More

    ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು

    ಹುಮನಾಬಾದ್: ಹೈಕೋರ್ಟ್​ ಆದೇಶದ ಮಧ್ಯೆಯೂ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ಕೆಲ ವಿದ್ಯಾರ್ಥಿಗಳು ಮಂಗಳವಾರ ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾದರು. ಮುಸ್ಲಿಂ ವಿದ್ಯಾರ್ಥಿನಿಯರು ನಿತ್ಯವೂ ಹಿಜಾಬ್ ಧರಿಸಿ ಬರುತ್ತಿದ್ದು, ನ್ಯಾಯಾಲಯ ಹಾಗೂ ಸರ್ಕಾರದ ಆದೇಶ ಗಾಳಿಗೆ ತೂರುತ್ತಿದ್ದಾರೆ. ನ್ಯಾಯ ಎಂಬುದು ಎಲ್ಲರಿಗೂ ಸಮಾನ. ಆದರೆ ಅವರು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ನಾವು ಸಹ ಕೇಸರಿ ಶಾಲು ಧರಿಸಿ ಬಂದಿದ್ದೇವೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ರವಿಕುಮಾರ ಹಾಗೂ ಪ್ರಾಚಾರ್ಯ ವೀರಣ್ಣ ತುಪ್ಪದ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಮನವೊಲಿಸಿ ಮನೆಗೆ ಕಳುಹಿಸಿದರು. ಕಾಲೇಜಿನಲ್ಲಿ ಈವರೆಗೆ ಹಿಜಾಬ್ ಮತ್ತು ಕೇಸರಿ ವಿವಾದ ಇರಲಿಲ್ಲ. ಇಂದು ಕೆಲ ವಿದ್ಯಾರ್ಥಿಗಳು ಏಕಾಏಕಿ ಕೇಸರಿ ಶಾಲು ಧರಿಸಿ ಬಂದಿದ್ದರಿಂದ ಮನವೊಲಿಸಿದ್ದು, ಸದ್ಯ ಶಾಂತ ವಾತಾವಣವಿದೆ ಎಂದು ಪ್ರಾಚಾರ್ಯ ತುಪ್ಪದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts