More

    ಕಚೇರಿಯಲ್ಲಿಯೇ ಕಿಸ್​ ಕೊಟ್ಟು ಕೆಲಸ ಕಳೆದುಕೊಂಡ ಕೊಪ್ಪಳ ತಹಶೀಲ್ದಾರ್​!

    ಕುಷ್ಟಗಿ: ಕೊಪ್ಪಳ ನಗರಾಭಿವೃದ್ಧಿ ಕೋಶ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗುರುಬಸವರಾಜ್‌ ಎರಡು ತಿಂಗಳ ಹಿಂದೆ ಕುಷ್ಟಗಿ ತಹಶೀಲ್ದಾರರಾಗಿದ್ದ ವೇಳೆ ಕಚೇರಿಯಲ್ಲಿ ನಡೆಸಿದ್ದ ಕಿಸ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

    ಎರಡು ತಿಂಗಳ ನಂತರ ಈ ಪ್ರಕರಣ ಬೆಳಕಿಗೆ ಬಂದು ಇದರ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು.

    ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಗೆ ಕಚೇರಿಯ ಒಳಗೇ ಮುತ್ತುಕೊಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ವರ್ಗಾವಣೆಯಾಗಿ ಈಗ ಅವರು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಅವರನ್ನು ಅಮಾನತು ಮಾಡಲಾಗಿದೆ.

    ಇದನ್ನೂ ಓದಿ: ಮಾತಿಲ್ಲ… ಕಥೆಯಿಲ್ಲ… ಚಿಕ್ಕಮಗಳೂರಲ್ಲೊಂದು ಅಪರೂಪದ ಪ್ರೇಮ್​ ಕಹಾನಿ…

    ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಮಹಿಳೆ ದೂರು ದಾಖಲಿಸಿದ್ದು ನ್ಯಾಯ ದೊರಕಿಸಿಕೊಡುವಂತೆ ಬೇಡಿಕೊಂಡಿದ್ದರು. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿ ಬಂದಾಗಿನಿಂದ ನನ್ನೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದ. ಪ್ರತಿನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ನೊಂದ ಮಹಿಳೆ ಪ್ರಕರಣದಲ್ಲಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು.

    ದೂರು ದಾಖಲಿಸಿ ಕೊಂಡ ಕುಷ್ಟಗಿ ಪೊಲೀಸರು ಐಪಿಸಿ ಕಲಂ 354(ಸ್ತ್ರೀ ಕಿರಿಕಿರಿ) 354(ಬಿ), 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

    ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ತಮ್ಮ ಕಚೇರಿಯಲ್ಲಿ ಈ ರೀತಿ ಮಾಡಿ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ಇವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಕರೊನಾ ಬಿಕ್ಕಟ್ಟಿನಲ್ಲೂ ಈ ಶಿಕ್ಷಕಿಯಾದರು ಕೋಟ್ಯಧಿಪತಿ!

    ಕೇಂದ್ರದಿಂದ ಫಲಾನುಭವಿಗಳಿಗೆ ಸಿಗಲಿದೆ ₹6 ಸಾವಿರ: ಹೆಸರಿದೆಯೇ ನೋಡಿಕೊಳ್ಳಿ…

    ಮಿನಿ ಧರಿಸಿ, ಕೆಳಕ್ಕೆ ಬಗ್ಗಿ ‘ಸೆಕ್ಸಿ ಶಾಪಿಂಗ್’ ಮಾಡೋ​ ಟಿಪ್ಸ್​ ಕೊಟ್ಟಾಕೆ ಸಿಲುಕಿದಳು ಪೇಚಿಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts