More

    ಹಾವೇರಿ ವೈದ್ಯ ಕಾಲೇಜಿನಲ್ಲಿ ಬೋಧಕರ ನೇಮಕಾತಿ- 79 ಹುದ್ದೆಗಳಿಗೆ ಆಹ್ವಾನ

    ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬೋಧಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕರ್ನಾಟಕ ಸರ್ಕಾರದ ಸೂಚನೆ ಅನ್ವಯ ರಾಜ್ಯದ ಸ್ವಾಯತ್ತ ಸಂಸ್ಥೆಗಳಲ್ಲಿ ನೀಡಲಾಗುತ್ತಿರುವ ವೇತನ ಮಾದರಿಯಲ್ಲೇ ವೇತನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳಲ್ಲಿ ಸಾಮಾನ್ಯವರ್ಗ, ಪ್ರವರ್ಗ-1, 2ಎ, 2ಬಿ,3ಎ, 3ಬಿ, ಎಸ್ಸಿ, ಎಸ್ಟಿ, ಗ್ರಾಮೀಣ, ಮಹಿಳಾ, ಮಾಜಿ ಸೈನಿಕ, ಕಲ್ಯಾಣ ಕರ್ನಾಟಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.

    ಹುದ್ದೆ ವಿವರ
    * ಪ್ರೊಫೆಸರ್​ – 5
    * ಅಸೋಸಿಯೇಟ್​ ಪ್ರೊಫೆಸರ್​ – 17
    * ಅಸಿಸ್ಟೆಂಟ್​ ಪ್ರೊಫೆಸರ್​ – 31
    * ಸೀನಿಯರ್​ ರೆಸಿಡೆಂಟ್ಸ್​ – 12
    * ಟ್ಯೂಟರ್ಸ್​ – 14

    ಯಾವೆಲ್ಲ ವಿಭಾಗಗಳಲ್ಲಿ ನೇಮಕ?: ಅಂಗರಚನಶಾಸ್ತ್ರ (ಅನಾಟಮಿ), ಅರಿವಳಿಕೆ ಶಾಸ್ತ್ರ, ಜೀವರಸಾಯನ ಶಾಸ್ತ್ರ, ಕಮ್ಯುನಿಟಿ ಮೆಡಿಸನ್​, ದಂತವೈದ್ಯಶಾಸ್ತ್ರ, ಚರ್ಮಶಾಸ್ತ್ರ, ರತರೋಗಶಾಸ್ತ್ರ ಮತ್ತು ಕುಷ್ಠ ರೋಗ, ತುರ್ತು ಔಷಧ, ವಿಧಿ-ವಿಜ್ಞಾನ ಔಷಧ, ಸಾಮಾನ್ಯ ಔಷಧ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಓಟೋ-ರೈನೋ ಲಾರಿಂಗೊಲಜಿ, ರೋಗಶಾಸ್ತ್ರ, ಶಿಶುವೈದ್ಯಶಾಸ್ತ್ರ, ಶರೀರ ಶಾಸ್ತ್ರ, ಮನೋವೈದ್ಯಶಾಸ್ತ್ರ, ರೇಡಿಯೋ- ರೋಗರ್ನಿಣಯ, ಕ್ಷಯ ಮತ್ತು ಎದೆ ರೋಗಗಳ ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಶೈಕ್ಷಣಿಕ ಅರ್ಹತೆ: ಎಲ್ಲ ಹುದ್ದೆಗೂ ಎಂಬಿಬಿಎಸ್​/ಎಂಡಿ/ ಎಂಸ್​ ಪದವಿ ಕೇಳಲಾಗಿದ್ದು, ಪ್ರೊಫೆಸರ್​ ಹಾಗೂ ಅಸೋಸಿಯೇಟ್​ ಪ್ರೊಫೆಸರ್​ ಹುದ್ದೆಗೆ ವೃತ್ತಿ ಅನುಭವ ಕೇಳಲಾಗಿದೆ.

    ವಯೋಮಿತಿ: ಪ್ರೊಫೆಸರ್​ ಹುದ್ದೆಗೆ ಗರಿಷ್ಠ 50 ವರ್ಷ, ಅಸೋಸಿಯೇಟ್​ ಪ್ರೊಫೆಸರ್​ಗೆ ಗರಿಷ್ಠ 45 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 43 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ಅರ್ಜಿ ಶುಲ್ಕ: ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 2000ರೂ. ಅನ್ನು ಹಾವೇರಿ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿ ಹೆಸರಿಗೆ ಅಥವಾ ಎಸ್​ಬಿಐ ಮೂಲಕ ಆನ್​ಲೈನ್​ ಪಾವತಿಯನ್ನು 27.8.2021ರ ಒಳಗಾಗಿ ಮಾಡಬೇಕಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಪಬ್ಲಿಕೇಷನ್​, ವೃತ್ತಿ ಅನುಭವ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಉಪನ್ಯಾಸಗಳ ಸಂಖ್ಯೆ ಆಧರಿಸಿ ಆಯ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 27.8.2021
    ಅಧಿಸೂಚನೆಗೆ: https://bit.ly/3meg030
    ಮಾಹಿತಿಗೆ: http://dme.karnataka.gov.in

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts