More

    ಜೆಇಇ: 18 ಮಂದಿ ಟಾಪರ್‌ಗಳಲ್ಲಿ ಸ್ಥಾನ ಗಿಟ್ಟಿಸಿದ ಬೆಂಗಳೂರಿನ ಗೌರಬ್ ದಾಸ್

    ಬೆಂಗಳೂರು: ಜೆಇಇ ಮುಖ್ಯ ಪರೀಕ್ಷೆಯ ಲಿತಾಂಶ ಬುಧವಾರ ಪ್ರಕಟವಾಗಿದ್ದು, 18 ಅಭ್ಯರ್ಥಿಗಳು ಮೊದಲ ಟಾಪರ್ ಸ್ಥಾನದಲ್ಲಿದ್ದು, ಈ ಪೈಕಿ ಬೆಂಗಳೂರಿನ ಗೌರಬ್ ದಾಸ್ ಕೂಡ ಒಬ್ಬನಾಗಿದ್ದಾನೆ.

    ಗೌರಬ್ ಸಹಕಾರನಗರದಲ್ಲಿರುವ ನಾರಾಯಣ ಇ-ಟೆಕ್ನೋ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಈ ಹಿಂದೆ 3ನೇ ಸುತ್ತಿನ ಪರೀಕ್ಷೆಯಲ್ಲೂ ಗೌರಬ್ 100 ಅಂಕಗಳಿಸಿದ್ದರು.

    ಸದ್ಯ ಅಮೆರಿಕದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಗೌರಬ್ ವಾಸವಾಗಿದ್ದು, ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆದು ಉತ್ತಮ ಲಿತಾಂಶ ಬಂದರೆ, ಭಾರತದ ಐಐಟಿನಲ್ಲಿ ವ್ಯಾಸಂಗ ಮಾಡಲು ಆಲೋಚಿಸಿದ್ದಾರೆ. ಗೌರಬ್ ಡಿಪಿಎಸ್ ಉತ್ತರ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮುಗಿಸಿ ಆನಂತರ ನಾರಾಯಣ ಕಾಲೇಜಿಗೆ ಪ್ರವೇಶ ಪಡೆದಿದ್ದರು.

    ತಂದೆ ಗೌತಮ್ ಕುಮಾರ್ ಅವರು ಚಿಕಾಗೋದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಗೌರಬ್ ಇಬ್ಬರು ಸಹೋದರಿಯನ್ನು ಹೊಂದಿದ್ದಾರೆ.
    ಅಂದಿನ ಪಾಠಗಳನ್ನು ಅಂದೇ ಓದುತ್ತಿದ್ದೆ. ಹಳೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನಿಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದೆ. ಪಾಲಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನದಿಂದ ಹೆಚ್ಚಿನ ಅಂಕಗಳಿಸುವುದಕ್ಕೆ ಸಾಧ್ಯವಾಗಿದೆ ಎಂದು ಗೌರಬ್ ತಿಳಿಸಿದ್ದಾರೆ.

    ಸ್ಕ್ರೂ, ನಟ್, ಬೋಲ್ಟ್‌ಗಳಿಂದಲೇ ನಿರ್ಮಾಣವಾಯ್ತು 14 ಅಡಿ ಪ್ರಧಾನಿ ಮೋದಿ ಪ್ರತಿಮೆ: ಹುಟ್ಟುಹಬ್ಬದಂದು ಅನಾವರಣ

    ರಸ್ತೆ ರಿಪೇರಿಯಾಗುವವರೆಗೆ ಮದ್ವೆಯಾಗಲ್ಲ: ದಾವಣಗೆರೆ ಶಿಕ್ಷಕಿಗೆ ಸಿಕ್ತು ಸರ್ಕಾರದ ಸ್ಪಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts