More

    ಕಂಗನಾ v/s ಡಿ. ರೂಪಾ- ಹೊತ್ತಿ ಉರಿತಿದೆ ಪಟಾಕಿಯ ಕಿಡಿ: ಮೀಸಲಾತಿ ಅಡ್ಡ ಪರಿಣಾಮ ಅಂದ್ರು ನಟಿ!

    ಬೆಂಗಳೂರು: ಪಟಾಕಿಯ ಕುರಿತಂತೆ ಐಪಿಎಸ್​ ಅಧಿಕಾರಿ ಡಿ. ರೂಪಾ ಟ್ವಿಟರ್​ನಲ್ಲಿ ಮಾಡಿರುವ ಪೋಸ್ಟ್​ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ನಟಿ ಕಂಗನಾ ರಣಾವತ್​ ಎಂಟ್ರಿ ನೀಡುವ ಮೂಲಕ ಪಟಾಕಿಯ ಕಿಡಿ ಹೊತ್ತಿ ಉರಿಯತೊಡಗಿದೆ!

    ಪಟಾಕಿ ಬ್ಯಾನ್​ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅದನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಡಿ. ರೂಪಾ ಪೋಸ್ಟ್​ ಮಾಡಿದ್ದರು. ನವೆಂಬರ್‌ 14ರಂದು ಹಾಕಿದ್ದ ಈ ಪೋಸ್ಟ್​ನಲ್ಲಿ ಅವರು, ‘ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯೊಂದಿಗೆ ಮೊದಲಿನಿಂದಲೂ ಬಂದದ್ದೇನಲ್ಲ. ಮಹಾಕಾವ್ಯಗಳು, ಪುರಾಣಗಳಲ್ಲಿಯೂ ಪಟಾಕಿಯ ಕುರಿತಂತೆ ಯಾವುದೇ ಉಲ್ಲೇಖವಿಲ್ಲ. ಪಟಾಕಿ ಭಾರತಕ್ಕೆ ಕಾಲಿಟ್ಟಿದ್ದು ಯುರೋಪಿಯನ್ನರ ಜತೆ’ ಎಂದು ಬರೆದುಕೊಂಡಿದ್ದರು.

    ಈ ಪೋಸ್ಟ್​ಗೆ ಇದಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪರ–ವಿರೋಧ ಚರ್ಚೆ ನಡೆಯುತ್ತಿವೆ. ಪುರಾಣಗಳಲ್ಲಿಯೂ ಪಟಾಕಿಯ ಪ್ರಸ್ತಾಪವಿದೆ ಎಂದು ಸಾಬೀತು ಮಾಡುವುದಾಗಿ ಕೆಲವರು ಹೇಳಿಕೊಂಡಿದ್ದು, ಇದರ ಬಗ್ಗೆ ದೀಪಾವಳಿ ಮುಗಿದರೂ ಚರ್ಚೆ ನಿಂತಿಲ್ಲ.

    ಇದೀಗ ನಟಿ ಕಂಗನಾ ರನೌತ್ ಬುಧವಾರ ರೂಪಾ ಅವರ ಹೇಳಿಕೆಗಳನ್ನು ಟೀಕಿಸಿ ಸರಣಿ ಟ್ವೀಟ್‌ ಮಾಡುವ ಮೂಲಕ ಚರ್ಚೆಗೆ ಇನ್ನಷ್ಟು ಆಸ್ಪದ ಕೊಟ್ಟಿದ್ದಾರೆ.

    ಅಷ್ಟಕ್ಕೂ ಕಂಗನಾ ಎಂಟ್ರಿ ಕೊಡಲು ಕಾರಣವೇನೆಂದರೆ, ಡಿ.ರೂಪಾ ಅವರು ತಮ್ಮ ಪೋಸ್ಟ್​ ವಿರುದ್ಧ ಕಮೆಂಟ್​ ಹಾಕಿರುವವರ ಟ್ವಿಟರ್​ ಖಾತೆಯನ್ನು ಬ್ಲಾಕ್​ ಮಾಡುವುದಾಗಿ ಹೇಳಿದ್ದ ಕಾರಣ. ‘ಅರ್ಧಂಬರ್ಧ ಜ್ಞಾನದೊಂದಿಗೆ ಜನರ ಹಾದಿ ತಪ್ಪಿಸುವಿರಿ. ನೀವು ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಹಾಗೂ ಆದೇಶದ ಬಗ್ಗೆ ಗೌರವವನ್ನೂ ತೋರುತ್ತಿಲ್ಲ, ನಿಮ್ಮಂಥ ಟ್ರೋಲರ್‌ಗಳೊಂದಿಗೆ ಚರ್ಚೆ ಮುಂದುವರಿಸುವುದು ಅನವಶ್ಯಕ’ ಎಂದು ರೂಪಾ ಟ್ವೀಟಿಸಿದ್ದು, ಕೆಲವು ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುತ್ತೇನೆ ಎಂದಿದ್ದರು.

    ಈ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿ ‘ಪುರಾಣಗಳಲ್ಲಿ ಪಟಾಕಿಯ ಪ್ರಸ್ತಾಪವಿರುವ ಬಗ್ಗೆ ದಾಖಲೆಗಳನ್ನು ಒದಗಿಸಿದ್ದರೂ, ಅವುಗಳನ್ನು ರೂಪಾ ಅವರು ಒಪ್ಪಲಿಲ್ಲ. ಬದಲಿಗೆ ಬ್ಲಾಕ್​ ಮಾಡುವುದಾಗಿ ಹೇಳುತ್ತಿದ್ದಾರೆ ಎಂದಿದ್ದಾರೆ.

    ಈ ಮಾತಿಗೆ ಸಮ್ಮತಿ ಸೂಚಿಸಿರುವ ನಟಿ ಕಂಗನಾ’ ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಡಿ.ರೂಪಾ ಅವರಂತಹ ಜನರನ್ನು ನೇಮಿಸುತ್ತದೆ. ಆದರೆ, ಅವರು ನೋಡಿದರೆ ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲುವ ಬದಲು ಖಾತೆಗಳನ್ನೇ ಬ್ಲಾಕ್​ ಮಾಡಿದ್ದಾರೆ, ನಿಮಗೆ ನಾಚಿಗೆಯಾಗಬೇಕು’ ಎಂದಿದ್ದಾರೆ.

    ಅಷ್ಟು ಸಾಲದು ಎಂಬಂತೆ, ‘ಮೀಸಲಾತಿಯ ಅಡ್ಡ ಪರಿಣಾಮಕ್ಕೆ ಉದಾಹರಣೆ ಇದು. ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಶಮನಗೊಳಿಸುವ ಕಾರ್ಯಕ್ಕಿಂತ ಘಾಸಿ ಮಾಡುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಏನೊಂದೂ ತಿಳಿದಿಲ್ಲ, ಆದರೆ ಅವರ ಅಸಾಮರ್ಥ್ಯದಿಂದಾಗಿ ಹತಾಶೆ ಹೊರಬರುತ್ತಿರುವುದು ಖಂಡಿತ’ ಎಂದಿದ್ದಾರೆ.

    ಸದ್ಯ ಈ ವಾದ, ಪ್ರತಿವಾದದ ಸರಣಿ ಮುಂದುವರೆದಿದ್ದು, ಎಲ್ಲಿಯವರೆಗೆ ಬಂದು ನಿಲ್ಲುತ್ತದೋ ಸದ್ಯಕ್ಕಂತೂ ಗೊತ್ತಿಲ್ಲ…

    ಸೋನಿಯಾ- ಮನ್​ಮೋಹನ್​ ಸಿಂಗ್​ ಸಿಕ್ರೇಟ್​ ಬಿಚ್ಚಿಟ್ಟ ಒಬಾಮಾ: ಭಾರತದಲ್ಲಿ ಸಂಚಲನ!

    ರಾಜ್ಯಕ್ಕೆ ಶೀಘ್ರವೇ ಇನ್ನೊಂದು ಜಿಲ್ಲೆ- ಸಂಪುಟದಲ್ಲಿ ಸಿಕ್ತು ತಾತ್ವಿಕ ಅನುಮೋದನೆ

    ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್​ ಹಾಜರಾತಿ ಶುರು- ಸರ್ಕಾರದ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts