More

    ಸೌದಿಯಲ್ಲಿ ನಡೆಯುತ್ತಿರುವ ಡಕಾರ್ ರ‍್ಯಾಲಿಯಲ್ಲಿ ಅವಘಡ: ಕೋಮಾಕ್ಕೆ ಜಾರಿದ ಕನ್ನಡದ ಕುವರ

    ಸೌದಿ: ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 2021ರ ಡಕಾರ್ ರ‍್ಯಾಲಿಯು ನಾಲ್ಕನೇ ಹಂತದಲ್ಲಿ ಕನ್ನಡಿಗ ಸಿ.ಎಸ್.ಸಂತೋಷ್ ಅವರು ತೀವ್ರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದಾರೆ. 37 ವರ್ಷದ ಸಂತೋಷ್ ಡಕಾರ್ ರ‍್ಯಾಲಿಯಲ್ಲಿ ಭಾರತದ ಪರವಾಗಿ ಈ ಹಿಂದೆ ಆರು ಬಾರಿ ಪ್ರತಿನಿಧಿಸಿದ್ದು, ಇದು ಏಳನೇ ಬಾರಿಯಾಗಿತ್ತು. ವಿಶ್ವದ ಕಠಿಣ ಮತ್ತು ಅಪಾಯಕಾರಿ ಡಕಾರ್ ರ‍್ಯಾಲಿಲಿಯಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರದ್ದು.

    2021ರ ಡಕಾರ್ ರ‍್ಯಾಲಿಯ ಇಂದಿನ ಹಂತದಲ್ಲಿ ವೇ ಪಾಯಿಂಟ್ 4 ಅನ್ನು ದಾಟಿದ ನಂತರ ಹೀರೋ ಮೋಟೋಸ್ಪೋರ್ಟ್‌ಗಾಗಿ ಭಾರತೀಯ ರ‍್ಯಾಲಿ ರೈಡರ್ ಆಗಿದ್ದ ಸಂತೋಷ್ ಅಪಘಾತಕ್ಕೆ ಈಡಾಗಿದ್ದಾರೆ.

    ಸಿಎಸ್ ಸಂತೋಷ್ ಅವರನ್ನು ರಿಯಾದ್‌ನ ಆಸ್ಪತ್ರೆಗೆ ಏರ್​ಲಿಫ್ಟ್​ ಮಾಡಲಾಗಿದ್ದು, ಅವರು ಕೋಮಾಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಇವರ ತಲೆಗೆ ಏಟಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

    ಸಂತೋಷ್ ಆರಂಭಿಕ ಪ್ರೊಲಾಗ್ ಹಂತದಲ್ಲಿ 35ನೇ ಸ್ಥಾನವನ್ನು ಗಳಿಸುವ ಮೂಲಕ ಈ ವರ್ಷದ ಡಕಾರ್ ರ‍್ಯಾಲಿ ಹಂತವನ್ನು ಪ್ರಾರಂಭಿಸಿದ್ದರು. ಡಕಾರ್ ರ‍್ಯಾಲಿಯ ಮೂರನೇ ಹಂತದಲ್ಲಿ 36ನೇ ಸ್ಥಾನವನ್ನು ಪಡೆದುಕೊಂಡಿದ್ದರು.

    3ನೇ ಹಂತದ ನಂತರದ ಪ್ರತಿಕ್ರಿಯಿಸಿದ ಸಿ.ಎಸ್.ಸಂತೋಷ್, “ಇಂದು ಮತ್ತೊಂದು ದೀರ್ಘ ಮತ್ತು ವೇಗದ ಹಂತವಾಗಿತ್ತು. ಇದು ಹೆಚ್ಚಾಗಿ ಕುಳಿತುಕೊಳ್ಳಲಾಗದೆ ಮತ್ತು ಗೋಚರತೆ ಅಷ್ಟು ಉತ್ತಮವಾಗಿಲ್ಲ, ಆದ್ದರಿಂದ ಅದು ಕಠಿಣವಾಗಿತ್ತು. ಇದು ನನಗೆ ಅಷ್ಟು ತೃಪ್ತಿ ತಂದಿಲ್ಲ. ಆದರೆ ಇಂದು ಉತ್ತಮ ವೇದಿಕೆಯಲ್ಲಿ ಇರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದರು.

    10 ಪುಷ್‍ಅಪ್ಸ್, 20 ಬಸ್ಕಿ ಹೊಡೆಯಬಲ್ಲಿರಾ? ಭಾರತೀಯ ನೌಕಾಪಡೆಯಲ್ಲಿ ನಿಮಗಿವೆ 358 ಹುದ್ದೆಗಳು..

    33ಕ್ಕೇ ಲೈಂಗಿಕಾಸಕ್ತಿ ಕುಂದುಹೋಗಿದೆ- ಪತಿ ಹತ್ತಿರ ಬಂದರೆ ಸಿಟ್ಟುಬರುತ್ತದೆ: ಏನು ಮಾಡಲಿ?

    ಸರ್ಕಾರಿ ಉದ್ಯೋಗ ಇಟ್ಟುಕೊಳ್ಳಲೊ? ಪ್ರಿಯಕರನ ಹಿಂದೆ ಹೋಗಲೊ? ಮನಸ್ಸು ಗೊಂದಲದ ಗೂಡಾಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts