More

    ಇವಿಎಂ ಅಸಲಿಯತ್ತು: ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂ ತಮ್ಮ ಪಕ್ಷದವರಿಗೆ ಹೇಳಿದ್ದೇನು?

    ಪಟ್ನಾ: ಬಿಹಾರದಲ್ಲಿ ಎನ್​ಡಿಎ ಬಹುಮತ ಗಳಿಸುತ್ತಿದ್ದಂತೆಯೇ ಯಥಾಪ್ರಕಾರ ಕಾಂಗ್ರೆಸ್​ ಮುಖಂಡರು ವಿದ್ಯುನ್ಮಾನ ಮತಯಂತ್ರವನ್ನು (ಇವಿಎಂ) ದೂಷಿಸುವ ಚಾಳಿ ಮುಂದುವರೆಸಿದ್ದಾರೆ. ಇದಾಗಲೇ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ, ಡಾ. ಉದಿತ್ ರಾಜ್ ಸೇರಿದಂತೆ ಕೆಲವರು ಟ್ವೀಟ್​ ಮೂಲಕ ಇವಿಎಂ ಮಷಿನ್​ ಸರಿಯಿಲ್ಲ ಎಂದು ಟ್ವೀಟ್​ ಮೂಲಕ ಹೇಳಿಕೆ ನೀಡುತ್ತಿದ್ದಾರೆ.

    ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂ, ದಯವಿಟ್ಟು ಈ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ದೇಶದಲ್ಲಿ ಯಾವುದೇ ಚುನಾವಣೆಗಳ ಫಲಿತಾಂಶವು ಏನೇ ಬಂದರೂ ಮೊದಲು ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ವಿರುದ್ಧ ಹೇಳುವುದನ್ನು ಮೊದಲು ಬಿಡಿ ಎಂದಿದ್ದಾರೆ.

    ಯಾವುದೇ ಪಕ್ಷ ಆದರೂ ಇವಿಎಂ ದೋಷದಿಂದ ಫಲಿತಾಂಶದಲ್ಲಿ ವ್ಯತ್ಯಾಸ ಆಗುತ್ತಿದೆ ಎನ್ನುವ ಆರೋಪ ಮಾಡುವುದು ಸರಿಯಲ್ಲ. ನನ್ನ ಅನುಭವದ ಪ್ರಕಾರ, ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್​ಗಳು ಹೆಚ್ಚು ಉಪಯುಕ್ತ, ನಿಖರ ಹಾಗೂ ವಿಶ್ವಾಸಾರ್ಹವಾಗಿವೆ. ಆದ್ದರಿಂದ ಬೇರೆ ಪಕ್ಷ ಗೆದ್ದ ಮಾತ್ರಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ, ಡಾ. ಉದಿತ್ ರಾಜ್ ಅವರು ಇವಿಎಂ ಯಂತ್ರವನ್ನು ದೂರಿ ಮಾಡಿರುವ ಟ್ವೀಟ್​ ಭಾರಿ ಸುದ್ದಿಯಾಗುತ್ತಲೇ ಕಾರ್ತಿಯವರು ಈ ಟ್ವೀಟ್​ ಮಾಡಿದ್ದಾರೆ.

    ಇನ್ನು ಬಿಹಾರ ವಿಧಾನಸಭಾ ಚುನಾವಣೆಯ ವಿಷಯಕ್ಕೆ ಬರುವುದಾದರೆ, ಮಧ್ಯಾಹ್ನ 3.30ರ ಅಂಕಿ ಅಂಶಗಳ ಪ್ರಕಾರ, ಎನ್ ಡಿಎ ಮೈತ್ರಿಕೂಟ 128 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 73, ಜೆಡಿಯು 49, ವಿಐಪಿ 5 ಮತ್ತು ಹಿಂದೂಸ್ಥಾನ್ ಅವಂ ಮೋರ್ಚಾ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನ್ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಈ ಪೈಕಿ ಆರ್ ಜೆಡಿ 67, ಕಾಂಗ್ರೆಸ್ 20, ಎಡಪಕ್ಷ 18, ಬಿಎಸ್ ಪಿ 2, ಎಐಎಂಐಎಂ 2, ಎಲ್ ಜೆಪಿ 2, ಪಕ್ಷೇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಗ್ಗೆ ಬಿಹಾರ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದೆ.

    ‘ಜ್ಯೋತಿಷಿಗಳ ಬದಲು ಜನರ ನಾಡಿಮಿಡಿತ ಅರಿತಿದ್ರೆ ಕಾಂಗ್ರೆಸ್​ಗೆ ಹೀಗಾಗ್ತಿರಲಿಲ್ಲ’

    ಬಿಹಾರ ಫೈಟ್​- ನೆಟ್ಟಿಗರ ಮೀಮ್ಸ್​​ ನಿಜವಾಯ್ತು… ಇವಿಎಂನಲ್ಲಿ ದೋಷ ಎಂದ ಕಾಂಗ್ರೆಸ್!​

    ಎಂಜಿಬಿ ಎಂದರೆ ಮಹಾಘಟ್​​ಬಂಧನ ಅಲ್ಲ… ‘ಮರ್​ ಗಯಾ ಭಾಯ್’ ಎಂದ್ರಂತೆ ರಾಹುಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts