More

    ಪ್ರೇಮಕ್ಕೆ ಧರ್ಮದ ಅಡ್ಡಿ: ಬಾವಿಯೊಳಗೆ ಜಿಗಿದು ಪ್ರಾಣಬಿಟ್ಟ ಬಾಲಕಿ-ಯುವಕ!

    ವಿಜಯಪುರ: ಆಕೆ 16 ವರ್ಷದ ಮುಸ್ಲಿಂ ಬಾಲಕಿ, ಆತ 19 ವರ್ಷದ ಹಿಂದೂ ಯುವಕ ಶಿವಕುಮಾರ್‌ ಚೌಧರಿ. ಇಬ್ಬರೂ ವಿಜಯಪುರ ಜಿಲ್ಲೆಯ ಬನಹಟ್ಟಿ ಗ್ರಾಮದವರು.

    ಇಬ್ಬರ ನಡುವೆ ಅದ್ಹೇಗೋ ಪ್ರೇಮ ಅಂಕುರಿಸಿಬಿಟ್ಟಿದೆ. ಆದರೆ ಇಬ್ಬರ ಧರ್ಮವೂ ಬೇರೆ ಬೇರೆ. ತಮ್ಮ ಪ್ರೇಮಕ್ಕೆ ಯಾರೂ ಒಪ್ಪುವುದಿಲ್ಲ ಎಂಬ ತೀರ್ಮಾನಕ್ಕೆ ಈ ಜೋಡಿ ಬಂದುಬಿಟ್ಟಿದೆ.

    ಇದೇ ಕಾರಣಕ್ಕೆ ಇಬ್ಬರೂ ಗ್ರಾಮದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಶವಗಳು ಬಾವಿಯಲ್ಲಿ ತೇಲಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಬಾವಿಯಿಂದ ತೆಗೆದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಇಡುಕ್ಕಿ ಭೂಕುಸಿತದ ಭೀಕರತೆ; ಇಂದು 16 ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆದ ರಕ್ಷಣಾ ಸಿಬ್ಬಂದಿ

    ಇಬ್ಬರ ಪ್ರೀತಿಗೆ ಮನೆಯಲ್ಲಿ ಅನ್ಯ ಧರ್ಮೀಯರು ಎಂಬ ಕಾರಣಕ್ಕೆ ತಮ್ಮ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗುವ ಭಯದಲ್ಲಿ ಇಬ್ಬರೂ ಭಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಆದರೆ ಈ ಪ್ರೀತಿಯ ವಿಚಾರ ಮನೆಯಲ್ಲಿ ತಿಳಿದಿತ್ತೇ? ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರೇ ಅಥವಾ ವಿರೋಧ ವ್ಯಕ್ತವಾಗುವ ಭಯಕ್ಕೇ ಈ ಇಬ್ಬರೂ ಆತ್ಮಹತ್ಯೆಯಂಥ ಕೃತ್ಯಕ್ಕೆ ಮುಂದಾದರೇ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

    ಈ ಕುರಿತು ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸ್ ಠಾಣಾ ಪಿಎಸ್ ಐ ರವಿ ಯಡವಣ್ಣವರ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ತಪ್ಪೇ ತೋರಿಸಲ್ಲ ಎಂದ ಟೆಸ್ಟ್‌ನಲ್ಲೂ ನೆಗೆಟಿವ್‌- ಆದ್ರೂ ಕರೊನಾಕ್ಕೆ ಪಿಎಸ್‌ಐ ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts