More

    ಅಮೆರಿಕ ಪ್ರತಿಕಾರ: ಇರಾನ್‌ ಬೆಂಬಲಿತ ಉಗ್ರಗಾಮಿ ತಾಣಗಳ ಮೇಲೆ ವೈಮಾನಿಕ ದಾಳಿ

    ವಾಷಿಂಗ್ಟನ್: ಪೂರ್ವ ಸಿರಿಯಾದಲ್ಲಿನ ಇರಾನ್ ಬೆಂಬಲಿತ ಉಗ್ರಗಾಮಿ ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ.

    ಇರಾಕ್‌ನಲ್ಲಿ ಅಮೆರಿಕದ ಸೇನಾ ನೆಲೆ ಮೇಲೆ ನಡೆದಿದ್ದ ರಾಕೆಟ್ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಮಿಲಿಟರಿಯು ಇಂಥದ್ದೊಂದು ಕ್ರಮ ತೆಗೆದುಕೊಂಡಿದೆ. ಫೆಬ್ರವರಿ 15 ರಂದು ಖುರ್ದಿಷ್ ಪ್ರದೇಶದ ರಾಜಧಾನಿ ಅರ್ಬಿಲ್‌ನಲ್ಲಿ ಮಿಲಿಟರಿ ಸಂಕೀರ್ಣದ ಮೇಲೆ ನಡೆದಿದ್ದ ರಾಕೆಟ್ ದಾಳಿಯಲ್ಲಿ ಒಬ್ಬ ನಾಗರಿಕ ಮತ್ತು ಮಿತ್ರ ಪಡೆಗಳೊಂದಿಗೆ ಕೆಲಸ ಮಾಡುತ್ತಿದ್ದ ವಿದೇಶಿ ಗುತ್ತಿಗೆದಾರ ಮೃತಪಟ್ಟಿದ್ದರು. ಜತೆಗೆ ಈ ದಾಳಿಯಲ್ಲಿ ಅಮೆರಿಕದ ಹಲವು ಗುತ್ತಿಗೆದಾರರು ಮತ್ತು ಒಬ್ಬ ಸೈನಿಕ ಗಾಯಗೊಂಡಿದ್ದರು.

    ಅದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ. ಈ ಬಗ್ಗೆ ವಕ್ತಾರ ಜಾನ್ ಕೀರ್ಬಿಯವರು ಖಚಿತ ಪಡಿಸಿದ್ದು, ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

    ಕಟೆಬ್ ಹೆಜ್ಬೊಲ್ಲಾ ಮತ್ತು ಕಟೆಬ್ ಸಯ್ಯದ್ ಅಲ್-ಶುಹದಾ ಸೇರಿದಂತೆ ಇರಾನ್ ಬೆಂಬಲಿತ ಸಶಸ್ತ್ರ ಇರಾಕಿ ಗುಂಪುಗಳ ನಿಯಂತ್ರಣದಲ್ಲಿರುವ ಗಡಿ ನಿಯಂತ್ರಣ ಕೇಂದ್ರವು ನಮ್ಮ ಗುರಿಯಾಗಿತ್ತು ಎಂದು ಅಮೆರಿಕದ ಹೇಳಿದೆ. ಆದರೆ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದೆಯೇ ಎಂಬ ಬಗ್ಗೆ ಅಮೆರಿಕ ಮಿಲಿಟರಿ ಮಾಹಿತಿ ನೀಡಿಲ್ಲ.

    ಅಮೆರಿಕದ ಮಿಲಿಟರಿ ಪಡೆಗಳು ಪೂರ್ವ ಸಿರಿಯಾದಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ. ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಅಮೆರಿಕ ಮತ್ತು ಒಕ್ಕೂಟದ ಪಡೆಗಳ ನೆಲೆ ಮೇಲೆ ನಡೆದ ಮೂರು ರಾಕೆಟ್ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ. ಇರಾಕ್‌ನಲ್ಲಿ ಇತ್ತೀಚಿಗೆ ಅಮೆರಿಕ ಮತ್ತು ಒಕ್ಕೂಟದ ಮಿಲಿಟರಿ ವಿರುದ್ಧದ ದಾಳಿಗೆ ಪ್ರತಿಯಾಗಿ ಮತ್ತು ಉಗ್ರರಿಂದ ದಾಳಿ ಆತಂಕದ ಹಿನ್ನೆಲೆಯಲ್ಲಿ ಈ ದಾಳಿಗೆ ಆದೇಶ ನೀಡಲಾಗಿದೆ ಎಂದು ಜಾನ್ ಕೀರ್ಬಿ ಸ್ಪಷ್ಟಪಡಸಿಸಿದ್ದಾರೆ.

    ಇರಾನ್‌ನ ನಿರ್ದೇಶನದಲ್ಲಿ ಕೆಲ ಗುಂಪುಗಳು ಇರಾಕ್‌ನಲ್ಲಿ ಅಮೆರಿಕ ಮಿಲಿಟರಿ ನೆಲೆ ಮೇಲೆ ನಡೆಸಿದ ದಾಳಿಯು ಬೈಡೆನ್ ಆಡಳಿತಕ್ಕೆ ಸವಾಲನ್ನು ಒಡ್ಡಿದೆ ಎಂದು ಇದೇ ವೇಳೆ ವಿಶ್ಲೇಷಿಸಲಾಗುತ್ತಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

    ಇಂದು ದೇಶವ್ಯಾಪಿ ಲಾರಿ ಸಂಚಾರ ಸ್ತಬ್ಧ- ಜನಸಾಮಾನ್ಯರಿಗೆ ಇಂದಿಲ್ಲ ತೊಂದರೆ, ಆದರೆ ಮುಂದೆ?

    ಅಣ್ಣ ಬುದ್ಧಿಹೇಳಿದ ಎಂದು ತಮ್ಮನ ಆತ್ಮಹತ್ಯೆ… ಸಾವಿನ ಸುದ್ದಿ ಕೇಳಿ ಅಣ್ಣನೂ ನೇಣಿಗೆ ಶರಣು!

    VIDEO: ಶಿವಾಜಿ ಪ್ರತಿಮೆ ಅನಾವರಣಕ್ಕೆ ಪೊಲೀಸರು ತಡೆದಾಗ ಪ್ರಕೃತಿಯಿಂದಲೇ ನಡೆಯಿತು ಈ ವಿಸ್ಮಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts