More

    ಯೂಕ್ರೇನ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ರಾಜ್ಯದ‌ ವಿದ್ಯಾರ್ಥಿಗಳು- ಸುರಕ್ಷತೆಗೆ ಸಿಎಂ ಭರವಸೆ

    ಬೆಂಗಳೂರು: ಯುದ್ಧಗ್ರಸ್ತ ಯೂಕ್ರೇನ್ ವಿಮಾನ‌ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ 100 ಭಾರತೀಯರ ಪೈಕಿ ರಾಜ್ಯದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದು, ಸುರಕ್ಷಿತವಾಗಿ ಕರತೆರುವ ಪ್ರಯತ್ನಗಳು ಚಾಲ್ತಿಯಲ್ಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

    ವಿಧಾನಸೌಧದಲ್ಲಿ ಮಾಧ್ಯಮದವರಿಗೆ‌ ಗುರುವಾರ ಪ್ರತಿಕ್ರಿಯಿಸಿದ ಅವರು, ವಿಷಯ‌ ಗಮನಕ್ಕೆ ಬರುತ್ತಲೇ‌ ಕೇಂದ್ರ ಸರ್ಕಾರ, ವಿದೇಶಾಂಗ ಕಾರ್ಯದರ್ಶಿ ಹಾಗೂ ಯೂಕ್ರೇನ್ ನಲ್ಲಿರುವ ಭಾರತೀಯ ರಾಯಭಾರ‌‌ ಕಚೇರಿ ಜತೆಗೆ ಸಂಪರ್ಕ ಸಾಧಿಸಿದ್ದು, ವಿದೇಶಾಂಗ ಸಚಿವರೊಂದಿಗೆ ಮಾತನಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.

    ಭಾರತ ಸರ್ಕಾರ ನೀಡಿದ ಮಾಹಿತಿಯಂತೆ ಯೂಕ್ರೇನ್ ನಲ್ಲಿರುವ ಭಾರತೀಯರು ತಂಡಗಳಾಗಿ ದೇಶಕ್ಕೆ ಮರಳುತ್ತಿದ್ದು, ಕೊನೆಯ ತಂಡವು ಬಸ್ ನಲ್ಲಿ ಕುಳಿತು‌ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಅಷ್ಟರೊಳಗೆ ವಿಮಾನಗಳ ಸಂಚಾರ ಸ್ಥಗಿತವಾಗಿ ಮರು ಪ್ರಯಾಣ ಸಾಧ್ಯವಾಗಿಲ್ಲ.

    ರಾಜ್ಯದ 10 ವಿದ್ಯಾರ್ಥಿಗಳು ಸೇರಿದಂತೆ 100 ಕ್ಕೂ ಭಾರತೀಯರ ಜತೆಗೆ ಭಾರತದಲ್ಲಿರುವ ಯೂಕ್ರೇನ್ ರಾಯಭಾರಿ ಕಚೇರಿ ಹಾಗೂ ಯೂಕ್ರೇನ್ ನಲ್ಲಿರುವ ಭಾರತೀಯ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಜತೆಗೆ ಸಿಲುಕಿಕೊಂಡವರ ಕೂಡ ಭಾರತೀಯ ದೂತವಾಸ ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸುರಕ್ಷಿತ ಸ್ಥಳದ ಕುರಿತು ಅಲ್ಲಿನ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದು, ರಾಜ್ಯ ಸರ್ಕಾರವೂ ನಿರಂತರ ಸಂಪರ್ಕದಲ್ಲಿದೆ. ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ‌ ವಾಪಸ್ ಕರೆತರುವ ಪ್ರಯತ್ನ ಮುಂದುವರಿಸಿದೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

    ಷೇರುಪೇಟೆ ಹೂಡಿಕೆದಾರರಿಗೆ ಶಾಕ್​ ಕೊಟ್ಟ ರಷ್ಯಾ: ಒಂದೇ ತಾಸಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕುಸಿತ!

    ರಷ್ಯಾ-ಯೂಕ್ರೇನ್​ ಬಿಕ್ಕಟ್ಟು : ಭಾರತದ ವಿಮಾನಗಳು ವಾಪಸ್​- ಕೀವ್​ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts