More

    VIDEO: ‘ಏಯ್‌… ವಿಡಿಯೋ ಮತ್ ಕರ್…’ ತಲೆಗೆ ಕೇಸರಿ ಶಾಲು ಧರಿಸಿದವರಾರು? ಕಿಚ್ಚು ಹೊತ್ತಿಸಿದ ವೈರಲ್‌ ವಿಡಿಯೋ

    ಬೆಂಗಳೂರು: ಕರ್ನಾಟಕದಲ್ಲಿ ಶುರುವಾದ ಹಿಜಾಬ್‌ ಗಲಾಟೆ ರಾಜ್ಯವನ್ನಷ್ಟೇ ಅಲ್ಲದೇ ದೇಶವನ್ನೂ ದಾಟಿ ಪಾಕಿಸ್ತಾನ, ಅಪ್ಘಾನಿಸ್ತಾನಗಳಲ್ಲಿಯೂ ಸದ್ದು ಮಾಡುತ್ತಿದೆ. ಅಲ್ಲಿಯ ಮುಖಂಡರು ಕೂಡ ಈ ವಿವಾದದ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಸದ್ಯ ಹಿಜಾಬ್‌ ಘಟನೆ ರಾಜಕೀಯ ಸ್ವರೂಪವನ್ನೂ ಪಡೆದಿದ್ದು, ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಕಾರ್ಯ ನಡೆಯುತ್ತಿದೆ.

    ಇದರ ನಡುವೆಯೇ ಇದೀಗ ಶಾಕಿಂಗ್ ಎನ್ನುವಂಥ ವಿಡಿಯೋ ಒಂದು ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ವಿಡಿಯೋ ಶಿವಮೊಗ್ಗದ್ದು ಎಂದು ಕೆಲವರು ಹೇಳುತ್ತಿದ್ದರೂ ಇದು ಎಲ್ಲಿಯ ವಿಡಿಯೋ, ಯಾವಾಗ ತೆಗೆದಿರುವುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

    ಆದರೆ ಇದರಲ್ಲಿರುವ ಕೇಸರಿ ಶಾಲು ಮತ್ತು ಅಲ್ಲಿ ಹೇಳುತ್ತಿರುವ ಕೆಲವು ಮಾತುಗಳನ್ನು ಕೇಳಿಸಿಕೊಂಡರೆ ಇದು ಕರ್ನಾಟಕದ ಯಾವುದೋ ಊರಿನಲ್ಲಿ ನಡೆದಿರುವುದು ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ಇದರಲ್ಲಿ ಹಿಂದಿ ಭಾಷೆಯ ಜತೆಗೆ ಕನ್ನಡವೂ ಸ್ಪಷ್ಟವಾಗಿ ಕೇಳಿಬರುತ್ತಿದೆ.

    ಈ ವಿಡಿಯೋ ಮಾತ್ರ ಇದೀಗ ಭಾರಿ ಸಂದೇಹಕ್ಕೆ ಆಸ್ಪದ ಮಾಡಿಕೊಟ್ಟಿದೆ. ಏಕೆಂದರೆ ಇಲ್ಲಿ ಕೆಲವು ಯುವಕರು ತಾವು ತಲೆಗೆ ಧರಿಸಿರುವ ಕೇಸರಿ ಶಾಲನ್ನು ತೆಗೆದು ಒಂದೆಡೆ ಗುಂಪು ಹಾಕುತ್ತಿದ್ದಾರೆ. ಅವರೆಲ್ಲರೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ವಿಡಿಯೋದಲ್ಲಿ ‘ಇಲ್ನೋಡಿ’ ಎಂದು ಕನ್ನಡದಲ್ಲಿ ಹೇಳುತ್ತಿರುವುದೂ ಕೇಳಿಸುತ್ತಿದೆ. ಅದೇ ವೇಳೆ, ತಮ್ಮ ತಲೆಯಿಂದ ಕೇಸರಿ ಶಾಲನ್ನು ತೆಗೆದು ಒಂದು ಕಡೆ ಹಾಕುತ್ತಿರುವ ಯುವಕರು ಹಿಂದಿಯಲ್ಲಿ ಮಾತನಾಡುತ್ತಿರುವುದು ಕೂಡ ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಬಹುದು. ವಿಡಿಯೋ ಮಾಡುತ್ತಿರುವ ವ್ಯಕ್ತಿಯ ಕ್ಯಾಮೆರಾಗೆ ಒಬ್ಬ ಕೈಯನ್ನು ಅಡ್ಡ ಹಾಕಿ ‘ಯೇ ವಿಡಿಯೋ ಮತ್‌ ಕರೋ (ಯೇ. ವಿಡಿಯೋ ಮಾಡಬೇಡ) ಎನ್ನುವುದು ಕೂಡ ಕೇಳಿಬರುತ್ತಿದೆ.

    ಈ ವಿಡಿಯೋದ ಸತ್ಯಾಂಶ ಏನು ಎಂಬುದು ಸದ್ಯ ಗೊತ್ತಿಲ್ಲ. ಆದರೆ ಹಿಜಾಬ್‌ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಬೆಂಕಿಗೆ ತುಪ್ಪ ಸುರಿಯುವಂತೆ ಈ ವಿಡಿಯೋ ವೈರಲ್‌ ಆಗಿದೆ. ವಿಡಿಯೋ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

    ಮೋಹಿತ್‌ ಎನ್‌ಎಂ ಎನ್ನುವವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿದೆ ನೋಡಿ:

    VIDEO: ಹಿಜಾಬ್‌ ವಿವಾದ- ಗಲಾಟೆ ಮಾಡ್ಬೇಡಿ ಎಂದು ಶಿಕ್ಷಕಿ ಮನವಿ ಮಾಡಿದ್ರೆ, ಈ ವಿದ್ಯಾರ್ಥಿನಿ ಹೇಳಿದ್ದು…

    ಹಿಜಾಬ್‌ ಧರಿಸಿ ಪೋರ್ನ್‌ ವಿಡಿಯೋ ಶೂಟಿಂಗ್‌: ನೀಲಿಚಿತ್ರ ತಾರೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts