More

    ದಿನೇ ದಿನೇ ಏರುತ್ತಿರುವ ಬೆಲೆ: ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಕೇಂದ್ರ

    ನವದೆಹಲಿ: ಎಲ್ಲಾ ರೀತಿಯ ಈರುಳ್ಳಿಗಳ ರಫ್ತಿನ ಮೇಲೆ ಕೇಂದ್ರ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ನಿಷೇಧ ಹೇರಿದೆ. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಪ್ರಮಾಣ ಗಣನೀಯವಾಗಿ ಕುಸಿದು, ಬೇಡಿಕೆ ತೀವ್ರ ಹೆಚ್ಚಾದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

    ಕತ್ತರಿಸಿದ ಮತ್ತು ಪುಡಿಯ ರೂಪದಲ್ಲಿರುವ ಈರುಳ್ಳಿ ಹೊರತುಪಡಿಸಿ, ಬೆಂಗಳೂರು ಗುಲಾಬಿ ಈರುಳ್ಳಿ, ಕೃಷ್ಣಾಪುರಂ ಈರುಳ್ಳಿ ಸೇರಿದಂತೆ ಎಲ್ಲ ಬಗೆಯ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ.

    ವಿದೇಶಾಂಗ ವ್ಯವಹಾರ ನಿರ್ದೇಶನಾಲಯ ತನ್ನ ವೆಬ್‌ಸೈಟ್‌ನಲ್ಲಿ ಈ ಕ್ಷಣದಿಂದಲೆ ವಿಧದ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದೆ. ರಫ್ತುದಾರರಿಗೆ ಯಾವುದೇ ರೀತಿಯ ಈರುಳ್ಳಿ ರಫ್ತು ಮಾಡದಂತೆ ಸೂಚನೆ ನೀಡಿದೆ.

    ಇದನ್ನೂ ಓದಿ: ಹದಿನೇಳು ವರ್ಷಗಳ ಅವಧಿಯಲ್ಲೇ ಗರಿಷ್ಠ ಕದನವಿರಾಮ ಉಲ್ಲಂಘನೆ ಮಾಡಿದ ಪಾಕ್​

    ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ ರೂ.40 ರಂತೆ ಮಾರಾಟವಾಗುತ್ತಿದೆ. ದೇಶದ ಇತರೆಡೆಗಳಲ್ಲಿ ಪ್ರತಿ ಕೆ.ಜಿ.ಗೆ 50 ರೂಪಾಯಿಯಂತೆ ಮಾರಾಟವಾಗುತ್ತಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವುದು ರಫ್ತು ನಿಷೇಧಕ್ಕೆ ಕಾರಣವಾಗಿದೆ.

    ಅಂದಹಾಗೆ, ಭಾರತವು ಬಾಂಗ್ಲಾದೇಶ, ಮಲೇಷಿಯಾ, ಯುಎಇ ಹಾಗೂ ಶ್ರೀಲಂಕಾ ರಾಷ್ಟ್ರಗಳಿಗೆ ಈರುಳ್ಳಿ ರಫ್ತು ಮಾಡುತ್ತದೆ. ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ ಒಟ್ಟು 19.8 ಕೋಟಿ ಡಾಲರ್ ಮೌಲ್ಯದ ಈರುಳ್ಳಿಯನ್ನು ರಫ್ತು ಮಾಡಿದೆ.

    ಕೇಂದ್ರದ ಈ ನಿರ್ಣಯ ಬೇರೆ ದೇಶಗಳಿಗಿಂತಲೂ ಹೆಚ್ಚಾಗಿ ಬಾಂಗ್ಲಾದೇಶಕ್ಕೆ ಭಾರಿ ಹೊಡೆತ ಬೀಳಲಿದೆ ಎನ್ನಲಾಗಿದೆ. ಏಕೆಂದರೆ ಬಾಂಗ್ಲಾದೇಶವು ಭಾರತದ ಈರುಳ್ಳಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದು, 7-8 ಲಕ್ಷ ಟನ್‌ ವರ್ಷಕ್ಕೆ ಆಮದು ಮಾಡಿಕೊಳ್ಳುತ್ತದೆ.

    ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿದ ಕರೊನಾ ಸೋಂಕಿತೆ ದೆಹಲಿಯಲ್ಲಿ! ಅಸಲಿಯತ್ತೇನು?

    ಅನಂತ್​ಕುಮಾರ್​ ಸೇರಿದಂತೆ 17 ಸಂಸದರಿಗೆ ಕರೊನಾ ಪಾಸಿಟಿವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts