More

    ಚಾರಣದಲ್ಲಿ ಸಿಲುಕಿಬಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಸೇನೆ: 2 ದಿನಗಳ ಘಟನೆ ಕೇಳಿದ್ರೆ ಮೈ ಝಂ ಎನ್ನುತ್ತೆ!

    ಕುರುಂಬಚಿ (ಕೇರಳ): ಕೇರಳದ ಕುರುಂಬಚಿಯಲ್ಲಿ ಸ್ನೇಹಿತರ ಜತೆ ಚಾರಣಕ್ಕೆ ಹೋಗಿ ಬಂಡೆಯಲ್ಲಿ ಸಿಲುಕಿ ಬಿದ್ದ ಯುವಕನ ಪ್ರಾಣವನ್ನು ಭಾರತೀಯ ಸೇನಾ ಪಡೆ ಕೊನೆಗೂ ಉಳಿಸಿದೆ. ಎರಡು ದಿನಗಳ ಅವಿತರ ಪ್ರಯತ್ನದ ನಂತರ ಯುವಕ ಬದುಕಿ ಬಂದಿದ್ದಾನೆ. ಎರಡು ದಿನಗಳವರೆಗೆ ನಡೆದ ಈ ಘಟನೆ ಕೇಳಿದರೆ ಮೈ ಝುಂ ಎನ್ನುವುದು ದಿಟ.

    ಈ ಅದೃಷ್ಟವಂತ ಯುವಕನ ಹೆಸರು ಬಾಬು. ಈತ ತನ್ನ ನಾಲ್ವರು ಸ್ನೇಹಿತರ ಜತೆ ಚಾರಣಕ್ಕೆ ಹೋಗಿದ್ದ. ಹಿಂತಿರುಗುವಾಗ ಬಾಬು ಕಾಲು ಜಾರಿ ಬಿದ್ದಿದ್ದಾನೆ. ಬೆಟ್ಟದ ಇಳಿಜಾರಿನಲ್ಲಿ ಇದ್ದ ಒಂದು ಸಂದಿಯೊಳಗೆ ಬಾಬು ಸಿಕ್ಕಿ ಹಾಕಿಕೊಂಡಿದ್ದರಿಂದ ಪ್ರಾಣಕ್ಕೆ ಅಪಾಯವಾಗಲಿಲ್ಲ. ಆದರೆ ಇದು ತೀರಾ ಇಕ್ಕಟ್ಟಾದ ಸ್ಥಳವಾಗಿದ್ದರಿಂದ ಅತನನ್ನು ಅಲ್ಲಿಂದ ಕಾಪಾಡುವುದು ಸಾಮಾನ್ಯ ಜನರ ಮಾತಾಗಿರಲಿಲ್ಲ.

    ಎಲ್ಲಾ ಪ್ರಯತ್ನ ವಿಫಲವಾದಾಗ ಆತನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಲಂಪುಳ ಪೊಲೀಸರು ಸ್ಥಳಕ್ಕೆ ಬಂದರೂ ಅದಾಗಲೇ ಮಧ್ಯರಾತ್ರಿಯಾದ್ದರಿಂದ ಯುವಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಲ್ಲಿಯೇ ಉಳಿದುಕೊಂಡ ಪೊಲೀಸರು ಬೆಳಗ್ಗೆ ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿತು. ಆದರೆ, ಆತ ಎಲ್ಲಿದ್ದಾನೆ ಎಂದು ತಿಳಿಯುವುದೇ ಕಷ್ಟವಾಗಿ ಹೋಗಿತ್ತು. ಏಕೆಂದರೆ ಕಡಿದಾದ ಸಂದಿಯಲ್ಲಿ ಆತ ಸಿಲುಕಿದ್ದ.

    ಅಂತೂ ಬಾಬು ಸಿಲುಕಿದ್ದ ಸ್ಥಳ ಗೊತ್ತಾಯಿತು. ಆದರೆ ರಕ್ಷಣೆ ಮಾಡುವುದು ಬಹುದೊಡ್ಡ ಕೆಲಸವಾಗಿತ್ತು. ನಂತರ ಡ್ರೋನ್ ತರಿಸಲಾಯಿತು. ಅದರಿಂದ ನಿಖರ ಸ್ಥಳ ಪತ್ತೆ ಹಚ್ಚಲಾಯಿತಾದರೂ ಬದುಕಿಸುವುದು ಕಷ್ಟವೇ ಆಗಿತ್ತು. ನಂತರ ಕೊಚ್ಚಿ ನಗರ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್‌ ಸಹಾಯ ಕೇಳಲಾಯಿತು. ಹೆಲಿಕಾಪ್ಟರ್ ಬಂದರೂ ಬಾಬು ಸಿಲುಕಿರುವ ಸ್ಥಳದ ಬಳಿ ಹೋಗಲು ಸಾಧ್ಯವಾಗಲಿಲ್ಲ. ನಂತರ ಪಾಲಕ್ಕಾಡ್ ಕಮಿಷನರ್ ಆಗಿರುವ ಮೃನ್ಮಯಿ ಜೋಶಿ ಶಶಾಂಕ್ ಅವರು ನೌಕಾದಳ ಹೆಲಿಕಾಪ್ಟರ್ ಸಹಾಯ ಕೋರಿದರು.

    ಕೊನೆಗೆ ನೇವಿ ಹೆಲಿಕಾಪ್ಟರ್ ಸ್ಥಳಕ್ಕೆ ಕರೆತರಲಾಯಿತು. ಬಾಬು ಸಿಲುಕಿರಬಹುದಾದ ಸ್ಥಳಕ್ಕೆ ಹಗ್ಗವನ್ನು ಜೋತು ಬಿಟ್ಟು ಅದರಿಂದ ಬಾಬುನನ್ನು ಕಾಪಾಡಲು ಪ್ರಯತ್ನಿಸಲಾಯಿತಾದರೂ ಅದು ಕೂಡ ಯಶಸ್ವಿಯಾಗಲಿಲ್ಲ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಾಹಿತಿ ಹೋಯಿತು. ಭಾರತೀಯ ಸೈನ್ಯದ ಸಹಾಯ ಕೋರಲಾಯಿತು. ಸೇನೆಯ ಪರ್ವತಾರೋಹಣ ವಿಭಾಗದ ನಿಪುಣ ಯೋಧರ ತಂಡವೊಂದು ಬೆಂಗಳೂರಿನಿಂದ ನಿಗದಿತ ಸ್ಥಳಕ್ಕೆ ತಲುಪಿತು.

    43 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಬಾಬುನನ್ನು ಕೊನೆಗೂ ಯಶಸ್ವಿಯಾಗಿ ತಲುಪಲಾಯಿತು. ಸೇನಾಪಡೆ ಬೆಟ್ಟದ ತುದಿ ತಲುಪಿ ಕೆಳಗೆ ಬಾಬು ಕುಳಿತಿದ್ದ ಜಾಗಕ್ಕೆ ಹಗ್ಗ ಬಿಗಿದಿತ್ತು. ಸುರಕ್ಷತಾ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸಿ ಬಾಬು ಅವರನ್ನು ಸೇನೆ ಮೇಲೆತ್ತಿದೆ.

    ಇಲ್ಲಿದೆ ನೋಡಿ ವಿಡಿಯೋ:

    ’ಹಿಜಾಬ್, ಕೇಸರಿ ಶಾಲಾ ಕ್ಯಾಂಪಸ್‌ ಒಳಗೆ ಸಲ್ಲ: ಎಲ್ಲವೂ ಕಾಂಗ್ರೆಸ್‌ ಷಡ್ಯಂತ್ರ ಎನ್ನುವುದು ತಿಳಿದಿದೆ’

    VIDEO: ಮಾರುಕಟ್ಟೆಗೆ ಬಿಡುಗಡೆಯಾಯ್ತು ಹಾರುವ ಬೈಕ್‌- 2 ಗಂಟೆ ಚಾರ್ಜ್‌ ಮಾಡಿದ್ರೆ 20 ನಿಮಿಷ ಹಾರಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts