More

    ಇಲ್ಲಿಯ ಕೆರೆ, ಬಾತುಕೋಳಿ, ಮೊಲಗಳಿಗೆ ಧರ್ಮ ಉಂಟೆ? ಇನ್ಮುಂದೆ ಈ ಕಾಲೇಜಲ್ಲಿ ನಡೆಯುತ್ತೆ ಹೋಮ-ಹವನ…

    ನವದೆಹಲಿ: ಹಿಂದೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಇಂದು ಕೂಡ ಕೆಲವೆಡೆ ಈ ಪದ್ಧತಿ ಚಾಲ್ತಿಯಲ್ಲಿದ್ದು, ಭಾರತೀಯ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಸಲುವಾಗಿ, ಇಂದಿನ ವಿದ್ಯಾರ್ಥಿಗಳಿಗೆ ಅವುಗಳನ್ನು ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ.

    ಇದೀಗ ಅಂಥದ್ದೇ ಒಂದು ವಿಶೇಷ ಯೋಜನೆಯನ್ನು ದೆಹಲಿಯ ಕಾಲೇಜೊಂದು ರೂಪಿಸಿದೆ. ವೈದಿಕ ಆಚರಣೆಯನುಸಾರ ಕ್ರಮಬದ್ಧವಾಗಿ ಹೋಮ-ಹವನಾದಿಗಳನ್ನು ನಡೆಸಲು ಅನುವಾಗುವಂತಹ ಯಾಗಶಾಲೆ ನಿರ್ಮಾಣಕ್ಕೆ ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಲಕ್ಷ್ಮಿಬಾಯಿ ಕಾಲೇಜು ಮುಂದಾಗಿದೆ.

    ಈಗಾಗಲೇ ಈ ಕಾಲೇಜು ತನ್ನ ಪರಿಸರದಲ್ಲಿ ಗೋಕುಲ್ ಎಂಬ ಉದ್ಯಾನವನವನ್ನು ನಿರ್ಮಿಸುತ್ತಿದೆ. 2020ರಿಂದ ನಿರ್ಮಿಸಲು ಆರಂಭಿಸಲಾಗಿರುವ ಈ ಉದ್ಯಾನವು ಇಂಗ್ಲಿಷ್‌ನಲ್ಲಿ ಹೇಳುವುದಾದರೆ ‘ಗೋ ಕೂಲ್‌’ (ತಣ್ಣಗಾಗಿ ಇರಿ) ಎಂಬುದನ್ನೂ ಸೂಚಿಸುತ್ತದೆ ಎನ್ನುವುದು ಕಾಲೇಜಿನ ಆಡಳಿತ ಮಂಡಳಿಯ ಮಾತು. ಗೋ ಕೂಲ್‌ ಹೆಸರಿಗೆ ತಕ್ಕ ಹಾಗೆ ಇಲ್ಲಿಯ ಪರಿಸರದಲ್ಲಿನ ಪ್ರಶಾಂತತೆಯು ಎಲ್ಲ ಮಾನಸಿಕ ಒತ್ತಡಗಳನ್ನು ತೊಲಗಿಸಿ ಇಂದು ಯುವ ಪೀಳಿಗೆಯವರು ಹೆಚ್ಚಾಗಿ ಉಚ್ಚರಿಸುವ ‘ಕೂಲ್’ ಆಗಿರುವಂತಹ ಅನುಭವವನ್ನು ನೀಡುತ್ತದೆ ಎನ್ನುತ್ತಾರೆ ಅವರು.

    ಇಲ್ಲಿಯ ಉದ್ಯಾನವನವು ಗುರುಕುಲ ಯುಗದ ಕಾಲವನ್ನು ನೆನಪಿಸುವಂತೆ ನಿರ್ಮಿಸಲಾಗಿದ್ದು ಕುಟಿರ, ಗುಡಿಸಲುಗಳು ಸರೋವರ, ಹಸಿರಿನ ವನ್ಯರಾಶಿ, ದನದ ಕೊಟ್ಟಿಗೆ, ಬಾತುಕೋಳಿಗಳು, ಮೊಲಗಳು ಹೀಗೆ ಪ್ರಾಕೃತಿಕ ಸಂಪನ್ಮೂಲಗಳಿಂದ ತುಂಬಿದೆ.

    ಗೋಕುಲ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಜತೆಗೆ ಭಾರತೀಯ ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯಗಳ ಬಳಿಗೆ ಕರೆತರುವ ಉದ್ದೇಶದಿಂದ ನಿರ್ಮಿಸಲಾಗಿದೆ ಎನ್ನುತ್ತಾರೆ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಚಾರ್ಯರಾದ ಪ್ರತ್ಯುಶ್ ವತ್ಸಲಾ. ಯಾಗದಿಂದ ಸುತ್ತಮುತ್ತಲಿನ ಸ್ಥಳ ಪರಿಶುದ್ಧ ಹಾಗೂ ಪವಿತ್ರವಾಗಿರುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಹಳ್ಳಿಗಳೆಂದರೇನು ಗೊತ್ತಾಗಬೇಕು, ಅಲ್ಲಿನ ಸಂಸ್ಕೃತಿ ಬಗ್ಗೆ ಅರಿವು ಮೂಡಬೇಕು ಹಾಗೂ ಅವರು ಅದಕ್ಕೆ ಗೌರವ ನೀಡಬೇಕು ಎನ್ನುವುದು ಇದರ ಉದ್ದೇಶ ಎಂದಿದ್ದಾರೆ ಅವರು.

    ಸದ್ಯ, ಗೋಕುಲದಲ್ಲಿ ಯಾಗಶಾಲೆಯ ನಿರ್ಮಾಣ ಹಂತದ ಕಾಮಗಾರಿಗಳು ಕೊನೆಯ ಹಂತದಲ್ಲಿದ್ದು ಸದ್ಯದಲ್ಲೇ ಕಾರ್ಯಾಚರಣೆಗೆ ಮುಕ್ತವಾಗಲಿದೆ. ಇಲ್ಲಿಯ ವಿಶೇಷತೆ ಎಂದರೆ ಪ್ರತಿದಿನ ಸಂಜೆ ನಾಲ್ಕು ಗಂಟೆಗೆ ಬೋಧಕೇತರ ಸಿಬ್ಬಂದಿಗೆ ಧ್ಯಾನದ ಕೋಣೆಯಲ್ಲಿ ಭಗವದ್ಗೀತೆಯ ಪಠಣ ಏರ್ಪಡಲಾಗುತ್ತಿದೆ.

    ‘ಇದು ಧರ್ಮಾತೀತವಾಗಿರುವ ಕಾಲೇಜು. ಇಲ್ಲಿ ಮುಸ್ಲಿಮರೂ ಸಹ ಬಂದು ಭಗವದ್ಗೀತೆ ಪಠಣ ಮಾಡುತ್ತಾರೆ, ಈ ಹಳ್ಳಿಯಂತಹ ಪರಿಸರವನ್ನು ಅಲಂಕರಿಸುವ ವಿದ್ಯಾರ್ಥಿಗಳು ಯಾವ ಧರ್ಮದವರೆಂದು ನನಗೆ ಗೊತ್ತಿಲ್ಲ, ಯಾರಾದರೂ ಈ ಕೆರೆ ಹಿಂದು ಎನ್ನಲಾದಿತೆ? ಇಲ್ಲಿನ ಬಾತುಕೋಳಿಗಳು, ಮೊಲಗಳು ಹಿಂದುವೆ ಅಥವಾ ಅವುಗಳಿಗೆ ಯಾವುದಾದರೂ ಧರ್ಮ ಉಂಟೆ? ಯಾರೂ ತಾನೆ ಇದಕ್ಕೆ ಉತ್ತರಿಸಬಲ್ಲರು ಅಲ್ಲವೆ? ಹಾಗೆಯೇ ನಮ್ಮ ಈ ಕಾಲೇಜು ಎನ್ನುತ್ತಾರೆ ಪ್ರತ್ಯುಶ್ ವತ್ಸಲಾ.

    ಎಂಬಿಬಿಎಸ್‌ ಕಲಿಯಲು ಯೂಕ್ರೇನ್‌, ರಷ್ಯಕ್ಕೆ ಹೋಗುವುದೇಕೆ? ಭಾರತದಲ್ಲಿ ಇಲ್ಲದ್ದು ಅಂಥದ್ದೇನಿದೆ ಅಲ್ಲಿ ಗೊತ್ತಾ?

    ಶಾಲೆಗಳಿಗೆ ಬೇಸಿಗೆ ರಜೆ ಕಟ್- ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯೂ ಬಿಡುಗಡೆ: ಇಲ್ಲಿದೆ ಫುಲ್​ ಡಿಟೇಲ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts