More

    ಭಾರತಕ್ಕೆ ಲಾಭ ಬೇಕಾದ್ರೆ ಹೀಗೆ ಮಾಡಿ ಎಂದು ‘ಅದ್ಭುತ’ ಸಲಹೆ ಕೊಟ್ರು ಪಾಕ್​ ಪ್ರಧಾನಿ!

    ಇಸ್ಲಾಮಾಬಾದ್: ಉಗ್ರರಿಗೆ ನೆಲೆ ನೀಡಿ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ, ಭಾರತದ ಜತೆ ಸದಾ ಒಂದಿಲ್ಲೊಂದು ಕ್ಯಾತೆ ತೆಗೆದು ಎಲ್ಲಾ ಕಾನೂನು- ನಿಯಮಗಳನ್ನು ಗಾಳಿಗೆ ತೂರಿ, ಕದನ ವಿರಾಮ ಉಲ್ಲಂಘಿಸಿ ಕಿತಾಪತಿ ಮಾಡುತ್ತಿರುವ ನಡುವೆಯೇ ಭಾರತಕ್ಕೆ ಒಂದು ಪುಕ್ಕಟೆ ಸಲಹೆ ಕೊಟ್ಟಿದೆ!

    ಅದೇನೆಂದರೆ, ಪಾಕಿಸ್ತಾನದೊಂದಿಗೆ ಶಾಂತಿ ಕಾಯ್ದುಕೊಂಡರೆ ಮಾತ್ರ ಭಾರತಕ್ಕೆ ಹೆಚ್ಚು ಲಾಭ ಎಂದಿದ್ದಾರೆ ಇಮ್ರಾನ್​ ಖಾನ್​! ಅಷ್ಟಕ್ಕೂ ಈ ವಿಷಯವನ್ನು ಅವರು ಪ್ರಸ್ತಾಪಿಸಿರುವುದಕ್ಕೆ ಮುಖ್ಯ ಕಾರಣ ಕಾಶ್ಮೀರ.

    ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಮೇಲೆ ತಲೆಕೆಟ್ಟಂತೆ ವರ್ತಿಸುತ್ತಿರುವ ಪ್ರಧಾನಿ ಇಮ್ರಾನ್​ ಖಾನ್​, ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ಸಂಬಂಧಕ್ಕೆ ಸಮಸ್ಯೆಯಾಗಿದ್ದು, ಈ ಎರಡು ದೇಶಗಳ ನಡುವೆ ಶಾಂತಿ ಸ್ಥಾಪಿಸುವುದಕ್ಕೆ ಮೊದಲ ಹೆಜ್ಜೆಯನ್ನು ಭಾರತವೇ ಇಡಬೇಕು, ಈ ಬಗ್ಗೆ ಪಾಕಿಸ್ತಾನದ ಜತೆ ಶಾಂತಿ ಕಾಯ್ದುಕೊಳ್ಳಬೇಕು. ಹೀಗಾದರೆ ಅದಕ್ಕೆ ಒಳ್ಳೆಯ ಲಾಭವಿದೆ ಎಂದಿದ್ದಾರೆ.

    ನಾನು 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಭಾರತದೊಂದಿಗಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಆಗಸ್ಟ್ 5ರ ನಂತರ ಭಾರತ-ಪಾಕ್ ನಡುವಿನ ಸಂಬಂಧ ಕೆಟ್ಟುಹೋಗಿದೆ. ಭಾರತವು ಕಾಶ್ಮೀರಕ್ಕೆ ಸೂಕ್ತ ಸ್ಥಾನಮಾನ ನೀಡಬೇಕಿದೆ. ಹಾಗಿದ್ದರೆ ಮಾತ್ರ ಉಭಯ ದೇಶಗಳಿಗೆ ಒಳ್ಳೆಯದಾಗಲಿದೆ ಎಂದಿದ್ದಾರೆ. ಕಾಶ್ಮೀರದಲ್ಲಿ ಬಡತನದ ಇದ್ದು, ಅಲ್ಲಿ ವ್ಯಾಪಾರ, ವಹಿವಾಟು ಹಾಗೂ ಪ್ರಾದೇಶಿಕ ವ್ಯವಹಾರಗಳಿಗೆ ಅವಕಾಶ ಸಿಕ್ಕರೆ ಬಡತನ ನಿರ್ಮೂಲನೆಗೂ ಸಹಾಯವಾಗಲಿದೆ” ಎಂದು ಇಮ್ರಾನ್​ ಖಾನ್​ ಹೇಳಿದ್ದಾರೆ.

    ಇಷ್ಟು ಮಾತ್ರವಲ್ಲದೇ ಮಧ್ಯ ಏಷ್ಯಾದ ರಾಷ್ಟ್ರಗಳಾದ ಕಜಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ತುರ್ಕಮೆನಿಸ್ತಾನ್ ಹಾಗೂ ಉಜ್ಬೇಕಿಸ್ತಾನಗಳಿಗೆ ಭಾರತವು ಪಾಕಿಸ್ತಾನದ ಮೂಲಕ ನೇರ ಸಂಪರ್ಕ ಸಾಧಿಸಿದರೆ ಭಾರತಕ್ಕೆ ಆರ್ಥಿಕ ಲಾಭವಾಗಲಿದೆ. ಯಾಕೆಂದರೆ ಇವೆಲ್ಲವೂ ತೈಲ ಮತ್ತು ಅನಿಲ ಸಂಪನ್ಮೂಲದಲ್ಲಿ ಶ್ರೀಮಂತವಾಗಿರುವ ದೇಶಗಳಾಗಿವೆ ಎಂದಿದ್ದಾರೆ.

    ಬಿಜೆಪಿ ಸಂಸದ ಮನೆಯ ಸಮೀಪ ಬಾಂಬ್​ ಬ್ಲಾಸ್ಟ್​; ಸಿಸಿಟಿವಿ ಧ್ವಂಸ ಮಾಡಿ 15 ಕಡೆ ಸ್ಫೋಟ

    ಟ್ರಕ್​ ಚಾಲನೆ ವೇಳೆ ಹೆಲ್ಮೆಟ್​ ಧರಿಸಿಲ್ಲ ಎಂದು ಹೀಗೆಲ್ಲಾ ಮಾಡೋದಾ? ಬೇಸ್ತು ಬಿದ್ದ ಚಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts