More

    ಅಮೃತ್ ಮಹಲ್ ಕಾವಲಿನಲ್ಲಿ ಬೋನ್‌ಗೆ ಬಿದ್ದ ಚಿರತೆ

    ಬೀರೂರು: ಅಮೃತ್ ಮಹಲ್ ಕಾವಲಿನ ಶ್ರೀ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ಎರಡು ವರ್ಷ ಪ್ರಾಯದ ಚಿರತೆ ಬೋನ್‌ನಲ್ಲಿ ಭಾನುವಾರ ಸೆರೆಯಾಗಿದೆ.

    ಅಮೃತ್ ಮಹಲ್ ಕಾವಲಿನ ಸುತ್ತಮುತ್ತ ಚಿರತೆ ಸಂಚರಿಸುತ್ತಿರುವುದಾಗಿ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸಂಚಾರದ ಜಾಡುಹಿಡಿದು 15 ದಿನಗಳ ಹಿಂದೆ ಬೋನ್ ಇರಿಸಿದ್ದರು. ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ.ಎಸ್.ಮೋಹನ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸಿ.ಲೋಕೇಶ್ ಮತ್ತು ಉಪ ವಲಯ ಅರಣ್ಯಾಧಿಕಾರಿ ವಿ.ರವಿಕುಮಾರ್ ತಂಡ ಬೀರೂರಿನ ಅಮೃತ್ ಮಹಲ್ ಕಾವಲಿನ ದೇವಾಲಯದ ಸಮೀಪದಲ್ಲಿ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಶನಿವಾರ ತಡರಾತ್ರಿ ಬೋನಿನಲ್ಲಿದ್ದ ನಾಯಿಯನ್ನು ಹಿಡಿಯಲು ಹೋದ ಚಿರತೆ ಸೆರೆಯಾಗಿದೆ.
    ಚಿರತೆ ಬೋನ್‌ಗೆ ಬಿದ್ದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಆಗಮಿಸಿ ಚಿರತೆಯನ್ನು ಸ್ಥಳಾಂತರಿಸಿದರು. ಚಿರತೆಯನ್ನು ಮುತ್ತೋಡಿ ಅಭಯಾರಣ್ಯದಲ್ಲಿ ಬಿಡುವುದಾಗಿ ಅಧಿಕಾರಿಗಳು ತಿಳಿಸಿದರು.
    ಚಿರತೆ ಸೆರೆಸಿಕ್ಕ ವಿಷಯ ತಿಳಿದ ಕೂಡಲೇ ಪಟ್ಟಣದಿಂದ ಜನರು ಹೋಗಿ ವೀಕ್ಷಿಸಿ ಮೊಬೈಲ್‌ಗಳಲ್ಲಿ ಫೋಟೋ ತೆಗೆದು, ವಿಡಿಯೋ ಮಾಡಲು ಮುಂದಾದರು. ಜನರ ಕಿರುಚಾಟಕ್ಕೆ ಗಾಬರಿಗೊಂಡ ಚಿರತೆ ಬೋನಿನೊಳಗೆ ಘರ್ಜಿಸುತ್ತಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರನ್ನು ನಿಭಾಯಿಸುವುದೇ ಕಷ್ಟವಾಯಿತು. ನಂತರ ಕ್ರೇನ್ ಸಹಾಯದಿಂದ ಬೋನನ್ನು ಪಿಕ್‌ಅಪ್ ವಾಹನಕ್ಕೆ ಸ್ಥಳಾಂತರಿಸಿ ಕಡೂರು ಅರಣ್ಯ ಅಧಿಕಾರಿಗಳ ಕಚೇರಿ ಆವರಣಕ್ಕೆ ಕೊಂಡೊಯ್ಯಲಾಯಿತು.
    ಕಾರ್ಯಾಚರಣೆಯಲ್ಲಿ ಅರಣ್ಯ ಗಸ್ತು ಅಧಿಕಾರಿ ನಂದಕುಮಾರ್, ಪ್ರಸನ್ನ, ಯೂನಸ್ ಬೇಗ್, ರವಿಕುಮಾರ್ ಮತ್ತು ವಾಚರ್‌ಗಳಾದ ಬಸಣ್ಣ. ಸಿದ್ದಪ್ಪ, ಈಶ್ವರ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts