More

    ಹುಬ್ಬಳ್ಳಿ-ಧಾರವಾಡ ಕಾರ್ಪೋರೇಷನ್‌​ ಸೇರಿದಂತೆ ಹಲವೆಡೆ ವಿವಿಧ ಪದವೀಧರರಿಗೆ ಉದ್ಯೋಗಾವಕಾಶ

    ಹುಬ್ಬಳ್ಳಿ-ಧಾರವಾಡ ಮುನ್ಸಿಪಾಲ್​ ಕಾರ್ಪೋರೇಷನ್‌​ (ಎಚ್​ಡಿಎಂಸಿ)ನಲ್ಲಿ ತಾಂತ್ರಿಕ ಕೌಶಲ ಹೊಂದಿರುವ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಈ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಮೊದಲು ಆಗಸ್ಟ್​ನಲ್ಲಿ ಈ ಹುದ್ದೆಗಳಿಗೆ ಆಹ್ವಾನಿಸಲಾಗಿದ್ದು, ಈಗ ಮತ್ತೆ 2ನೇ ಕರೆ ನೀಡಲಾಗಿದೆ.

    ಹುದ್ದೆ ವಿವರ
    * ಸ್ಟಾಫ್ಟ್‌​ವೇರ್​ ಇಂಜಿನಿಯರ್​ – 2
    * ನೆಟ್​ವರ್ಕ್​ ಅಡ್ಮಿನಿಸ್ಟ್ರೆಟರ್​ – 1
    * ಜೂನಿಯರ್​ ಪ್ರೋಗ್ರಾಮರ್​ – 2

    ವಿದ್ಯಾರ್ಹತೆ: ಕಂಪ್ಯೂಟರ್​ ಸೈನ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​/ ಇನ್​ಮೇರ್ಷನ್​ ಸೈನ್ಸ್​/ ಕಂಪ್ಯೂಟರ್​ ಅಪ್ಲಿಕೇಷನ್​ನಲ್ಲಿ ಬಿಇ/ ಬಿಟೆಕ್​/ ಎಂಸಿಎ, ಬಿಎಸ್ಸಿ (ಸಿಎಸ್​)/ ಬಿಸಿಎ/ ಎಂಎಸ್ಸಿ ಮಾಡಿದ್ದು, ಜಾವ/ ಸಿ++/ ಪೈಥಾನ್​ನಲ್ಲಿ ಜ್ಞಾನ ಹೊಂದಿರಬೇಕು. ಕನಿಷ್ಠ 2-3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ.

    ವೇತನ: ಸಾಫ್ಟ್‌ವೇರ್​ ಇಂಜಿನಿಯರ್​ ಹಾಗೂ ಅಡ್ಮನಿಸ್ಟ್ರೆಟರ್​ಗೆ ಮಾಸಿಕ 45,000 ರೂ., ಜೂ. ಪ್ರೊಗ್ರಾಮರ್​ಗೆ ಮಾಸಿಕ 20,000 ರೂ. ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 20.10.2021
    ಅಧಿಸೂಚನೆಗೆ: https://bit.ly/3DmC9BL
    ಮಾಹಿತಿಗೆ: http://www.hdmc.mrc.gov.in/



    ಗದಗ ಜಿಲ್ಲಾ ಪಂಚಾಯಿತಿಯಲ್ಲಿ ತಾಂತ್ರಿಕ ಸಹಾಯಕ ಹುದ್ದೆ

    ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗದಗ ಜಿಲ್ಲೆಯ ಜಿಲ್ಲಾ ಪಂಚಾಯಿತಿಗೆ ಮಂಜೂರಾಗಿರುವ ಒಂದು ತಾಂತ್ರಿಕ ಸಹಾಯಕ (ಟೆಕ್ನಿಕಲ್​ ಅಸಿಸ್ಟೆಂಟ್​-ಸಿವಿಲ್​) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಈ ಹುದ್ದೆಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಅರ್ಜಿ ಸಲ್ಲಿಸಲು ಕೋರಲಾಗಿದೆ.
    ಸಿವಿಲ್​ ವಿಷಯದಲ್ಲಿ ಬಿಇ/ ಬಿ.ಟೆಕ್​ ಪದವಿ ಪಡೆದಿರುವ ಗರಿಷ್ಠ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಕನಿಷ್ಠ 3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಹೆಚ್ಚಿನ ಮಾಹಿತಿಗೆ ಗದಗದ ಜಿಪಂ ಕಚೇರಿ, ನರೇಗಾ ಶಾಖೆ ಅಥವಾ ದೂ.ಸಂಖ್ಯೆ: 9916289100 ಅನ್ನು ಕಚೇರಿ ಅವಧಿಯಲ್ಲಿ ಸಂಪಕಿರ್ಸಬಹುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 17.10.2021
    ಅಧಿಸೂಚನೆಗೆ: https://bit.ly/2VJcCCl
    ಮಾಹಿತಿಗೆ: http://gadag.nic.in



    ಒಳಾಡಳಿತ ಇಲಾಖೆಯಲ್ಲಿ ಜಂಟಿ ನಿರ್ದೇಶಕ ಹುದ್ದೆ
    ಬೆಂಗಳೂರಿನಲ್ಲಿರುವ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಒಂದು ಜಂಟಿ ನಿರ್ದೇಶಕ (ತಾಂತ್ರಿಕ/ ಆರ್​ ಆ್ಯಂಡ್​ ಡಿ) ಹುದ್ದೆಗೆ ನಿಯೋಜನೆ ಮೇಲೆ ಅರ್ಜಿ ಆಹ್ವಾನಿಸಲಾಗಿದೆ. ಫಿಜಿಕ್ಸ್​/ ಕೆಮಿಸ್ಟ್ರಿ/ಬಾಟ್ನಿ/ ಜೂಲಜಿ/ ಕಂಪ್ಯೂಟರ್​ ಸೈನ್ಸ್​/ ಫಾರ್ಮಕಾಲಜಿ/ ಇಂಜಿನಿಯರಿಂಗ್​/ ಡಿಜಿಟಲ್​ ೋರೆನ್ಸಿಕ್ಸ್​/ ೊರೆನ್ಸಿಕ್​ ಸೈನ್ಸ್​ ಅಥವಾ ತತ್ಸಮಾನ ವಿಷಯದಲ್ಲಿ ಡಾಕ್ಟೋರಲ್​ ಪದವಿ ಪಡೆದಿರುವ ರಾಜ್ಯ/ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಯು ಒಂದು ವರ್ಷದ ಅವಧಿಗೆ ಒಳಪಟ್ಟಿದ್ದು, ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಅಧ್ಯಕ್ಷರು ಹಾಗೂ ಸರ್ಕಾರದ ಪ್ರಧಾನ ಕಾರ್ಯದಶಿರ್ (ಪಿಸಿಎಎಸ್​), ಜಂಟಿ ನಿರ್ದೇಶಕರು (ಟೆಕ್ನಿಕಲ್​/ ಆರ್​ ಆ್ಯಂಡ್​ ಡಿ) ಹುದ್ದೆಗಳ ನೇಮಕಾತಿ ಸಮಿತಿ, ಒಳಾಡಳಿತ ಇಲಾಖೆ, ಕೊಠಡಿ ಸಂಖ್ಯೆ 219, 2ನೇ ಮಹಡಿ, ವಿಧಾನಸೌಧ, ಬೆಂಗಳೂರು-01 ವಿಳಾಸಕ್ಕೆ ಅರ್ಜಿ ಸಲ್ಲಿಸತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೇ ದಿನ: ಜಾಹೀರಾತು ಪ್ರಕಟಗೊಂಡ 20ದಿನದ ಒಳಗೆ (28.10.2021)
    ಅಧಿಸೂಚನೆಗೆ: ವಿಜಯವಾಣಿ ಪತ್ರಿಕೆಯ ಅ.8ನೇ ತಾರೀಕಿನ ಸಂಚಿಕೆ ಪುಟ 4ಸಿ ನೋಡಿ.
    ಮಾಹಿತಿಗೆ: 080-22033380

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts