More

    ಮಧ್ಯಂತರ ಆದೇಶ ಪ್ರಕಟಿಸಿದ ಹೈಕೋರ್ಟ್‌ ಪೂರ್ಣಪೀಠ: ತರಗತಿಯೊಳಗೆ ಹಿಜಾಬ್​, ಕೇಸರಿ ಶಾಲಿಗೆ ನಿರ್ಬಂಧ

    ಬೆಂಗಳೂರು: ಹಿಜಾಬ್​ ವಿವಾದ ಕುರಿತು ಹೈಕೋರ್ಟ್‌ ಪೂರ್ಣಪೀಠ ಶುಕ್ರವಾರ ಮಧ್ಯಂತರ ಆದೇಶ ಪ್ರಕಟಿಸಿದೆ. ಲಿಖಿತರೂಪದಲ್ಲಿ ಪ್ರಕಟಿಸಿದ ಆದೇಶ ಪತ್ರಿ ವಿಜಯವಾಣಿಗೆ ಲಭ್ಯವಾಗಿದೆ.

    ತರಗತಿಯೊಳಗೆ ಧರ್ಮಾನುಸಾರ ಕೇಸರಿ ಶಾಲು, ಸ್ಕಾರ್ಫ್, ಹಿಜಾಬ್, ಧಾರ್ಮಿಕ ಬಾವುಟಗಳನ್ನು ನಿರ್ಬಂಧಿಸಲಾಗುತ್ತಿದೆ. ಇವುಗಳನ್ನು ತರಗತಿಯೊಳಗೆ ವಿದ್ಯಾರ್ಥಿಗಳು ತರಬಾರದು ಎಂದು ಹೈಕೋರ್ಟ್​ ಆದೇಶಿಸಿದೆ.

    ಹಿಜಾಬ್ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಶಿಕ್ಷಣ ಸಂಸ್ಥೆಗಳ ಬಂದ್ ನೋವಿನ ಸಂಗತಿ. ನಮ್ಮದು ಬಹು ಸಂಸ್ಕೃತಿ, ಧರ್ಮ ಹಾಗೂ ಭಾಷೆ ಹೊಂದಿರುವ ರಾಷ್ಟ್ರ. ಪ್ರತಿ ನಾಗರಿಕನಿಗೂ ಅವನಿಚ್ಛೆಯ ಧರ್ಮ ಆಚರಿಸುವ ಹಕ್ಕಿದೆ. ಈ ಹಕ್ಕು ಪರಿಪೂರ್ಣವಲ್ಲ, ಅದಕ್ಕೂ ಕೆಲ ನಿರ್ಬಂಧಗಳಿವೆ. ತರಗತಿಗಳಲ್ಲಿ ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯೇ? ಇದು ಸಂವಿಧಾನದ ವ್ಯಾಪ್ತಿಯಲ್ಲಿ ಬರುವುದೇ? ಈ ಬಗ್ಗೆ ಆಳವಾಗಿ ಪರಿಶೀಲನೆ ನಡೆಸಬೇಕಿದೆ. ನಾಗರಿಕ ಸಮಾಜದಲ್ಲಿ ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವುದು ಸರಿಯಲ್ಲ. ಇದರಿಂದ ಶೈಕ್ಷಣಿಕ ಸಂಸ್ಥೆಗಳು ಮುಚ್ಚಲ್ಪಟ್ಟಿರುವುದು ಸಂತಸದ ಸಂಗತಿಯಲ್ಲ. ಈ ಪ್ರಕರಣವನ್ನು ತುರ್ತಾಗಿ ಪರಿಗಣಿಸಿ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್‌ ಪೂರ್ಣಪೀಠ ತಿಳಿಸಿದೆ.

    ಪ್ರತಿಭಟನೆಗಳಿಂದ ಶಾಲಾ-ಕಾಲೇಜುಗಳು ಬಂದ್ ಆಗಬಾರದು. ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೇನು ಮುಕ್ತಾಯವಾಗಲಿದೆ. ಶೈಕ್ಷಣಿಕ ವರ್ಷ ವಿಳಂಬವಾದರೆ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆ ತರಲಿದೆ. ಉನ್ನತ ಶಿಕ್ಷಣದ ಕೋರ್ಸ್‌ಗಳ ಪ್ರವೇಶಕ್ಕೆ ಈಗಾಗಲೇ ಸಮಯ ನಿಗದಿಯಾಗಿರುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆದು ತರಗತಿಗಳಿಗೆ ಹಾಜರಾಗಲು ಈ ಸಂಬಂಧ ಸರ್ಕಾರ ಹಾಗೂ ಸಂಬಂಧಪಟ್ಟವರು ಅವಕಾಶ ನೀಡಬೇಕು. ಮುಂದಿನ ಆದೇಶದವರೆಗೆ ತರಗತಿಯೊಳಗೆ ಧರ್ಮಾನುಸಾರ ಕೇಸರಿ ಶಾಲು, ಸ್ಕಾರ್ಫ್, ಹಿಜಾಬ್, ಧಾರ್ಮಿಕ ಬಾವುಟಗಳನ್ನು ನಿರ್ಬಂಧಿಸಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೂ ನಾವು ನಿರ್ಬಂಧ ಹೇರುತ್ತಿದ್ದೇವೆ. ಈ ಆದೇಶವು ಈಗಾಗಲೇ ಕಾಲೇಜು ಅಭಿವೃದ್ಧಿ ಸಮಿತಿಗಳು ವಸ್ತ್ರಸಂಹಿತೆ ಅಥವಾ ಸಮವಸ್ತ್ರ ನಿಗದಿಪಡಿಸಿದ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಫೆ.14ಕ್ಕೆ ಮುಂದೂಡಲಾಗಿದೆ.

    ಹಿಜಾಬ್​ ವಿವಾದ: ಸ್ಫೋಟಕ ರಹಸ್ಯ ಬಯಲು, ಎರಡು ತಿಂಗಳ ಹಿಂದೆಯೇ ನಡೆದಿತ್ತು ಮಾಸ್ಟರ್​ ಪ್ಲ್ಯಾನ್…

    ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts