More

    ಸುಷ್ಮಾ, ಜೇಟ್ಲಿ ಸಾವಿಗೆ ಪ್ರಧಾನಿಯತ್ತ ಬೊಟ್ಟು ಮಾಡಿದ ಡಿಎಂಕೆ- ಬೆಳ್ಳಂಬೆಳಗ್ಗೆ ಐಟಿ ಇಲಾಖೆ ನೀಡಿತು ಬಿಗ್​ ಶಾಕ್​!

    ಚೆನ್ನೈ: ಕೇಂದ್ರ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ಮೋದಿಯವರ ಒತ್ತಡ ಹಾಗೂ ಚಿತ್ರಹಿಂಸೆ ತಾಳಲಾರದೇ ಮೃತಪಟ್ಟಿದ್ದಾರೆ ಎಂದು ನಿನ್ನೆಯಷ್ಟೇ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಹೇಳಿಕೆ ನೀಡಿದ್ದರು. ಇದು ಭಾರಿ ವಿವಾದವನ್ನು ಸೃಷ್ಟಿಸಿದೆ. ಎಲ್‌.ಕೆ. ಅಡ್ವಾನಿ, ಮುರಳಿ ಮನೋಹರ್ ಜೋಶಿ, ವೆಂಕಯ್ಯ ನಾಯ್ಡು ಹಾಗೂ ಇತರರೆ ನಾಯಕರನ್ನು ಮೋದಿಯವರು ಕಡೆಗಣಿಸುತ್ತಿದ್ದಾರೆ, ಸುಷ್ಮಾ ಹಾಗೂ ಜೇಟ್ಲಿ ಸಾವಿಗೆ ಇವರೇ ಕಾರಣ ಎಂದು ಉದಯನಿಧಿ ಹೇಳಿಕೆ ನೀಡಿದ್ದರು.

    ಇದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಬೆನ್ನಲ್ಲೇ ಐಟಿ ಇಲಾಖೆ ಡಿಎಂಕೆಗೆ ದೊಡ್ಡ ಶಾಕ್​ ನೀಡಿದೆ. ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಮಗಳ ಮನೆಯ ಮೇಲೆ ಐಟಿ ಇಲಾಖೆ ರೇಡ್​ ಮಾಡಿದೆ.

    ಚೆನ್ನೈನಲ್ಲಿ ಇವರು ಸ್ಟಾಲಿನ್ ಅವರ ಮಗಳ ಮನೆಯ ಸಬರೀಸನ್ ಒಡೆತನದ ನಾಲ್ಕು ಸ್ಥಳಗಳ ಮೇಲೆ ಸಂಸ್ಥೆ ದಾಳಿ ನಡೆಸಿದೆ. ನೀಲಂಗರೈನಲ್ಲಿರುವ ಅವರ ಮನೆಯಲ್ಲಿ ಮಗಳು ಸೆಂತಾಮರೈ ಮತ್ತು ಅಳಿಯ ಸಬರೇಸನ್​ ವಾಸ ಮಾಡುತ್ತಿದ್ದು, ಇಲ್ಲಿಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ಇದಕ್ಕೆ ಮುನ್ನ ಡಿಎಂಕೆ ನಾಯಕರ ವಿರುದ್ಧ ತೆರಿಗೆ ದಾಳಿ ನಡೆಯುತ್ತಿದೆ. ಅಂದ ಹಾಗೆ ಈ ದಾಳಿ ನಡೆಯುತ್ತಿರುವುದು ಇದು ಎರಡನೆಯ ಬಾರಿ.

    ಕಳೆದ ತಿಂಗಳು ಡಿಎಂಕೆ ಹಿರಿಯ ಮುಖಂಡ ಮತ್ತು ಅಭ್ಯರ್ಥಿ ಇ.ವಿ.ವೇಲು ಅವರ ಮೇಲೆ ದಾಳಿ ನಡೆಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ ಕೂಡಿಟ್ಟಿರುವ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿತ್ತು. ಈ ಸಮಯದಲ್ಲಿ ಸ್ಥಳದಿಂದ ಭಾರಿ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.

    ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ತಂಗಿದ್ದ ಕೋಣೆಯಲ್ಲಿ ಶೋಧ ನಡೆಸುವುದು ಐಡಿ ಇಲಾಖೆಯ ಉದ್ದೇಶವಾಗಿತ್ತು. ಆದರೆ ಅಲ್ಲಿ ಅವರಿಗೆ ಏನೂ ಸಿಗಲಿಲ್ಲ. ಹೀಗೆಲ್ಲಾ ದಾಳಿ ನಡೆಸಿ ಬೆದರಿಸಿದರೆ ನಾವು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಹೇಳಿದ್ದಾರೆ.

    ಮೂರು ಲಕ್ಷ ಕೊಟ್ಟರೆ ನೀವು ಬಚಾವ್​… ಇಲ್ಲಾಂದ್ರೆ ಅಷ್ಟೇ ಎಂದು ಚಾಕು ತೋರಿಸಿದ ‘ಸಿಸಿಬಿ ಅಧಿಕಾರಿಗಳು’

    ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ಮುಖಂಡ ನೇಣುಬಿಗಿದ ಸ್ಥಿತಿಯಲ್ಲಿ!

    ಬಿಯರ್​ ಪ್ರೇಮಿಗಳಿಗೆ ಇಲ್ಲಿ ಸಿಕ್ತು ಭರ್ಜರಿ ಗುಡ್​ನ್ಯೂಸ್​- ವಿದೇಶಿ ಮದ್ಯಪ್ರಿಯರಿಗೆ ಸರ್ಕಾರ ನೀಡಿತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts