More

    ಹವಾಮಾನಕ್ಕೂ ಜಗ್ಗಲ್ಲ, ಕಣ್ಗಾವಲಿಗೂ ಬೀಳಲ್ಲ- ಯೋಧರಿಗಾಗಿ ನೂತನ ಸಮವಸ್ತ್ರ, ಹೀಗಿದೆ ನೋಡಿ ವಿಶೇಷತೆ…

    ನವದೆಹಲಿ: ಚಳಿ, ಬಿಸಿಲು, ಮಳೆ, ಹಿಮಪಾತ, ರಾತ್ರಿ, ಹಗಲು ಯಾವುದೂ ಇಲ್ಲದೇ ದೇಶಕ್ಕಾಗಿ ದುಡಿಯುವ ಜೀವವೆಂದರೆ ಅದುವೇ ಯೋಧರು. ದೇಶದ ಸೇವೆಗಾಗಿ, ಸಾರ್ವಜನಿಕರನ್ನು ಸುರಕ್ಷಿತವಾಗಿ ಇಡಲು ತಮ್ಮ ಜೀವವನ್ನೇ ಮುಡಿಪಾಗಿಡುವ ಈ ಯೋಧರಿಗಾಗಿ ಇದೀಗ ಹೊಸತು ಸಮವಸ್ತ್ರವೊಂದನ್ನು ತಯಾರಿಸಲಾಗಿದ್ದು, ಸೇನಾ ದಿನವಾದ ಇಂದು ಅದನ್ನು ಅನಾವರಣಗೊಳಿಸಲಾಗಿದೆ.

    ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್‌ಟಿ) ಸಹಯೋಗದಲ್ಲಿ ಭಾರತ ಸೇನಾಪಡೆಯು ಈ ಸಮವಸ್ತ್ರವನ್ನು ವಿನ್ಯಾಸಗೊಳಿಸಿದೆ. ಪ್ಯಾರಾಚೂಟ್‌ ರೆಜಿಮೆಂಟ್‌ನ ಕಮಾಂಡೋಗಳ ತುಕಡಿ ಸೇನಾ ದಿನದ ಪಥಸಂಚನದಲ್ಲಿ ಈ ಸಮವಸ್ತ್ರ ಧರಿಸಿ ಅದರ ಮಹತ್ವವನ್ನು ಸಾರಿದೆ.

    ವಿಶೇಷತೆಗಳು ಏನೇನಿವೆ ಗೊತ್ತಾ?
    ಹವಾಮಾನದ ಸ್ಥಿತಿ ಎಷ್ಟೇ ದುರ್ಗಮವಾಗಿದ್ದರೂ ಅಲ್ಲಿ ಯೋಧರು ತಮ್ಮ ಕರ್ತವ್ಯ ನಿರ್ವಹಿಸಲೇಬೇಕು. ಅದಕ್ಕಾಗಿ ಹವಾಮಾನ ಏರಿಳಿತವನ್ನು ಎದುರಿಸಲು ಈ ಸಮವಸ್ತ್ರ ಪೂರಕವಾಗಿದೆ. ಯೋಧರ ದೇಹವನ್ನು ಎಂಥದ್ದೇ ಪ್ರತಿಕೂಲ ಪರಿಣಾಮ ಇದ್ದರೂ ಇದು ಅವರ ದೇಹವನ್ನು ಕಾಪಾಡುತ್ತದೆ. ಅಂದರೆ, ಯೋಧರ ಕಾರ್ಯಕ್ಷೇತ್ರದ ಭೌಗೋಳಿಕ ಸ್ವರೂಪ ಹಾಗೂ ಹವಾಮಾನ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

    ಇದರ ಇನ್ನೊಂದು ವಿಶೇಷತೆ ಎಂದರೆ ಇದು ಡಿಜಿಟಲ್‌ ಕಣ್ಗಾವಲಿಗೂ ಸುಲಭವಾಗಿ ನಿಲುಕುವುದಿಲ್ಲ. ಇದರ ಅರ್ಥ ಮೇಲ್ನೋಟಕ್ಕೆ ಸಿಬ್ಬಂದಿ ಇರುವಿಕೆಯನ್ನು ಗುರುತಿಸಲಾಗದ ಸಮವಸ್ತ್ರ ಇದಾಗಿದೆ. ಯೋಧರು ಆ ಸ್ಥಳದಲ್ಲಿ ಇದ್ದಾರೆ ಎಂಬ ಬಗ್ಗೆ ಸುಲಭದಲ್ಲಿ ಯಾರಿಗೂ ಗೋಚರಿಸುವುದಿಲ್ಲ. ಇದರಿಂದ ಯೋಧರು ಶತ್ರುಗಳಿಂದ ತಪ್ಪಿಸಿಕೊಳ್ಳಲು ಇದು ನೆರವಾಗಲಿದೆ.

    ಹೊಸ ಸಮವಸ್ತ್ರವು ಮಣ್ಣು ಮತ್ತು ಹಸಿರು ಬಣ್ಣದ ಮಿಶ್ರಣದಿಂದ ಕೂಡಿದೆ. ಹಳೆಯ ಸಮವಸ್ತ್ರಕ್ಕೆ ಹೋಲಿಸಿದರೆ ವಿಭಿನ್ನವಾಗಿದೆ. ಬ್ರಿಟಿಷ್‌ ಸೈನ್ಯವು ಬಳಸುವ ಮಾದರಿಯಂತೆ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ದೇಶಗಳ ಸೇನಾ ಸಮವಸ್ತ್ರಗಳ ವಿಶ್ಲೇಷಣೆ ಮತ್ತು ವಿಸ್ತೃತ ಚರ್ಚೆ ನಂತರ ಈ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದೆ.

    ಅಂದಹಾಗೆ, ಈ ವಿಶೇಷ ಸಮವಸ್ತ್ರ ಮುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ ಎಂದು ಇಲಾಖೆ ಹೇಳಿದೆ.

    VIDEO: ಚಾಲಕನಿಗೆ ಫಿಟ್ಸ್‌ ಬಂದು ಇನ್ನೇನು ಪ್ರಯಾಣಿಕರ ಪ್ರಾಣವೇ ಹೋಗುವಾಗ ‘ದೇವತೆ’ಯಾಗಿ ಬಂದ ಮಹಿಳೆ!

    VIDEO: 50 ಲಕ್ಷ ರೂ. ಕೊಟ್ರೆ ಟಿಕೆಟ್‌ ಕೊಡ್ತೆ ಅಂದ್ರು… ಮೋಸ ಮಾಡಿದ್ರು… ಬಿಕ್ಕಿ ಬಿಕ್ಕಿ ಅತ್ತ ಕಾರ್ಯಕರ್ತ- ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts