More

  ಕಾಡಾನೆ ದಾಳಿಗೆ ಕಾರಿನ ಹಿಂಭಾಗ ಜಖಂ

  ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚಲಕೆಬ್ಬೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಕಾಡಾನೆಯೊಂದು ದಾಳಿ ನಡೆಸಿ ಕಾರನ್ನು ಹಾನಿಗೊಳಿಸಿದೆ.

  ಗ್ರಾಮದ ಮುತ್ತುಕುಮಾರ್ ಅವರು ಎಂದಿನಂತೆ ಮನೆ ಸಮೀಪದ ತುಸು ದೂರದಲ್ಲಿ ಕಾರನ್ನು ನಿಲ್ಲಿಸಿದರು. ಆದರೆ ರಾತ್ರಿ 2.30ರಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆ ದಾಳಿ ನಡೆಸಿ ಕಾರಿನ ಹಿಂಭಾಗ ಜಖಂಗೊಳಿಸಿದ್ದು, ಗಾಜನ್ನು ಹೊಡೆದು ಹಾಕಿದೆ. ಕಾರಿನಲ್ಲಿ ಸೆನ್ಸಾರ್ ಅಳವಡಿಸಿದ್ದರಿಂದ ಶಬ್ದ ಕೇಳಿ ಪಕ್ಕದ ಮನೆಯಿಂದ ಹೊರಬಂದ ನಾಗರಾಜು ಅವರು ಬ್ಯಾಟರಿ ಹಿಡಿದು ಪರಿಶೀಲಿಸಿದಾಗ ಆನೆ ಮತ್ತೆ ದಾಳಿಗೆ ಮುಂದಾಗುತ್ತಿದ್ದನ್ನು ಕಂಡು ಅದನ್ನು ಕಾಡಿಗೆ ಓಡಿಸಿದ್ದಾರೆ. ಬಳಿಕ ಈ ಬಗ್ಗೆ ಕಾರಿನ ಮಾಲೀಕ ಮುತ್ತುಕುಮಾರ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿದು ಶುಕ್ರವಾರ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಒತ್ತಾಯಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts