More

    ತಾಲಿಬಾನಿಗಳಿಗೆ ಹೆದರಿ ಅಫ್ಘಾನ್‌ನಿಂದ ಯಾವ್ಯಾವ ದೇಶಗಳಿಗೆ ಹೋದವರೆಷ್ಟು? ಇಲ್ಲಿದೆ ಅಂಕಿ ಅಂಶ

    ಕಾಬುಲ್‌: ಈಗ ಸದ್ಯ ವಿಶ್ವದಾದ್ಯಂತ ಅಫ್ಘಾನಿಸ್ತಾನದ ಕರಾಳ ದಿನಗಳದ್ದೇ ಮಾತು. ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಸಿಕ್ಕಸಿಕ್ಕ ಕಡೆಗಳಲ್ಲಿ ಅಫ್ಘಾನ್‌ ಪ್ರಜೆಗಳು ಹೋಗುತ್ತಿದ್ದಾರೆ. ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಇದಾಗಲೇ ಅವರು ವಿಮಾನ ಏರಿ ಹೊರಟಿದ್ದಾರೆ.

    ಜೀವ ಉಳಿದರೆ ಸಾಕು ಎನ್ನುವಂತೆ ಯಾವ ದೇಶವಾದರೂ ಸರಿ, ಅಲ್ಲಿಗೆ ಹೋಗಿ ನೆಲೆಸಲು ಹವಣಿಸುತ್ತಿರುವ ಅಫ್ಘಾನ್ ಪ್ರಜೆಗಳಿಗೆ ಕೆಲವು ದೇಶಗಳು ಸಹಾಯಹಸ್ತ ಚಾಚಿ ಬರಮಾಡಿಕೊಳ್ಳುತ್ತಿವೆ. ಅದೇ ಇನ್ನೊಂದೆಡೆ, ಬಹುತೇಕ ದೇಶಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ದೇಶಗಳ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ವಿಮಾನ ಸೌಕರ್ಯ ಕಲ್ಪಿಸಿವೆ.

    ತಾಲಿಬಾನ್‌ ವಶಕ್ಕೆ ಸಂಪೂರ್ಣ ಅಫ್ಘಾನಿಸ್ತಾನ ಬಂದಮೇಲೆ ಇದುವರೆಗೆ ವಿವಿಧ ದೇಶಗಳಿಗೆ ಹೋಗಿರುವವರ ಸಂಖ್ಯೆ 28 ಸಾವಿರ ಎನ್ನಲಾಗಿದೆ. ಅಮೆರಿಕ, ಭಾರತ, ಇಂಗ್ಲೆಂಡ್‌, ಡೆನ್ಮಾರ್ಕ್, ಜರ್ಮನಿ, ಇಟಲಿ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿ 13 ದೇಶಗಳು ಅಫ್ಘನ್‌ ಪ್ರಜೆಗಳಿಗೆ ತಾತ್ಕಾಲಿಕವಾಗಿ ಆಶ್ರಯ ಕೊಡಲು ಒಪ್ಪಿಕೊಂಡಿವೆ. ಆದರೆ ಉಳಿದ ದೇಶಗಳು ತಮ್ಮ ಪ್ರಜೆಗಳನ್ನು ಮಾತ್ರ ವಾಪಸ್ ಕರೆ ತರುತ್ತಿವೆ. ಅಫ್ಘಾನಿಸ್ತಾನದ ಸಿಖ್ಖರು, ಹಿಂದೂಗಳು, ಸೇರಿ ಒಟ್ಟು 552 ಜನರನ್ನು ಕಾಬೂಲ್​ನಿಂದ ಭಾರತಕ್ಕೆ ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳಲ್ಲಿ ಕರೆ ತರಲಾಗಿದೆ. ಒಟ್ಟು ಭಾರತದ 25 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇಂದು (ಆ.23) 146 ಮಂದಿ ದೆಹಲಿಗೆ ಬಂದಿಳಿದಿದ್ದಾರೆ.
    ಅಮೆರಿಕಕ್ಕೆ ಕಳೆದೊಂದು ವಾರದಲ್ಲಿ ಒಟ್ಟು 17,000 ಜನರನ್ನು ಅಫ್ಘಾನಿಸ್ತಾನದಿಂದ ನೆಲದಿಂದ ಯುಸ್​ಗೆ ಸ್ಥಳಾಂತರಿಸಲಾಗಿದ್ದು, ಇದರಲ್ಲಿ 2,500 ಮಂದಿ ಅಮೆರಿಕನ್ನರು ಎಂದು ಯುಎಸ್​ ಸೇನೆಯ ಮೇಜರ್ ಜನರಲ್ ಹ್ಯಾಂಕ್ ಟೇಲರ್ ಅಂಕಿ ಅಂಶಗಳನ್ನು ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಒದಗಿಸಲೆಂದು ಅಮೆರಿಕ 5,800 ಸೈನಿಕರನ್ನು ನಿಯೋಜಿಸಿದೆ. ಆಗಸ್ಟ್ 31 ರೊಳಗೆ ಸ್ಥಳಾಂತರಿಸುವಿಕೆ ಪೂರ್ಣಗೊಳಿಸಲು ಗಡುವು ನೀಡಿದೆ. ಬೈಡನ್​ ಆಡಳಿತದ ಅಧಿಕಾರಿಗಳ ಮಾಹಿತಿ ಪ್ರಕಾರ 15 ಸಾವಿರ ಅಮೆರಿಕನ್ನರು ಸೇರಿ ಇನ್ನೂ 50 ರಿಂದ 60 ಸಾವಿರ ಜನರನ್ನು ಅಮೆರಿಕಕ್ಕೆ ಕರೆ ತರಬೇಕಿದೆ.

    ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಅಂದರೆ ಆಗಸ್ಟ್‌ 23ರವರೆಗೆ ಯಾವ್ಯಾವ ದೇಶಗಳಿಗೆ ಎಷ್ಟೆಷ್ಟು ಮಂದಿ ಸ್ಥಳಾಂತರಗೊಂಡಿದ್ದಾರೆ ಎಂಬ ಡಿಟೇಲ್ಸ್‌ ಇಲ್ಲಿದೆ.

    *ಅಮೆರಿಕ – 17 ಸಾವಿರ (ಇದರಲ್ಲಿ 2,500 ಮಂದಿ ಅಮೆರಿಕ ಪ್ರಜೆಗಳು)

    *ಯುನೈಟೆಡ್​ ಕಿಂಗ್​ಡಮ್​- 3,821

    *ಜರ್ಮನಿ- 2 ಸಾವಿರ

    *ಪಾಕಿಸ್ತಾನ- 1,100

    *ಇಟಲಿ- 1 ಸಾವಿರ

    *ಟರ್ಕಿ- 583

    *ಫ್ರಾನ್ಸ್​- 570

    *ಭಾರತ- 552

    *ಡೆನ್ಮಾರ್ಕ್​- 404

    *ನೆದರ್ಲ್ಯಾಂಡ್​- 300

    *ಆಸ್ಟ್ರೇಲಿಯಾ- 300

    *ಕೆನಡಾ- 294

    *ಸ್ಪೇನ್​- 273

    *ಪೋಲ್ಯಾಂಡ್​- 260

    *ಜೆಕ್ ಗಣರಾಜ್ಯ​- 170

    *ಉಕ್ರೇನ್​ – 83

    *ಹಂಗೇರಿ- 26

    *ಇಂಡೋನೇಷ್ಯಾ- 26

    *ರೊಮಾನಿಯಾ- 14

    *ಜಪಾನ್​​- 12

    ತಾಲಿಬಾನಿ ರಕ್ಕಸರು ಗಡಗಡ- 300 ಮಂದಿಯನ್ನು ಹೊಡೆದುರುಳಿಸಿದ ಪಂಜ್‌ಶೀರ್‌ ಯೋಧರು

    VIDEO: ಅಣ್ಣಾ… ಬದುಕುವ ದಾರಿಗಳು ಮುಚ್ಚಿವೆ… ನೀವೇ ನಮಗೆ ದಿಕ್ಕು… ರಾಖಿ ಸ್ವೀಕರಿಸಿ ಈ ಸಹೋದರಿಯರನ್ನು ಕಾಪಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts