More

    ಎದುರಿಗೆ ಮೂರು ಹುಲಿಗಳು ಬಂದರೆ ಹೇಗಿರುತ್ತೆ? ಇಲ್ಲಿದೆ ನೋಡಿ ಮೈ ಝುಂ ಎನ್ನುವ ವಿಡಿಯೋ…

    ನವದೆಹಲಿ: ಎಲ್ಲಾದರೂ ವಾಹನದಲ್ಲಿ ಹೋಗುವಾಗ ಎದುರಿಗೆ ಹುಲಿ ಬಂದರೆ ಅದರಲ್ಲಿಯೂ ಮೂರು ಮೂರು ಹುಲಿ ಒಟ್ಟಿಗೇ ಬಂದರೆ ಹೇಗಿರುತ್ತೆ? ನೆನೆಸಿಕೊಂಡರೇ ಭಯ ಆಗುತ್ತಲ್ವಾ? ಆದರೆ ಇಲ್ಲೊಂದು ಅಂಥದ್ದೇ ಘಟನೆ ನಡೆದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಆದರೆ ಈ ಹುಲಿಗಳು ಥಟ್‌ ಎಂದು ಎದುರಿಗೆ ಬರಲಿಲ್ಲ. ಬದಲಿಗೆ ಟೂರಿಸ್ಟ್​ ವ್ಯಾನ್​ನಲ್ಲಿ ಪ್ರವಾಸಿಗರು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟೂರಿಸ್ಟ್‌ ವಾಹನವಾಗಲೀ, ಯಾವುದೇ ವಾಹನ ಆಗಲಿ ಹತ್ತಿರ ಹುಲಿಗಳು ಬಂದರೆ ಜೀವವೇ ಬಾಯಲ್ಲಿ ಬಂತಂತೆ ಆಗುವುದು ನಿಜವಲ್ಲವೇ?

    ಇಂಥ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಶಾಂತ್‌ ನಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂಥ ಹಲವಾರು ವಿಡಿಯೋಗಳನ್ನು ಇವರು ಆಗಾಗ್ಗೆ ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ ಈ ವಿಡಿಯೋದಲ್ಲಿ ಅರಣ್ಯದ ಮಧ್ಯೆ ವ್ಯಾನ್​ ನಿಂತಂತೆಯೇ ಮೂರು ದೈತ್ಯಾಕಾರದ ಹುಲಿಗಳು ಒಂದಾದ ಮೇಲೊಂದು ಬಂದು ವಾಹನವನ್ನು ಸುತ್ತುವರೆಯುವುದನ್ನು ನೋಡಬಹುದು. ಮಾತ್ರವಲ್ಲದೇ ವಾಹನವನ್ನು ಹತ್ತಿ ಪ್ರವಾಸಿಗರನ್ನು ನೋಡುತ್ತಿದೆ. ನೋಡುಗರಿಗೆ ಇದು ಒಂದು ರೀತಿಯಲ್ಲಿ ರೋಮಾಂಚನ ಎನಿಸಿದರೂ ವಾಹನದ ಒಳಗೆ ಇರುವವರ ಗತಿ ಹೇಗಿರಬಹುದು? ಇದೇನೂ ಹೇಳಬೇಕಾಗಿಲ್ಲ ಅಲ್ವಾ?

    ಈ ವಿಡಿಯೋ ನೀವೂ ನೋಡಿ:

    ಬ್ಯಾಂಕ್​ನಲ್ಲಿ ಉದ್ಯೋಗಕ್ಕೆ ಕಾಯುತ್ತಿರುವಿರಾ? ಐಬಿಪಿಎಸ್​ನಿಂದ 5,830 ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

    ಇದು ಹಿಂದೂ-ಮುಸ್ಲಿಂ ದುರಂತ ಲವ್​ ಸ್ಟೋರಿ: ಹಸೆಮಣೆ ಏರಲು ಸಿದ್ಧವಾದವರಿಗೆ ಕೊಳ್ಳಿ ಇಟ್ಟ ‘ಲವ್​ ಜಿಹಾದ್​’

    VIDEO: ಗೆಳೆಯನ ಜತೆಗೆ ಆಮೀರ್​ಖಾನ್​ ಪುತ್ರಿ ಕಳೆದ ಮೋಜಿನ ಕ್ಷಣಗಳ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts