More

    ಶಸ್ತ್ರಧಾರಿಗಳು ವಿಮಾನದಿಂದ ಇಳಿಸಿದರು… ದಾದಿಯರು ಬಂದು ನಮ್ಮನ್ನು ಬೆತ್ತಲೆಗೊಳಿಸಿದರು… ಭಯಾನಕ ಘಟನೆ ಬಿಚ್ಚಿಟ್ಟ ಮಹಿಳೆಯರು!

    ಕತಾರ್‌: ಕಳೆದ ವರ್ಷದ ಅಕ್ಟೋಬರ್‌ ತಿಂಗಳು. ಕತಾರ್‌ನ ದೋಹಾದಲ್ಲಿನ ಹಮದ್ ವಿಮಾನ ನಿಲ್ದಾಣದಲ್ಲಿ ಅನೇಕ ಮಹಿಳೆಯರು ಪ್ರಯಾಣ ನಡೆಸಲು ಕತಾರ್ ಏರ್‌ವೇಸ್ ಹತ್ತಿಕುಳಿತಿದ್ದರು.

    ಆದರೆ ವಿಮಾನ ನಿಲ್ದಾಣದ ಶಸ್ತ್ರಸಜ್ಜಿತ ಸಿಬ್ಬಂದಿ ಅಲ್ಲಿರುವ ಎಲ್ಲ ಮಹಿಳೆಯರನ್ನು ಕೆಳಕ್ಕೆ ಇಳಿಸಿ ಒಂದು ಕೊಠಡಿಗೆ ಹೋಗುವಂತೆ ಹೇಳಿದರು. ನಂತರ ಅವರನ್ನು ಅಲ್ಲಿಯ ದಾದಿಯೊಬ್ಬರು ಬೆತ್ತಲುಗೊಳಿಸಿ ಖಾಸಗಿ ಅಂಗದ ಪರೀಕ್ಷೆಯಲ್ಲಿ ತೊಡಗಿದರು. ಇವರ ಪೈಕಿ ಹೆಚ್ಚಿನವರು ಆಸ್ಟ್ರೇಲಿಯಾದ ಮಹಿಳೆಯರಾಗಿದ್ದರು. ಏಕೆ ಈ ಪರೀಕ್ಷೆ ಎಂದು ಅಲ್ಲಿಯ ಸಿಬ್ಬಂದಿ ಹೇಳಿದರೂ ಏನೊಂದು ಅರ್ಥವಾಗದ ಸ್ಥಿತಿಯಲ್ಲಿ ಮಹಿಳೆಯರಿದ್ದರು.

    ಕೊನೆಗೆ ತಿಳಿದದ್ದು ಏನೆಂದರೆ, ಆ ವಿಮಾನ ನಿಲ್ದಾಣದ ತೊಟ್ಟಿಯಲ್ಲಿ ಆಗ ತಾನೇ ಹುಟ್ಟಿದ ಶಿಶುವೊಂದು ಪತ್ತೆಯಾಗಿತ್ತು. ಅದು ಆಗಷ್ಟೇ ಜನಿಸಿರುವ ಹಿನ್ನೆಲೆಯಲ್ಲಿ ಅದರ ಅಮ್ಮ ವಿಮಾನ ನಿಲ್ದಾಣದ ಒಳಗೇ ಇರಬಹುದು ಎಂಬ ಶಂಕೆ ಸಿಬ್ಬಂದಿಗೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿದ್ದ ಎಲ್ಲಾ ಮಹಿಳೆಯರನ್ನೂ ಈ ರೀತಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಈ ಬಗ್ಗೆ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ನಂತರ ಈ ವಿಷಯ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಕತಾರ್ ಸರ್ಕಾರವೇ ಮಹಿಳೆಯರ ಕ್ಷಮೆ ಕೋರಿತು. ಮಾತ್ರವಲ್ಲದೇ ವಿಮಾನ ನಿಲ್ದಾಣದ ಅಧಿಕಾರಿಯನ್ನು ಅಮಾನತುಗೊಳಿಸಿದ ಜೈಲು ಶಿಕ್ಷೆಯನ್ನೂ ವಿಧಿಸಲಾಯಿತು.

    ಇದು ನಡೆದು ವರ್ಷ ಕಳೆದ ಮೇಲೆ ಈಗ ಪುನಃ ಈ ಸುದ್ದಿ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ, ಅಂದು ಹಿಂಸೆ ಅನುಭವಿಸಿದ ಮಹಿಳೆಯರು ಇದೀಗ ಪುನಃ ತಮಗೆ ನ್ಯಾಯಕೋರಿ ಕತಾರ್‌ ವಿರುದ್ಧ ಸಿಡಿದೆದ್ದಿದ್ದಾರೆ. ಆ ಘಟನೆ ನಂತರ ಮೌನ ವಹಿಸಿರುವ ಕತಾರ್‌ ವಿರುದ್ಧ ಇವರೆಲ್ಲಾ ರೊಚ್ಚಿಗೆದ್ದಿದ್ದು, ನ್ಯಾಯಕ್ಕಾಗಿ ಹೋರಾಟ ಶುರು ಮಾಡಿದ್ದಾರೆ.

    ಭಯಾನಕ ಅನುಭವ ಬಿಚ್ಚಿಟ್ಟ ಮಹಿಳೆಯರು:
    ತಮಗಾಗಿರುವ ಭಯಾನಕ ಅನುಭವವನ್ನು ಮಹಿಳೆಯರು ಹೇಳಿಕೊಂಡಿದ್ದಾರೆ. ‘ಕತಾರ್ ಏರ್‌ವೇಸ್ ವಿಮಾನದಿಂದ ಶಸ್ತ್ರಸಜ್ಜಿತ ಗಾರ್ಡ್‌ಗಳು ಆಂಬ್ಯುಲೆನ್ಸ್‌ಗೆ ನಮ್ಮನ್ನು ಕರೆದೊಯ್ಯುವ ಮೊದಲು ಟಾರ್ಮ್ಯಾಕ್‌ನಲ್ಲಿ ನಮ್ಮನ್ನು ಬೆತ್ತಲೆಗೊಳಿಸಿ ದಾದಿಯರು ಪರಿಶೀಲಿಸಿದರು. ನಮಗೆ ಏನಾಗುತ್ತಿದೆ ಎನ್ನುವುದೇ ತಿಳಿಯಲಿಲ್ಲ. ನಾವ್ಯಾರೂ ಇಂಥ ಕೆಟ್ಟ ಪರೀಕ್ಷೆಗೆ ಸಮ್ಮತಿಯನ್ನೂ ಕೊಡಲಿಲ್ಲ. ಕಾರಣ ಕೇಳಿದಾಗ ನಮಗೆ ಯಾರು ಕೂಡ ಸ್ಪಷ್ಟ ಉತ್ತರ ಕೊಡಲಿಲ್ಲ. ಆ ದಿನ ಅದೆಷ್ಟು ಹಿಂಸೆ ಅನುಭವಿಸಿದ್ದೇವೆ ಎನ್ನುವುದನ್ನು ಹೇಳುವುದು ಕೂಡ ಕಷ್ಟ’ ಎಂದಿದ್ದಾರೆ. ಅದು ಅತ್ಯಂತ ಭಯಾನಕ ಆಕ್ರಮಣಕಾರಿ ದೈಹಿಕ ಪರೀಕ್ಷೆಯಾಗಿತ್ತು ಎಂದಿದ್ದಾರೆ.

    ‘ಬಂದೂಕು ಹಿಡಿದುಕೊಂಡು ಬಂದಿದ್ದ ಆ ಶಸ್ತ್ರಧಾರಿಗಳನ್ನು ನೋಡಿದಾಗ ನನಗೆ ಜೀವವೇ ಬಾಯಿಗೆ ಬಂದಂತಾಗಿತ್ತು. ಒಂದೋ ನನ್ನನ್ನು ಈತ ಕೊಲ್ಲುತ್ತಾನೆ, ಇಲ್ಲವೇ ವಿಮಾನದಲ್ಲಿ ನನ್ನ ಗಂಡನನ್ನು ಈತ ಮುಗಿಸುತ್ತಾನೆ. ಅದಕ್ಕಾಗಿಯೇ ಈತ ಬಂದೂಕು ಹಿಡಿದು ಬಂದಿದ್ದಾನೆ ಎಂದುಕೊಂಡೆ’ ಎಂದು ಮಹಿಳೆಯರೊಬ್ಬರು ಹೇಳಿದ್ದಾರೆ.

    ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿ ಕತಾರ್‌ ಮೌನವಹಿಸಿದರೆ ಸಾಕಾಗಲ್ಲ. ಇನ್ನು ಮುಂದೆ ತನ್ನ ದೇಶದಲ್ಲಿ ಎಲ್ಲಾ ಮಹಿಳಾ ಪ್ರಯಾಣಿಕರ ಸುರಕ್ಷತೆ ಮಾಡುವುದಾಗಿ ಅದು ವಾಗ್ದಾನ ಮಾಡಬೇಕಿದೆ. ಇಂಥ ದುರ್ಘಟನೆ ಕುರಿತಂತೆ ಇಡೀ ವಿಶ್ವದ ಮುಂದೆ ಕ್ಷಮೆ ಕೋರಬೇಕಿದೆ. ಇಲ್ಲದಿದ್ದರೆ ಈ ವಿಷಯವನ್ನು ನಾವು ಸುಮ್ಮನೇ ಬಿಡುವುದಿಲ್ಲ ಎಂದು ಆಸ್ಟ್ರೇಲಿಯಾದ ಸಂತ್ರಸ್ತ ಮಹಿಳೆಯರು ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ ಪುನಃ ಈ ವಿಷಯ ಇದೀಗ ವಿಶ್ವವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.

    ಡ್ರಗ್ಸ್‌ ಮಾರಾಟ ದಂಧೆಗಿಳಿದ ಅಮೆಜಾನ್‌? ಸಿಹಿತುಳಸಿ ನೆಪದಲ್ಲಿ ನಾಲ್ಕು ತಿಂಗಳಲ್ಲಿ ಒಂದು ಟನ್‌ ಮಾರಾಟ

     

    VIDEO: ಜನ್ಮದಿನದಂದು ಆಶೀರ್ವಚನ ನೀಡುತ್ತಲೇ ಲಿಂಗೈಕ್ಯರಾದ ಗೋಕಾಕ್‌ನ ಸ್ವಾಮೀಜಿ- ವಿಡಿಯೋದಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts