More

    ಕೋಳಿ ಮೊದಲೊ? ಮೊಟ್ಟೆ ಮೊದಲೊ? ಸುದೀರ್ಘ ಸಂಶೋಧನೆ ನಂತರ ಅಂತೂ ಸಂಶೋಧಕರಿಗೆ ಸಿಕ್ಕಿದೆ ಈ ಉತ್ತರ….

    ಕೋಳಿ ಮೊದಲೋ, ಮೊಟ್ಟೆ ಮೊದಲೋ… ಈ ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡಿದ್ದಿದೆ. ಈ ಬಗ್ಗೆ ಹಲವಾರು ದಶಕಗಳಿಂದ ಬೇರೆ ಬೇರೆ ದೇಶಗಳ ತಜ್ಞರು ಸಂಶೋಧನೆ ನಡೆಸುತ್ತಿದ್ದು, ಈ ಬಗ್ಗೆ ಇದಾಗಲೇ ಅಧ್ಯಯನ ವರದಿಗಳನ್ನೂ ಹೇಳಿದ್ದಾರೆ. ಕೆಲವು ತಮಾಷೆಯ ಮಾತುಗಳು ಕೂಡ ಕೋಳಿ ಮತ್ತು ಮೊಟ್ಟೆಯ ವಿಚಾರದಲ್ಲಿ ನಡೆಯುತ್ತಲೇ ಬಂದಿವೆ. ಇವೆರಡರಲ್ಲಿ ಯಾವುದು ಮೊದಲು ಎಂದು ಕೇಳಿದರೆ ಯಾವುದನ್ನು ಮೊದಲು ಆರ್ಡರ್‌ ಮಾಡುತ್ತೇವೆಯೋ ಅದೇ ಮೊದಲು ಬರುವುದು ಎಂದು ತಮಾಷೆ ಮಾಡುವವರೂ ಇದ್ದಾರೆ.

    ಆದರೆ ಈ ಪ್ರಶ್ನೆ ವಿಜ್ಞಾನಿಗಳು, ಸಂಶೋಧಕರ ತಲೆ ಕೆಡಿಸಿರುವುದಂತೂ ನಿಜ. ಕೆಲವು ದೇಶಗಳ ತಜ್ಞರು ಮೊಟ್ಟೆ ಮೊದಲು ಎಂದಿದ್ದರೆ, ಇನ್ನು ಕೆಲವರು ಕೋಳಿ ಮೊದಲು ಎಂದಿದ್ದಾರೆ. ಮೊಟ್ಟೆಯನ್ನು ರೂಪಿಸಲು ಪ್ರೋಟೀನ್‌ ಅಗತ್ಯವಿರಬೇಕು, ಅದಕ್ಕಾಗಿಯೇ ಕೋಳಿ ಬೇಕು ಎನ್ನುವುದು ಅವರ ವಾದ. ತಮ್ಮ ತಮ್ಮ ಹೇಳಿಕೆಗೆ ಸಾಕಷ್ಟು ವೈಜ್ಞಾನಿಕ ಪುರಾವೆಗಳನ್ನೂ ಅವರು ನೀಡಿದ್ದಾರೆ.

    ಇದರ ನಡುವೆಯೇ ಈಗ ವಿವಿಧ ದೇಶಗಳ ವಿಜ್ಞಾನಿಗಳು ಒಟ್ಟಿಗೇ ಕೂತು ಬಹಳ ವರ್ಷಗಳಿಂದ ಅಧ್ಯಯನವೊಂದನ್ನು ನಡೆಸಿದ್ದು, ಅದನ್ನೀಗ ಬಹಿರಂಗಗೊಳಿಸಲಾಗಿದೆ. ಈ ಹಿಂದೆ ಕೆಲವರು ನಡೆಸಿದ್ದ ಸಂಶೋಧನೆಯಲ್ಲಿ ಬಂದಿರುವ ವರದಿಯನ್ನೇ ಈ ಸಂಶೋಧಕರೂ ಹೇಳಿದ್ದು, ತಮ್ಮ ಹೇಳಿಕೆಗೆ ಇನ್ನಷ್ಟು ಪುರಾವೆಗಳನ್ನು ಇವರು ಒದಗಿಸಿದ್ದಾರೆ.

    ಅಷ್ಟಕ್ಕೂ ಈ ಹೊಸ ಸಂಶೋಧನೆಯಿಂದ ಕಂಡುಬಂದಿರುವ ಸತ್ಯ ಎಂದರೆ ಕೋಳಿ ಮೊದಲಲ್ಲ, ಬದಲಿಗೆ ಮೊಟ್ಟೆಯೇ ಮೊದಲು ಎಂದು. ಹಾಗಿದ್ದರೆ ಕೋಳಿಯಿಲ್ಲದೇ ಮೊಟ್ಟೆ ಎಲ್ಲಿಂದ ಬಂತು ಎಂದು ಕೇಳುವವರಿಗೆ ತಮ್ಮ ಅಧ್ಯಯನದ ವರದಿಯನ್ನು ವಿಜ್ಞಾನಿಗಳು ವಿವರಿಸುವುದು ಹೀಗೆ, ಇದು ಸ್ವಲ್ಪ ತಿಳಿದುಕೊಳ್ಳಲು ಕಷ್ಟವಾದರೂ ಸಂಶೋಧಕರು ಹೇಳಿರುವ ಅಂಶ ಕುತೂಹಲವಾಗಿದೆ.
    ಸಂಶೋಧಕರು ಹೇಳಿದ್ದಿಷ್ಟು…

    ‘ನೋಡಿ ಉದಾಹರಣೆಯೊಂದಿಗೆ ಮೊದಲು ಅರ್ಥ ಮಾಡಿಸುತ್ತೇವೆ. ಇದು ಕೇವಲ ಕಾಲ್ಪನಿಕವಷ್ಟೇ. ಒಂದು ವೇಳೆ ಆನೆ ಮತ್ತು ಸಿಂಹ ಸೇರಿತು ಎಂದುಕೊಳ್ಳಿ. ಆ ಸಮಯದಲ್ಲಿ ಆ ಆನೆ ಮೊಟ್ಟೆ ಇಟ್ಟಿತು ಎಂದುಕೊಳ್ಳಿ… ಆ ಮೊಟ್ಟೆಯಿಂದ ಸಿಂಹ ಹುಟ್ಟಿತು ಎಂದುಕೊಳ್ಳೋಣ. ಆಗ ಇದು ಆನೆಯ ಮೊಟ್ಟೆ ಎನ್ನುತ್ತೇವೋ? ಸಿಂಹದ ಮೊಟ್ಟೆ ಎನ್ನುತ್ತೇವೆಯೋ? ಆನೆ ಮತ್ತು ಸಿಂಹ ಒಟ್ಟಿಗೆ ಸೇರಿ ಸಂತಾನೋತ್ಪತ್ತಿ ಮಾಡಿದ ಕಾರಣ ಎರಡರಲ್ಲಿ ಒಂದು ಹುಟ್ಟಿದೆಯಷ್ಟೇ. ಇದಕ್ಕೆ ಕಾರಣ ಎರಡು ಜೀವಿಗಳು ಸಂತಾನೋತ್ಪತ್ತಿ ಮಾಡಿದಾಗ, ಅವುಗಳ ಎರಡೂ ಡಿಎನ್‌ಎಗಳು ಹುಟ್ಟುವ ಮಗುವಿನಲ್ಲಿ ಇರುತ್ತವೆ. ಆದರೆ ಅದು 100 ಪ್ರತಿಶತ ಒಂದೇ ಆಗಿರುವುದಿಲ್ಲ.

    ಅದೇ ರೀತಿ ಕೋಳಿ ಮತ್ತು ಮೊಟ್ಟೆಯಲ್ಲಿಯೂ ಆಗಿದೆ. ಇದೊಂದು ರೀತಿಯಲ್ಲಿ ರೂಪಾಂತರವಾಗಿರುವ ಹೊಸ ತಳಿಯಷ್ಟೇ. ಇದರ ಅರ್ಥ ಇಷ್ಟೇ. ಲಕ್ಷಗಟ್ಟಲೆ ವರ್ಷಗಳ ಹಿಂದೆ, ಈಗೇನು ನಾವು ಕೋಳಿ ಎಂದು ಕರೆಯುತ್ತೇವೆಯೋ, ಅದೇ ಮಾದರಿಯ ಪ್ರಾಣಿಯೊಂದು ಮತ್ತೊಂದು ಮಾದರಿಯ ಪ್ರಾಣಿಯ ಜತೆ ಸಂಯೋಗ ಹೊಂದಿದ್ದವು. ಇದು ಬರುಬರುತ್ತಾ ಅನುವಂಶಿಕ ರೂಪಾಂತರದ ನಂತರ, ವಿಭಿನ್ನವಾದ ಡಿಎನ್ಎ ಹೊಂದಿರುವ ಮೊಟ್ಟೆ ಅಸ್ತಿತ್ವಕ್ಕೆ ಬಂದಿದೆಯಷ್ಟೇ.

    ಈ ಮೊಟ್ಟೆ ಇಂದಿನ ಕೋಳಿಯ ಮೂಲವಾಗಿದೆ. ಅಂದರೆ ಒಂದೇ ಸಲಕ್ಕೆ ಇದು ಸಾಧ್ಯವಾಗಲಿಲ್ಲ. ಬದಲಿಗೆ ಇದು ಅನೇಕ ವರ್ಷಗಳವರೆಗೆ ನಡೆದಿರುವ ಪ್ರಕ್ರಿಯೆಯಾಗಿದೆ. ಅದು ನಿಧಾನವಾಗಿ ಪರಿವರ್ತನೆಯಾಗುತ್ತಾ ಅಂದಿನ ಪ್ರೋಟೋ ಕೋಳಿ ಮೊಟ್ಟೆ, ಇಂದಿನ ಕೋಳಿಗೆ ಜನ್ಮ ನೀಡಲು ಪ್ರಾರಂಭಿಸಿದೆ. ಇದಿಷ್ಟು ಆಗಿರುವ ಕಾರಣ, ಈಗಿನ ಕೋಳಿ ಮೊಟ್ಟೆ ಎಂದು ನಾವೇನು ಹೇಳುತ್ತಿದ್ದೇವೋ, ಅದು ರೂಪಾಂತರಗೊಂಡ ನಂತರ ಆಗಿರುವ ಮೊಟ್ಟೆಯಿಂದಲೇ ಬೆಳೆದ ಕೋಳಿ. ಆದ್ದರಿಂದ ಮೊಟ್ಟೆಯೇ ಮೊದಲು ಎಂದಿದ್ದಾರೆ.

    ‘ನೈಜ ಹೋರಾಟಗಾರ ನೇತಾಜಿಯನ್ನೇ ಹಸ್ತಾಂತರಿಸಿದ ಕುತಂತ್ರಿಗಳು- ಸಾಕ್ಷಿ ನೋಡಿ… ಇನ್ನೊಂದು ಕೆನ್ನೆ ತೋರಿಸಿದ್ರೆ ಸಿಗೋದು ಭಿಕ್ಷೆ ಅಷ್ಟೇ…’

    ಪುನೀತ್‌ ಸಮಾಧಿ ಬಳಿ ಅಚ್ಚರಿ: ಎಲ್ಲಿಂದಲೋ ಬಂದು ಪ್ರದಕ್ಷಿಣೆ ಹಾಕಿ ಮರೆಯಾದ ನಾಟಿ ಕೋಳಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts