತಾಣಗಳಲ್ಲಿ ಬರೀ ಜನರೇ ಕಾಣುತ್ತಾರೆ.

    ಕಳಸವನ್ನು ಸಂಪರ್ಕಿಸುವ ಬಹುತೇಕ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಸಂಚರಿಸಿವೆ. ಕೆಲವೆಡೆ ವಾಹನ ದಟ್ಟಣೆ ಉಂಟಾಗಿದೆ. ಕಳಸ ಮುಖ್ಯ ರಸ್ತೆಯಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.
    ತಾಲೂಕಿನ ಪ್ರವಾಸಿ ತಾಣಗಳಾದ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಮೈದಾಡಿ, ಕ್ಯಾತನಮಕ್ಕಿ, ವಸಿಷ್ಠಾಶ್ರಮ, ಅಂಬಾತೀರ್ಥ, ಸುರುಮನೆ ಜಲಪಾತ, ಕುರುಂಜಲ್ ಗುಡ್ಡ, ಧಾರ್ಮಿಕ ಕ್ಷೇತ್ರಗಳಾದ ಹೊರನಾಡು, ಕಳಸ ಕ್ಷೇತ್ರಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು.
    ಸಂಸೆ ಕುದುರೆಮುಖ ಪ್ರದೇಶದಲ್ಲಿರುವ ನೇತ್ರಾವತಿ ಮತ್ತು ಕುದುರೆಮುಖ ಶಿಖರಕ್ಕೆ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರಿಂದ ಕುದುರೆಮುಖ ರಸ್ತೆಯುದ್ದಕ್ಕೂ ಟ್ರಾಫಿಕ್ ಹೆಚ್ಚಾಗಿತ್ತು. ರಸ್ತೆ ಬದಿಯಲ್ಲಿ ಪ್ರವಾಸಿಗರು ವಾಹನಗಳನ್ನು ಸಾಲಾಗಿ ನಿಲ್ಲಿಸಿದ್ದರಿಂದ ಇತರೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿತ್ತು. ಸಂಸೆ ಟೀ ತೋಟದ ಬಳಿ ರಸ್ತೆಯ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವಾಗ ಇತರೆ ವಾಹನ ಸವಾರರರಿಗೆ ತೊಂದರೆಯಾದ ಪರಿಣಾಮ ಪ್ರವಾಸಿಗರಿಗೂ ನಿತ್ಯ ಪ್ರಯಾಣಿಸುವವರ ನಡುವೆ ಮಾತಿನ ಚಕಮಕಿ ನಡೆದವು.
    ಆಗಾಗ ಬರುತ್ತಿದ್ದಮಳೆಯ ಪರಿಣಾಮ ಪ್ರವಾಸಿಗರೂ ಕೂಡ ತೊಂದರೆ ಅನುಭವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts