More

    ವಿಶ್ವದ ಮೊದಲ ವಿದ್ಯುತ್ ಚಾಲಿತ ಡಬಲ್-ಸ್ಟ್ಯಾಕ್ ಟ್ರೇನಿಗೆ ಚಾಲನೆ: ಹೇಗೆ ಓಡುತ್ತೆ ನೋಡಿ…

    ನವದೆಹಲಿ: ವಿಶ್ವದ ಮೊಟ್ಟ ಮೊದಲ ವಿದ್ಯುತ್ ಚಾಲಿತ ಡಬಲ್-ಸ್ಟ್ಯಾಕ್ ಕಂಟೇನರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ.

    ನ್ಯೂ ಅಟೇಲಿ-ನ್ಯೂ ಕಿಶನ್​ಘರ್​ ನಡುವೆ ಈ ಟ್ರೇನ್​ ಸಾಗಲಿದೆ. ಇದರ ಉದ್ದ ಸುಮಾರು 1.5 ಕಿ.ಮೀ ಇದ್ದು, ಇಂಥದ್ದೊಂದು ನೂತನ ಪ್ರಯೋಗ ಮಾಡಿರುವ ಕೀರ್ತಿ ಭಾರತಕ್ಕೆ ಒದಗಿಬಂದಿದೆ.

    ಈ ಕುರಿತು ಟ್ವೀಟ್​ ಮಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, “ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ರೈಲ್ವೆ ಟ್ರ್ಯಾಕ್​ನಲ್ಲಿ ಡಬಲ್-ಸ್ಟಾಕ್ ಕಂಟೇನರ್ ರೈಲಿನ ಕಾರ್ಯಾಚರಣೆಯು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದೆ. ಇದು ಭಾರತೀಯ ರೈಲ್ವೆ ಇಲಾಖೆಯ ಮತ್ತೊಂದು ಮೈಲಿಗಲ್ಲು’ ಎಂದು ಹೇಳಿದ್ದಾರೆ.

    ಈ ರೈಲಿನ ಕುರಿತು ಮಾಹಿತಿ ನೀಡಿರುವ ಅವರು, 150 ವರ್ಷಗಳಷ್ಟು ಹಳೆಯದಾದ ನಮ್ಮ ರೈಲ್ವೆ ವ್ಯವಸ್ಥೆಯಲ್ಲಿ ಪ್ರಯಾಣಿಕರ ಜತೆಗೆ ಸರಕು ರೈಲುಗಳೂ ಚಲಿಸುತ್ತವೆ. ಇವೆರಡೂ ರೈಲುಗಳಿಗೆ ಇರುವ ಹಾದಿ ಒಂದೇ ಆಗಿದೆ. ಈ ಕಾರಣದಿಂದಾಗಿ ಸರಕು ರೈಲುಗಳು ಸಮಯಕ್ಕೆ ಆಯಾ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಪ್ರಯಾಣಿಕರ ರೈಲಿಗೆ ಆದ್ಯತೆ ಕೊಡುವಷ್ಟು ಈ ರೈಲುಗಳಿಗೆ ಆದ್ಯತೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಯಾವುದೇ ದೇಶದಲ್ಲಿ ಇಲ್ಲದ ಹೊಸ ವ್ಯವಸ್ಥೆಯನ್ನು ಭಾರತದಲ್ಲಿ ಮಾಡಲಾಗಿದೆ ಎಂದು ಹೇಳಿದರು.

    ಹಿಂದಿನ ಸರಕು ರೈಲುಗಳು ಗಂಟೆಗೆ ಸರಾಸರಿ 25 ಕಿಲೋಮೀಟರ್ ವೇಗದಲ್ಲಿ ಓಡುತ್ತಿದ್ದವು, ಅದು ಈಗ ದ್ವಿಗುಣಗೊಂಡಿದೆ ಎಂದು ಸಚಿವ ಪಿಯೂಷ್​ ಹೇಳಿದರು.

    ರೈಲ್ವೆ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಸರ್ಕಾರಿ ಉದ್ಯಮವಾದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿಎಫ್‌ಸಿಸಿಐಎಲ್) ಪ್ರಸ್ತುತ ಸರಕು ರೈಲುಗಳ ಪ್ರತ್ಯೇಕ ಸಂಚಾರಕ್ಕಾಗಿ 3,342 ಕಿ.ಮೀ ಪೂರ್ವ ಮತ್ತು ಪಶ್ಚಿಮ ಸರಕು ಕಾರಿಡಾರ್‌ಗಳ ನಿರ್ಮಾಣವನ್ನು ಕೈಗೊಂಡಿದೆ.

    ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

    ಮಂಗಳೂರಿನಲ್ಲಿಯೂ ಕಾಗೆಗಳ ನಿಗೂಢ ಸಾವು! ಕರ್ನಾಟಕಕ್ಕೂ ಬಂತಾ ಹಕ್ಕಿಜ್ವರ?

    ‘ಅಲ್ಲಾ ಸ್ವಾಮಿ… 10 ವರ್ಷ ನಿಮ್ದೇ ಸರ್ಕಾರ ಇತ್ತಲ್ಲ… ಆವಾಗ್ಯಾಕೆ ಭಾರತ ರತ್ನ ಕೊಟ್ಟಿಲ್ಲ?’

    ಸೌರವ್​ ಗಂಗೂಲಿ ಡಿಸ್​ಚಾರ್ಜ್​: ಅಭಿಮಾನಿಗಳಿಗೆ ಕ್ರಿಕೆಟ್​ ತಾರೆ ಏನಂದ್ರು ಕೇಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts