More

    55 ವರ್ಷದ ಕೊಲೆ ಆರೋಪಿ ಕೇಸು ಅಪ್ರಾಪ್ತರ ಕೋರ್ಟ್​ಗೆ ವರ್ಗ! ಸುಪ್ರೀಂನಿಂದ ಕುತೂಹಲದ ತೀರ್ಪು

    ನವದೆಹಲಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 55 ವರ್ಷದ ವ್ಯಕ್ತಿಯ ಕೇಸೀಗ ಅಪ್ರಾಪ್ತರ ವಿಚಾರಣೆ ನಡೆಯಲಿರುವ ಬಾಲ ನ್ಯಾಯಮಂದಿರಲ್ಲಿ ನಡೆಯಲಿದೆ. ಜೀವಾವಧಿ ಶಿಕ್ಷೆಯಿಂದ ಈ ಆರೋಪಿಯನ್ನು ಬಿಡುಗಡೆಗೊಳಿಸಿರುವ ಸುಪ್ರೀಂಕೋರ್ಟ್​, ವಿಚಾರಣೆಯನ್ನು ಬಾಲನ್ಯಾಯಮಂದಿರಕ್ಕೆ ಒಪ್ಪಿಸಿದೆ!

    ಉತ್ತರ ಪ್ರದೇಶದ ಅಲಹಾಬಾದ್​ನ ನಿವಾಸಿಯೊಬ್ಬನ ವಿಚಿತ್ರ ಕೇಸಿದು. ಸುಪ್ರೀಂಕೋರ್ಟ್​ ಈ ರೀತಿಯ ಅಪರೂಪದ ತೀರ್ಪು ಕೊಟ್ಟಿರುವ ಹಿಂದಿದೆ ಕುತೂಹಲದ ಕಾರಣ.

    ಅದೇನೆಂದರೆ ಇದೀಗ 55 ವರ್ಷ ವಯಸ್ಸಾಗಿರುವ ಈ ವ್ಯಕ್ತಿ ಅಪ್ರಾಪ್ತನಾಗಿದ್ದ ವೇಳೆ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ! ಅಂದರೆ ಸುಮಾರು ನಾಲ್ಕು ದಶಕಗಳ ಹಿಂದಿನ ಕೇಸಿದು. ಕೆಳಹಂತದ ಕೋರ್ಟ್​ನಿಂದ ಸುಪ್ರೀಂಕೋರ್ಟ್​ವರೆಗೆ ಈ ಪ್ರಕರಣದ ವಿಚಾರಣೆ ಬರುವವರೆಗೆ ನಲವತ್ತು ವರ್ಷ ಕಳೆದಿದೆ. ಘಟನೆ ನಡೆದಾಗ ಈತ ಅಪ್ರಾಪ್ತನಾಗಿದ್ದ ಎಂದು ತಿಳಿಯಲು ನಾಲ್ಕು ದಶಕ ಹಿಡಿದಿದೆ!

    1981ರಲ್ಲಿ ಈ ಕೊಲೆ ಪ್ರಕರಣ ನಡೆದಿದೆ. ಆಗ ಈ ವ್ಯಕ್ತಿಗೆ 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸು ಇತ್ತು. ಕೃಷಿ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರುವ ಆರೋಪ ಈತನ ಮೇಲಿದೆ. ಆ ಸಂದರ್ಭದಲ್ಲಿ ಈತನೇ ಕೊಲೆ ಮಾಡಿರುವುದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

    ಇದನ್ನೂ ಓದಿ: ಬೆಂಗಳೂರು ತಲುಪಬೇಕೆನ್ನುವಷ್ಟರಲ್ಲಿ ವಿಮಾನದಲ್ಲೇ ಡೆಲಿವರಿ: ವಿಡಿಯೋ ವೈರಲ್​

    ಈ ಶಿಕ್ಷೆಯನ್ನು ಈತ ಮೇಲಿನ ಕೋರ್ಟ್​ಗಳಲ್ಲಿ ಪ್ರಶ್ನಿಸುತ್ತಲೇ ಬಂದ. ಕೊನೆಗೂ ಅದೇ ಕಾಯಂ ಆಗಿತ್ತು. ಅಲಹಾಬಾದ್​ ಹೈಕೋರ್ಟ್​ ಕೂಡ ಶಿಕ್ಷೆಯನ್ನು ಎತ್ತಿಹಿಡಿದಿದೆ. ಆದರೆ ಇದೀಗ ಸುಪ್ರೀಂಕೋರ್ಟ್​ಗೆ ಈ ಪ್ರಕರಣದ ವಿಚಾರಣೆ ಬಂತು. ಅಲ್ಲಿಗೆ ಘಟನೆ ನಡೆದು 40 ವರ್ಷ ಕಳೆದಿದೆ.

    ಇದೀಗ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ದಾಖಲೆಗಳನ್ನು ಪರಿಶೀಲಿಸಿ, ಘಟನೆ ನಡೆದ ದಿನ ಅಂದರೆ 1981ರಲ್ಲಿ ಈ ವ್ಯಕ್ತಿ ಅಪ್ರಾಪ್ತನಾಗಿದ್ದ ಎಂದಿದೆ. 1965ರಲ್ಲಿ ಹುಟ್ಟಿರುವ ಈತ ಘಟನೆ ನಡೆದಾಗ 16 ವರ್ಷದ ಆಸುಪಾಸಿನಲ್ಲಿ ಇದ್ದ ಎಂದ ಕೋರ್ಟ್​, ಈ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಯಿಂದ ಆತನನ್ನು ಮುಕ್ತಗೊಳಿಸಲಾಗಿದೆ.

    ಪ್ರಕರಣವನ್ನು ಬಾಲ ನ್ಯಾಯಮಂದಿರಕ್ಕೆ ವರ್ಗಾಯಿಸಲಾಗಿದ್ದು, ಅಪ್ರಾಪ್ತರಿಗೆ ಇರುವ ಕಾನೂನಿನ ಅನ್ವಯ ವಿಚಾರಣೆ ನಡೆಸುವಂತೆ ಕೋರ್ಟ್​ ನಿರ್ದೇಶಿಸಿದೆ. ಮುಂದಿನ ಏಳು ದಿನಗಳಲ್ಲಿ ಈತನನ್ನು ಉತ್ತರ ಪ್ರದೇಶದ ಬಹ್ರೇಚ್‌ನಲ್ಲಿರುವ ಬಾಲ ನ್ಯಾಯಮಂದಿರದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ.

    2000 ರ ಬಾಲಾರೋಪಿ ನ್ಯಾಯ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ, ಅಪರಾಧ ಸಾಬೀತಾದರೆ ತಪ್ಪಿತಸ್ಥನನ್ನು ಸುಧಾರಣಾ ಕೇಂದ್ರದಲ್ಲಿ ಗರಿಷ್ಠ ಮೂರು ವರ್ಷಗಳವರೆಗೆ ಇರಿಸಬಹುದು.

    ನನಗೆ ಐವರು ಗಂಡಂದಿರು, ಮೂವರು ಅಪ್ಪಂದಿರು: ನಮ್ಮಲ್ಲಿದು ಕಾಮನ್​, ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾಳೆ ಯುವತಿ…

    ಹಾಥರಸ್​ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!

    ಅಧಿಕಾರ ನಮ್ಮ ಕೈಯಲ್ಲಿದ್ದಿದ್ರೆ 15 ನಿಮಿಷದಲ್ಲೇ ಚೀನಿ ಸೈನಿಕರು ಕಾಲ್ಕೀಳುತ್ತಿದ್ದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts