More

    ಪ್ರಧಾನಿ ಮೋದಿ ವಿರುದ್ಧ ಕೋರ್ಟ್​ಗೆ ಹೋಗಿದ್ದ ಯೋಧ: ಹೊರಬಿತ್ತು ತೀರ್ಪು

    ನವದೆಹಲಿ: ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಗೆ ಆಯ್ಕೆಯಾದದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅಮಾನತುಗೊಂಡ ಯೋಧ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ.

    2019ರ ಲೋಕಸಭಾ ಚುನಾವಣೆಗೆ ವಾರಣಾಸಿ ಕ್ಷೇತ್ರದಿಂದ ಸಮಾಜವಾದಿ ಪಕ್ಷ (ಎಸ್‌ಪಿ) ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡುವುದನ್ನು ತೇಜ್ ಬಹಾದ್ದೂರ್ ಪ್ರಶ್ನಿಸಿದ್ದರು. ಬಹದ್ದೂರ್ ಆರಂಭದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಂತರ ಎಸ್‌ಪಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲು ಬಯಸಿದ್ದರು.

    ಆದರೆ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು. ಇದಕ್ಕೆ ಕಾರಣ, ಅವರನ್ನು ಸೇನೆಯಿಂದ ವಜಾ ಮಾಡಲಾಗಿತ್ತು. ಅದಕ್ಕೆ ಸೂಕ್ತ ಕಾರಣ ನೀಡುವಂತೆ ಚುನಾವಣಾಧಿಕಾರಿಗಳು ಹೇಳಿದ್ದರು. ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದ ಆಧಾರದ ಮೇಲೆ ನಿಮ್ಮನ್ನು ವಜಾ ಮಾಡಿಲ್ಲ ಎಂಬ ಬಗ್ಗೆ ದಾಖಲೆ ನೀಡಿ. ಅಂದರೆ ಮಾತ್ರ ನಾಮಪತ್ರವನ್ನು ಪರಿಗಣಿಸಲಾಗುವುದು ಎಂದಿದ್ದರು.

    ಸೈನಿಕರಿಗೆ ಒದಗಿಸುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂದು ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದು ಅದನ್ನು ತೇಜ್​ ಬಹಾದ್ದೂರ್​ ಹರಿಬಿಟ್ಟಿದ್ದರು. ಆದರೆ ಇದು ಸುಳ್ಳುಸುದ್ದಿಯಾಗಿದ್ದು, ಸೇನೆಯ ಬಗ್ಗೆ ಕೆಟ್ಟ ಸಂದೇಶ ರವಾನೆ ಮಾಡುತ್ತಿರುವ ಕಾರಣ, ಅಶಿಸ್ತಿನ ಆಧಾರದ ಮೇಲೆ ಅವರನ್ನು ವಜಾ ಮಾಡಲಾಗಿತ್ತು. ಈ ಬಗ್ಗೆ ತಾವು ಹೇಳಿದ್ದರೂ ಚುನಾವಣಾಧಿಕಾರಿಗಳು ತಮ್ಮ ಮನವಿಯನ್ನು ಪುರಸ್ಕರಿಸಿಲ್ಲ ಎಂದು ಸುಪ್ರೀಂಕೋರ್ಟ್​ನಲ್ಲಿ ದೂರಿದ್ದ ತೇಜ್​ ಬಹಾದ್ದೂರ್​, ಪ್ರಧಾನಿ ನರೇಂದ್ರ ಮೋದಿಯವರಿಗೆ ಸುಲಭವಾಗಿ ಗೆಲುವು ಸಿಗಬೇಕು ಎನ್ನುವ ಕಾರಣದಿಂದ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದರು.

    ಇದನ್ನೂ ಓದಿ: ‘ಊಟ ಮಾಡಿದ್ದು ದಲಿತರ ಮನೆಯಲ್ಲೇ… ಆದ್ರೆ ಅಡುಗೆ ಮಾಡಿದ್ದು ಮಾತ್ರ ಬ್ರಾಹ್ಮಣರು’

    ಆದರೆ ನಂತರ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ಕೈಗೆತ್ತಿಕೊಂಡಾಗಲೆಲ್ಲಾ ವಿಚಾರಣೆಯನ್ನು ಮುಂದೂಡುವಂತೆ ತೇಜ್​ ಹೇಳುತ್ತಲೇ ಬಂದಿದ್ದರು. ಇದಾಗಲೇ ವರ್ಷ ಕಳೆದರೂ ವಿಚಾರಣೆಯನ್ನು ಎದುರಿಸಲು ಅವರು ಸಿದ್ಧರಿಲ್ಲ. ಕಳೆದ ವಾರ ಪುನಃ ಪ್ರಕರಣವನ್ನು ಮುಂದೂಡುವಂತೆ ಕೋರಿದ್ದರು.

    ಪದೇ ಪದೇ ವಿಚಾರಣೆ ಮುಂದೂಡಿಕೆಗೆ ಮನವಿ ಮಾಡಿಕೊಳ್ಳುತ್ತಿರುವುದರಿಂದ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರ ನ್ಯಾಯಪೀಠವು ಮತ್ತೆ ಮುಂದೂಡಲು ಸಾಧ್ಯವಿಲ್ಲ. ಇದು ಬಹು ಮುಖ್ಯವಾಗಿರುವ ವಿಷಯ ಆಗಿರುವ ಕಾರಣ ಪದೇ ಪದೇ ಮುಂದೂಡಿಕೆ ಸಲ್ಲದು ಎಂದು ಹೇಳಿ, ತೀರ್ಪನ್ನು ಕಾಯ್ದಿರಿಸಿತ್ತು.

    ಪ್ರಧಾನಿ ಮೋದಿ ಪರವಾಗಿ ವಾದಿಸಿದ ಹಿರಿಯ ವಕೀಲ ಹರೀಶ್​ ಸಾಳ್ವೆ ಅವರು, ತೇಜ್​ ಬಹಾದ್ದೂರ್​ ಅವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಮಾತ್ರವಲ್ಲದೇ ಅವರು ತಮಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಚುನಾವಣಾಧಿಕಾರಿಯನ್ನೂ ಕೇಳಿಲ್ಲ. ಈ ಹಿನ್ನೆಲೆಯಲ್ಲಿ, ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ಮನವಿ ಮಾಡಿಕೊಂಡರು. ಈ ವಾದವನ್ನು ಕೋರ್ಟ್​ ಒಪ್ಪಿದೆ.

    ಪತ್ನಿಯ ಬೆತ್ತಲೆ ದೇಹದ ವಿಡಿಯೋ ಮಾಡಿ ಈತ ಮಾಡುತ್ತಿದ್ದ ಮಹಾನೀಚತನದ ಕೆಲಸ!

    ಬಿಜೆಪಿ ಸರ್ಕಾರಗಳಿಗೆ ಶಾಕ್​ ಕೊಟ್ಟ ಹೈಕೋರ್ಟ್​: ಲವ್​ ಜಿಹಾದ್​ ಕುರಿತು ಹೀಗೊಂದು ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts