More

    ಗದಗ ಹಾವೇರಿ ಲೋಕಸಭಾ ಕ್ಷೇತ್ರ, ಜಾತಿ ಲೆಕ್ಕಾಚಾರದ ಲೆಕ್ಕ ಶುರು.

    ಶಿವಾನಂದ ಹಿರೇಮಠ ಗದಗ
    ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯಥಿರ್ಗಳ ಹೆಸರು ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ಕೂಡಿ ಕಳೆವ ಲೆಕ್ಕ ಶುರುವಾಗಿದೆ. ಅಭ್ಯಥಿರ್ಗಳ ವಿಷಯವಾಗಿ ಸಾಧಕ ಭಾದಕ ಚರ್ಚೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಅಭ್ಯಥಿರ್ಗಳು ತಮ್ಮ ಬುಜಂಗಬಲದ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ. ಈ ನಡುವೆ ಕೆ.ಇ ಕಾಂತೇಶ ಬಂಡಾಯ ಎದ್ದು ಶಿವಮೊಗ್ಗದಲ್ಲಿ ಪಕ್ಷೇತರ ಸ್ಪರ್ಧೆಗೆ ಅಣಿಯಾಗಿದ್ದರಿಂದ ಕ್ಷೇತ್ರದಲ್ಲಿ ಕುರುಬ ಮತದಾರರ ನಡೆ ಗೌಪ್ಯವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ವೀರಶೈವ ಲಿಂಗಾಯತರಿಗೆ ಮಣೆ ಹಾಕಿರುವುದರಿಂದ 2019ರ ಚುನಾವಣೆಗಿಂತಲೂ ಈ ಬಾರಿ “ಮತ’ ಸ್ವರೂಪ ವಿಭಿನ್ನ ರೂಪ ಪಡೆದುಕೊಳ್ಳುವ ನಿರೀೆ ಇದೆ.
    ಗ್ಯಾಂರಂಟಿ ಸಮಾವೇಶದ ಮೂಲಕ ಕಾಂಗ್ರೆಸ್​, ಪಕ್ಷದ ಕಾರ್ಯಕರ್ತರ ಸಮಾವೇಶಗಳ ಮೂಲಕ ಬಿಜೆಪಿ ಪಕ್ಷ ಚುನಾವಣಾ ಪ್ರಚಾರಕ್ಕೆ ಅಧಿಕೃತ ಮುದ್ರೆ ಒತ್ತಿದೆ. ಸಮುದಾಯ ಮುಖಂಡರನ್ನು, ಮಠಾಧೀಶರನ್ನು ತೆರೆಮರೆಯಲ್ಲಿ ಭೇಟಿ ಮಾಡುತ್ತಿರುವ ಅಭ್ಯಥಿರ್ಗಳು ಮತಭಿೆ ಕೇಳುತ್ತಿದ್ದಾರೆ. ಮೊದಲ ಹಂತದಲ್ಲಿ ಕಾರ್ಯಕರ್ತರನ್ನು ಭರವಸೆಗೆ ತೆಗೆದುಕೊಳ್ಳಲು ಕಾರ್ಯಕರ್ತರ ಸಮಾವೇಶ ಕೈಗೊಳ್ಳುವ ಮೂಲಕ ಅಭ್ಯಥಿರ್ಗಳು ಚುನಾವಣಾ ಪ್ರಚಾರಕ್ಕೆ ಅಧಿಕೃತ ಮುಂದಡಿ ಇಟ್ಟಿದ್ದಾರೆ.
    ಅಭ್ಯಥಿರ್ಗಳು ಹೆಸರು ಘೊಷಣೆ ನಂತರ ಕ್ಷೇತ್ರದಲ್ಲಿ ಅಭ್ಯಥಿರ್ಗಳ ಕುರಿತು ಹಲವು ವದಂತಿಗಳು ಕೇಳಿ ಬರುತ್ತಿರುವುದು ಸೂಜಿಗ. ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯಥಿರ್ ಆಗುತ್ತಿದ್ದಂತೆ, ಕಾಂಗ್ರೆಸ್​ ಅಭ್ಯಥಿರ್ಯನ್ನು ಬದಲಾಯಿಸಿ ಸಚಿವ ಎಚ್​.ಕೆ. ಪಾಟೀಲ ಅವರಿಗೆ ಟಿಕೆಟ್​ ನೀಡಲಾಗುತ್ತದೆ ಎಂಬ ರೆಕ್ಕೆಪುಕ್ಕ ಇಲ್ಲದ ವದಂತಿಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಈ ಬೆಳವಣಿಗೆಯಿಂದ ಕಾಂಗ್ರೆಸ್​ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.

    ನಿಗಿನಿಗಿ ಕೆಂಡ:
    ಕಳೆದ ಮೂರು ಚುನಾವಣೆಯಲ್ಲಿ ಲಿಂಗಾಯತರಲ್ಲದವರಿಗೆ ಟಿಕೆಟ್​ ನೀಡಿ ಕೈಸುಟ್ಟುಕೊಂಡಿದ್ದ ಕಾಂಗ್ರೆಸ್​ ಈ ಬಾರಿ ಲಿಂಗಾಯತರಿಗೆ ಟಿಕೆಟ್​ ನೀಡುವ ಮೂಲಕ ಬಿಜೆಪಿಗೆ ಚೆಕ್​ಮೆಟ್​ ನೀಡಿದ್ದು ಆಶ್ಚರ್ಯ ತರಿಸಿದೆ. ಈ ಹಿನ್ನೆಲೆ ಬಿಜೆಪಿಯೂ ಲಿಂಗಾಯತರಿಗೇ ಟಿಕೆಟ್​ ನಿಡುವ ಅನಿವಾರ್ಯತೆ ಸೃಷ್ಟಿಯಾಯಿತು. ಒಂದು ವೇಳೆ ಕಾಂಗ್ರೆಸ್​ ಪಕ್ಷ ಲಿಂಗಾಯತೇರರಿಗೆ ಟಿಕೆಟ್​ ನೀಡಿದ್ದರೆ, ಕಪಲ ಪಾಳಯದಲ್ಲಿ ಕಾಂತೇಶ್​ ಗೆ ಟಿಕೆಟ್​ ಲಭಿಸುವುದರಲ್ಲಿ ಅನುಮಾನ ಇರಲಿಲ್ಲ ಎಂಬುದು ಪಕ್ಷದೊಳಗಿನ ಮಾತು. ಲಿಂಗಾಯತರ ಮೇಲೆ ಬಿಎಸ್​ವೈ ಪ್ರಭಾವ ಇರುವುದರಿಂದ, ಕಾಂಗ್ರೆಸ್​ ಅಭ್ಯಥಿರ್ ಲಿಂಗಾಯತರಾದರೂ ಬಿಜೆಪಿಗೆ ನಷ್ಟವಿಲ್ಲ ಎಂಬ ಲೆಕ್ಕಾಚಾರ ಹೊಂದಿ ಬಿಜೆಪಿ ಪಕ್ಷ ಆತ್ಮತೃಪ್ತಿಯಲ್ಲಿದೆ. ಇನ್ನೂ, ಹಾವೇರಿ ಟಿಕೆಟ್​ ಕೈತಪ್ಪಿ ಶಿವಮೊಗ್ಗದಲ್ಲಿ ಬಂಡಾಯ ಬಂಡಿ ಹೂಡಿರುವ ಕಾಂತೇಶ್​ ನಡೆಯಿಂದ ಕ್ಷೇತ್ರದಲ್ಲಿ ಕುರುಬ ಮತಗಳ ನಡೆ ಎತ್ತಕಡೆ ಎಂಬ ಸುದ್ದಿ ಪಕ್ಷದೊಳಗಿನ ಪಡಸಾಲೆಯಲ್ಲಿ ಅಲೆದಾಡುತ್ತಿದೆ. ವಿಧಾನಸಭೆಗೂ, ಲೋಕಸಭೆಗೂ ಚುನಾವಣೆ ಭಿನ್ನತೆ ಇರುವುದರಿಂದ ಕುರುಬ ಮತಗಳು ಬಿಜೆಪಿಗೂ ಬೀಳುತ್ತವೆ ಎಂಬ ವಿಶ್ವಾಸ ಬಿಜೆಪಿಯಲ್ಲಿದೆ. ಆದರೆ, ಕುರುಬ ಸಮುದಾಯದ ಲಾಭ ಮಾಡಿಕೊಳ್ಳಲು ಕಾಂಗ್ರೆಸ್​ ಪಕ್ಷ ತನ್ನದೇ ವ್ಯೂಹಾತ್ಮಕ, ಚಕ್ರವ್ಯೂಹ ರಚಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಕುರುಬ ಮುಖಂಡರ ಜತೆ ಒಳಗೊಳಗೆ ಮುಖಾಮುಖಿ ಮಾತುಕತೆ ನಡೆಸುತ್ತಿದೆ. ಈ ಹಿನ್ನೆಲೆ ಕುರುಬರ ನಡೆ ಗೌಪ್ಯವಾಗಿದೆ.

    ಮತಬ್ಯಾಂಕ್​:
    ಕಾಂಗ್ರೆಸ್​&ಬಿಜೆಪಿ ಅಭ್ಯಥಿರ್ಗಳ ಹೆಸರು ಘೋಷಣೆ ನಂತರ ಕ್ಷೇತ್ರದಲ್ಲಿ ಒಂದಿಷ್ಟು ಸ್ಪಷ್ಟ ಚಿತ್ರಣ ಹೊರಬೀಳುತ್ತಿದೆ. ಅಹಿಂದ, ಲಿಂಗಾಯತ ಮತಬ್ಯಾಂಕ್​ ನಮ್ಮೊಟ್ಟಿಗೆ ಎಂದು ಕಾಂಗ್ರೆಸ್​ ಅಭ್ಯಥಿರ್ ಮತ್ತು ಕಾರ್ಯಕರ್ತರು ಬೆನ್ನು ತಟ್ಟಿಕೊಳ್ಳುತ್ತಿದ್ದರೆ, ವೀರಶೈವ ಲಿಂಗಾಯತ, ಹಿಂದೂಳಿದ ಮತ್ತು ದಲಿತ, ಬಲಗೈ ಮತಗಳು ನಮ್ಮೊಟ್ಟಿಗಿವೆ ಎಂದು ಬಿಜಪಿ ಸಮಾಧಾನ ಪಟ್ಟುಕೊಳ್ಳುತ್ತಿದೆ. ಪ್ರಚಾರದ ಸಂದರ್ಭದಲ್ಲಿ ಜಾತಿ ಗಣತಿ ಲಕ್ಕಕ್ಕೆ ಸಿಕ್ಕರೂ, ಮತ ಗಣತಿ ಲೆಕ್ಕಕ್ಕೆ ಸಿಗಲಾರದಷ್ಟು ಈ ಬಾರಿ ಮತಬ್ಯಾಂಕ್​ ವಿಭಿನ್ನ ಸ್ವರೂಪ ಪಡೆಯುವುದಂತೂ ಸತ್ಯ.

    ನಿರ್ಣಾಯಕರು ಯಾರು?
    ವೀರಶೈವ ಲಿಂಗಾಯತ, ಕುರುಬ, ಮುಸ್ಲಿಂ ಮತ್ತು ದಲಿತ ಸಮುದಾಯದ ಸಂಪ್ರದಾಯಿಕ ಮತಗಳನ್ನು ರಾಷ್ಟ್ರೀಯ ಪಕ್ಷಗಳು ಸರಳವಾಗಿ ಸೆಳೆದು, ಮತಗುಚ್ಚ ಹೆಚ್ಚಿಸಿಕೊಳ್ಳಬಹುದು. ಆದರೆ, ಸಣ್ಣ ಸಣ್ಣ ಸಮುದಾಯಗಳೇ ಪಕ್ಷದ ಅಭ್ಯಥಿರ್ಗಳನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವುದು ಸತ್ಯ. 5 ರಿಂದ 30 ಸಾವಿರ ಒಳಗೆ ಮತಬ್ಯಾಂಕ್​ ಹೊಂದಿರುವ ಮರಾಠ, ದೇವಾಂಗ, ಕುರುವಿನಶೆಟ್ಟಿ, ಬ್ರಾಹ್ಮಣ, ವೇಮನ ರೆಡ್ಡಿ ಸೇರಿದಂತೆ ಇತರೆ ಸಮುದಾಯಗಳಬ್ಬಯ ಬರವಸೆಗೆ ತೆಗೆದುಕೊಳ್ಳುವ ಅಗತ್ಯತೆ ಇದೆ.

    ಬಿಜೆಪಿ ಕುರಿತು ಒಂದಿಷ್ಟು:
    ಮಾಜಿ ಸಿಎಂ, ಶಾಸಕ ಬಸವರಾಜ ಬೊಮ್ಮಾಯಿ ರಾಜಕೀಯ ನಡೆ ಎಲ್ಲರಿಗೂ ಕುತೂಹಲ ಮತ್ತು ಆಶ್ಚರ್ಯ ತರಸುವಂತದ್ದು. ಮೂಲತಃ ಜನತಾ ಪರಿವಾರದಿಂದ ಬಂದಿರುವ ಬೊಮ್ಮಾಯಿ ಅವರಿಗೆ, ವಿರೋಧಪಕ್ಷದಲ್ಲೂ ಆಪ್ತಮಿತ್ರರಿದ್ದಾರೆ. ಬೊಮ್ಮಾಯಿ ಆಪಮಿತ್ರ, ಮಾಜಿ ಲೋಕೋಪಯೋಗಿ ಸಚಿವ, ಶಾಸಕ ಸಿ.ಸಿ. ಪಾಟೀಲ ಅವರು ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳುವುದು ನಿಶ್ಚಿತ. ಅದೇ ರೀತಿ ಹಾವೇರಿ ಭಾಗದಲ್ಲಿ ಬಿ.ಸಿ. ಪಾಟೀಲ ಸೇರಿದಂತೆ ಇತರರು ಬೊಮ್ಮಾಯಿ ಕೈಹಿಡಿಯಲಿದ್ದಾರೆ. ಬಿಎಸ್​ವೈ ಬಳಗದಲ್ಲಿ ಗುರುತಿಸಿಕೊಂಡಿರುವ ಬೊಮ್ಮಾಯಿ ಮತ್ತು ಸಿ.ಸಿ. ಪಾಟೀಲ ಅವರು ಲಿಂಗಾಯತದ ಎಲ್ಲ ಒಳಪಂಗಡಗಳನ್ನು ಭರವಸೆ ತೆಗೆದುಕೊಂಡೇ ಚುನಾವಣಾ ಕಣದಲ್ಲಿ ಮುಂದಡಿ ಇಡುತ್ತಾರೆ.

    ಕಾಂಗ್ರೆಸ್​ ಕುರಿತು ಒಂದಿಷ್ಟು: ಮೂಲತಃ ಲೆ$್ಮಶ್ವರ ಪಟ್ಟಣದವರಾದ ಆನಂದ ಗಡ್ಡದೇವರಮಠ ಅವರು ಸ್ಥಳಿಯ ರಾಜಕಾರಣದಲ್ಲಿ ಹೊಸಬರು. ತಂದೆ, ಮಾಜಿ ಶಾಸಕ ಜಿ.ಎಸ್​. ಗಡ್ಡದೇವರಮಠ ಅವರ ರಾಜಕೀಯ ಪ್ರಭಾವ ಲೋಕಸಭಾ ಕ್ಷೇತ್ರದ ಲೆ$್ಮಶ್ವರ ಮತ್ತು ಶಿರಹಟ್ಟಿ ಕ್ಷೇತ್ರಕ್ಕೆ ಸೀಮಿತ ಆಗಿರುವುದರಿಂದ ಕಾಂಗ್ರೆಸ್​ ಅಭ್ಯಥಿರ್ಯೂ ಸಚಿವ ಎಚ್​.ಕೆ. ಪಾಟೀಲ ಅವರ ಅವಲಂಬಿತರಾಗಿದ್ದಾರೆ. 8 ವಿಧಾನಸಭಾ ಕ್ಷೇತ್ರದ ತಳಮಟ್ಟದ ರಾಜಕಾರಣದ ನಡೆ ಕುರಿತು ಅನುಭವ ಹೊಂದಿಲ್ಲ. ಮೊದಲ ಬಾರಿ ಲೋಕಸಭೆಗೆ ಧುಮಿಕಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಎಚ್​.ಕೆ. ಪಾಟೀಲ ನಿವಾಸದಲ್ಲಿ ಕ್ಷೇತ್ರದ ಶಾಸಕರೆಲ್ಲ ಸಭೆ ಸೇರಿ ಚುನಾವಣೆ ಕುರಿತು ಚರ್ಚೆ ನಡೆಸಿದ್ದು ಹೊಸ ಬೆಳವಣಿಗೆ.

    ಬಿಜಪಿ +

    • ವಿಧಾನ ಪರಿಷತ್​ ಸದಸ್ಯರಾಗಿ, ಶಿಗ್ಗಾವಿ ಶಾಸಕರಾಗಿ ಲೋಕಸಭಾ ಕ್ಷೇತ್ರಕ್ಕೆ ಚಿರಪರಿಚಿತ.
    • ಚುನಾವಣೆ ಸಂದರ್ಭದಲ್ಲಿ ಕೆಲಸಮಾಡುವ ಬಸವರಾಜ್ಯ ಬೊಮ್ಮಾಯಿ ಅತ್ಯಾಪ್ತ ಬಳ ಕ್ಷೇತ್ರದಲ್ಲಿದ್ದಾರೆ.
    • ಮೋದಿ ಬ್ರಾ$್ಯಂಡ್​ ವ್ಯಾಲ್ಯೂವ್​ ಜತೆಗೆ ಕ್ಷೇತ್ರದಲ್ಲಿ ಹಿಂದುತ್ವದ ಗಾಳಿ

    ಬಿಜಪಿ –

    • ಎರಡನೇ ಹಂತದ ನಾಯಕರಿಂದ ಹೊಂದಾಣಿಕೆ ರಾಜಕಾರಣ
    • ಲೋಕಸಭೆಯ 7 ವಿಧಾನಸಭೆ ಕ್ಷೇತ್ರದಲ್ಲಿ ಕೈ ಶಾಸಕರ ಆಡಳಿತ
    • ಕುರುಬ, ದಲಿತ ಮತಗಳ ಒಲೈಕೆಗೆ ಕಸರತ್ತು.

    ಕಾಂಗ್ರೆಸ್​ +

    • ಎಚ್​.ಕೆ. ಪಾಟೀಲ ಪ್ರಭಾವ. ಕೈ ಶಾಸಕರ ಆಡಳಿತ
    • ಸಂಪನ್ಮೂಲದ ಹರಿವು. ಗ್ಯಾರಂಟಿ ಯೋಜನೆ ಲಾಭ
    • ಲಿಂಗಾಯತರನ್ನು ಸೆಳೆಯಲು ಲಿಂಗಾಯತ ಅಭ್ಯಥಿರ್ಗೆ ಟಿಕೆಟ್​

    ಕಾಂಗ್ರೆಸ್​ –

    • ಮೊದಲ ಹಂತದ ನಾಯಕರ ಮೇಲೆ ಅಭ್ಯಥಿರ್ಗೆ ಅತೀಯಾದ ಆತ್ಮವಿಶ್ವಾಸ
    • ಕ್ಷೇತ್ರಕ್ಕೆ ಹೊಸ ಪರಿಚಯ. ಅಭ್ಯಥಿರ್ಯಿಂದ ಅವಲಂಭನೆ ರಾಜಕಾರಣ
    • ತಂದೆ ಬಳುವಳಿ ರಾಜಕಾರಣ ಹೊರತುಪಡಿಸಿ ಅನುಭವದ ಕೊರತೆ.

    =====

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts