More

    ಹೈದರಾಬಾದ್​ನಲ್ಲಿರುವ ಮನೆಗೆ ನುಗ್ಗಿದ ಕಳ್ಳನನ್ನು ಅಮೆರಿಕದಲ್ಲಿ ಕುಳಿತೇ ಹಿಡಿದುಕೊಟ್ಟ ಮಾಲೀಕ!

    ನ್ಯೂಯಾರ್ಕ್​: ಅಮೆರಿಕದಲ್ಲಿರುವ ಒಬ್ಬ ವ್ಯಕ್ತಿ ಹೈದರಾಬಾದ್​ನಲ್ಲಿರುವ ತಮ್ಮ ಮನೆಗೆ ನುಗ್ಗಿದ ಕಳ್ಳನನ್ನು ಹಿಡಿಯಲು ಸಾಧ್ಯವೆ? ಇದೆಂಥ ಪ್ರಶ್ನೆ ಅಂತೀರಾ? ಆದರೆ ಇದು ಇಂದಿನ ತಂತ್ರಜ್ಞಾನ ಯುಗದಲ್ಲಿ ಇದು ಸಾಧ್ಯ. ಇಂಥದ್ದೊಂದು ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ಅಮೆರಿಕದಿಂದಲೇ ಹೈದರಾಬಾದ್​ನ ಕಳ್ಳನನ್ನು ಹಿಡಿದು ಕೊಟ್ಟಿದ್ದಾರೆ. ಅದೂ ಕೆಲವೇ ಗಂಟೆಗಳಲ್ಲಿ!

    ಆಗಿದ್ದೇನೆಂದರೆ ಹೈದರಾಬಾದ್​ನ ಕುಕಟ್‌ಪಲ್ಲಿಯ ನಿವಾಸಿಯೊಬ್ಬರು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಹೈದರಾಬಾದ್​ ಮನೆಗೆ ಭದ್ರತಾ ಕಣ್ಗಾವಲು ಕ್ಯಾಮೆರಾಗಳನ್ನು (ಸಿಸಿಟಿವಿ) ಫಿಕ್ಸ್​ ಮಾಡಲಾಗಿತ್ತು. ಅವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಅರಿತ ಖದೀಮರು ಸಿಕ್ಕಿದ್ದೇ ಛಾನ್ಸ್​ ಎಂದು ಕನ್ನ ಹಾಕಿದ್ದಾರೆ.

    ಆ ಕ್ಯಾಮೆರಾದಲ್ಲಿ ಇದು ಸೆರೆಯಾಗುತ್ತಿದ್ದಂತೆಯೇ, ಮಾಲೀಕರಿಗೆ ಸಂದೇಶ ಹೋಗಿದೆ. ಕೂಡಲೇ ಮೊಬೈಲ್​ನಲ್ಲಿರುವ ಸೆಕ್ಯುರಿಟಿ ಕ್ಯಾಮ್ ಅಪ್ಲಿಕೇಶನ್ ಮೂಲಕ ಪರಿಶೀಲನೆ ಮಾಡಿದಾಗ, ತಮ್ಮ ಮನೆಗೆ ಕಳ್ಳರು ನುಗ್ಗುತ್ತಿರುವ ದೃಶ್ಯವನ್ನು ಅವರು ನೇರವಾಗಿ ಕಂಡಿದ್ದಾರೆ.

    ತಡ ಮಾಡದ ಅವರು, ಅಲ್ಲಿಂದಲೇ ನೆರೆಹೊರೆಯವರಿಗೆ ಎಚ್ಚರಿಸಿದ್ದಾರೆ. ಮಾತ್ರವಲ್ಲದೇ ಸಮೀಪದ ಪೊಲೀಸರಿಗೆ ತಕ್ಷಣ ವಿಷಯ ತಿಳಿಸಿದ್ದಾರೆ. ಪೊಲೀಸರು ಸಮಯಕ್ಕೆ ಸರಿಯಾಗಿ ತಲುಪುವಲ್ಲಿ ಯಶಸ್ವಿಯಾದರು. ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.
    ಆ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ ಶ್ಯಾಮ್ ಬಾಬು ಅವರು ತಮ್ಮ ಸಿಬ್ಬಂದಿಯೊಂದಿಗೆ ತಕ್ಷಣ ಮನೆಗೆ ಧಾವಿಸಿದರು. “ನಾವು ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ತಲುಪಿದೆವು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಯಾವುದೇ ಸದ್ದು ಮಾಡದೆ ಸದ್ದಿಲ್ಲದೆ ಮನೆಯೊಳಗೆ ಪ್ರವೇಶಿಸಿ ಕಳ್ಳರನ್ನು ಹಿಡಿದಿರುವುದಾಗಿ ಮಾಹಿತಿ ನೀಡಿದ್ದಾರೆ.

    ಕಳ್ಳನನ್ನು ಟಿ.ರಾಮಕೃಷ್ಣ ಅಲಿಯಾಸ್ ಅಭಿರಾಮ್ ಎಂದು ಗುರುತಿಸಲಾಗಿದ್ದು, ಈ ಹಿಂದೆ ಜೈಲಿನಲ್ಲಿದ್ದ. ಬಿಡುಗಡೆಗೊಂಡ ನಂತರ ಮತ್ತೆ ಕಳ್ಳತನಕ್ಕೆ ಇಳಿದಿದ್ದು, ಈಗ ಪುನಃ ಪೊಲೀಸರ ಅತಿಥಿಯಾಗಿದ್ದಾನೆ.

    ಮಾಹಿತಿ ಕೊಟ್ಟಾಗ ಯೂಕ್ರೇನ್​ನಿಂದ ಮರಳದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರಕ್ಕೆ ಖರ್ಚಾದದ್ದು ಎಷ್ಟು ಗೊತ್ತಾ?

    VIDEO: ಕಿವಿ ತೆರೆದು ಕೇಳಿಸಿಕೊಳ್ಳಿ… ಮಾರ್ಚ್​ 11ರಿಂದ ನಿಮ್ಮ ಕೌಂಟ್​ಡೌನ್​ ಶುರು… ನಿಮ್ಮ ಆಟ ಕ್ಲೋಸ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts